ಬೆಂಗಳೂರು | ಟೋಲರ್ಸ್ ವಿಚಾರ ಬಿಟ್ಟು ಪಾಸಿಟಿವ್ ಆಗಿ ನೋಡಿ. ನಮ್ಮ ನೂನ್ಯತೆಗಳನ್ನ ಬಿಡಿ, ನಾವೇನು ಕೆಲಸ ಮಾಡಿದ್ದೇವೆ ನೋಡಿ. ಚಿಕ್ಕಿಯಿಂದ ಅಟೆಂಡೆನ್ಸ್ ಜಾಸ್ತಿ ಆಗಿದೆಯಲ್ಲ, ಅದರ ಜೊತೆ ಹಲವು ಕಾರ್ಯಕ್ರಮ ಇದೆ. ಮಕ್ಕಳಿಗೆ ಎಲ್ಲ ಸೌಕರ್ಯಗಳು ಸಿಗುತ್ತಿದೆ. ನೆಗೆಟಿವ್ ಬಿಟ್ಟು ಇಲಾಖೆಯ ಪಾಸಿಟಿವ್ ಅಂಶಗಳನ್ನು ನೋಡಿ. ಇದರಿಂದ ಮಕ್ಕಳಿಗೂ ಹೆಚ್ಚಿನ ಅನುಕೂಲ ಆಗುತ್ತದೆ ಎಂದು ಟ್ರೋಲರ್ಸ್ ವಿರುದ್ಧ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ ಸಚಿವ ಮಧು ಬಂಗಾರಪ್ಪ (Madhu Bangarappa).
ಗೆಳತಿಯೊಂದಿಗೆ ಹಾರೋಣ ಎಂಬ ಶೀರ್ಷಿಕೆಯನ್ನು ಟ್ರೋಲ್ ಮಾಡಿದ್ದರ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾನು ಟ್ರೋಲರ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ. ನಾವು ಮಕ್ಕಳಿಗೆ ಏನು ಒಳ್ಳೆಯದು ಕೊಟ್ಟೆವು ಎಂಬುದು ಮುಖ್ಯ. ರಾಷ್ಟ್ರಮಟ್ಟದಲ್ಲಿ ಸಹೇಲಿ ಕಿ ಉಡಾನ್, ಫ್ಲೈಯಿಂಗ್ ವಿತ್ ಫ್ರೆಂಡ್ ಎಂಬ ಹೆಸರು ಇದೆ ಅದನ್ನು ಕನ್ನಡಕ್ಕೆ ಅನುವಾದ ಮಾಡುವಾಗ, ಗೆಳತಿಯೊಂದಿಗೆ ಹಾರೋಣ, ಗೆಳತಿಯರೊಂದಿಗೆ ನಲಿಯೋಣ, ಗೆಳತಿಯೊಂದಿಗೆ ಆಡೋಣ ಹೀಗೆ ಹಲವಾರು ಹೆಸರುಗಳ ಬಗ್ಗೆ ಚರ್ಚೆ ಆಯಿತು.
ಅಂತಿಮವಾಗಿ ಗೆಳತಿಯೊಂದಿಗೆ ಹಾರೋಣ ಎಂಬ ಹೆಸರಿಗೆ ಹೆಚ್ಚು ಒಲವು ವ್ಯಕ್ತವಾಯಿತು. ಹಾಗಾಗಿ ಈ ಹೆಸರನ್ನು ಅಂತಿಮ ಗೊಳಿಸಿದೆವು. ಟ್ರೋಲರ್ ಗಳು ಏನೇ ನೆಗೆಟಿವ್ ಆಗಿ ಟೀಕೆ ಮಾಡಿದ್ರೂ ನಾನಂತೂ ತಲೆ ಕೆಡಿಸಿಕೊಳ್ಳಲ್ಲ ನನ್ನ ಕೆಲಸ ಏನಿದೆ ಅದನ್ನು ಮಾಡುತ್ತೇನೆ ಎಂದು ಕೌಂಟರ್ ನೀಡಿದ್ದಾರೆ.