Thursday, December 12, 2024
Homeರಾಷ್ಟ್ರೀಯಸೇನಾ ಟ್ರಕ್ ಮೇಲೆ ಬಡಿದ ಸಿಡಿಲು : ಸುಟ್ಟು ಕರಕಲಾದ ಯೋಧರು..!

ಸೇನಾ ಟ್ರಕ್ ಮೇಲೆ ಬಡಿದ ಸಿಡಿಲು : ಸುಟ್ಟು ಕರಕಲಾದ ಯೋಧರು..!

ಜಮ್ಮು ಮತ್ತು ಕಾಶ್ಮೀರ | ರಾಜ್ಯದ ಪೂಂಚ್‌ನಲ್ಲಿ ಗುರುವಾರ ಭಾರಿ ಅಪಘಾತ ಸಂಭವಿಸಿದೆ. ಮಿಂಚಿನಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇನಾ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ಅಪಘಾತದಲ್ಲಿ 3-4 ಯೋಧರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಟ್ರಕ್‌ಗೆ ಸಿಡಿಲು ಬಡಿದಾಗ, ವಾಹನವು ಭಟಾ ಧಾದ್ಯ ಪ್ರದೇಶದಲ್ಲಿ ಜಮ್ಮು-ಪೂಂಚ್ ಹೆದ್ದಾರಿಯಲ್ಲಿ ಹಾದು ಹೋಗುತ್ತಿತ್ತು ಎನ್ನಲಾಗಿದೆ.

ಅಧಿಕೃತ ಮೂಲಗಳ ಪ್ರಕಾರ ಟ್ರಕ್‌ನಲ್ಲಿ 10-12 ಯೋಧರಿದ್ದರು. ಟ್ರಕ್‌ಗೆ ಸಿಡಿಲು ಬಡಿದ ನಂತರ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅದರಲ್ಲಿ ಕುಳಿತಿದ್ದ ಯೋಧರು ಸುಟ್ಟು ಕರಕಲಾಗಿದ್ದಾರೆ. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪ್ರಕಾರ, ಈ ಸೇನಾ ವಾಹನದಲ್ಲಿ ಶಸ್ತ್ರಾಸ್ತ್ರಗಳ ಹೊರತಾಗಿ, ಡೀಸೆಲ್ ಕೂಡ ಇತ್ತು, ಇದರಿಂದಾಗಿ ಬೆಂಕಿ ಮತ್ತಷ್ಟು ಹೊತ್ತಿಕೊಂಡಿದೆ. ಈ ಅವಘಡ ಸಂಭವಿಸಿದ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಮಳೆಯಾಗುತ್ತಿದ್ದರೂ ಟ್ರಕ್ ನ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ.

ಸೇನೆ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಘಟನೆ ಕುರಿತು ಸೇನೆಯಿಂದ ಇದುವರೆಗೂ ಯಾವುದೇ ಹೇಳಿಕೆ ಬಂದಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಘಟನೆಯ ವೀಡಿಯೋ ಕೂಡ ಹೊರಬಿದ್ದಿದ್ದು, ಸೇನೆಯ ವಾಹನವು ಬೆಂಕಿಯಿಂದ ಸುತ್ತುವರಿದಿರುವುದನ್ನು ಕಾಣಬಹುದು. ದಾರಿಯಲ್ಲಿ ಹೋಗುತ್ತಿದ್ದ ಜನರು ಬೆಂಕಿಯನ್ನು ನಂದಿಸುವಲ್ಲಿ ಸಹಾಯ ಮಾಡುತ್ತಿರುವುದು ಕಂಡುಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments