ಬೆಂಗಳೂರು | ಬೊಮ್ಮನಹಳ್ಳಿ (Bommanahalli) ಸಮೀಪದ ಕೂಡ್ಲುಗೇಟ್‌ನಲ್ಲಿ ಕಾಣಿಸಿಕೊಂಡ ಚಿರತೆಯನ್ನು (leopard) ಸೆರೆ ಹಿಡಿಯಲು ಸುಮಾರು 70 ಮಂದಿ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಸತತ ಮೂರು ದಿನ ಕಾರ್ಯಾಚರಣೆ ನಡೆಸಿದ ನಂತರ ಯಶಸ್ವಿಯಾಗಿದ್ದಾರೆ.
ಬೆಂಗಳೂರಿನ ಜನರನ್ನು ಕಳೆದ ಮೂರು ದಿನಗಳಿಂದ ನಿದ್ದೆಗೆಡಿಸಿದ ಚಿರತೆಯು ಇಂದು(ನ.01) ಮಧ್ಯಾಹ್ನದ ವೇಳೆಗೆ ಸೆರೆ ಸಿಕ್ಕಿದೆ. ರಾತ್ರಿ ವೇಳೆ ಕಾಣಿಸಿಕೊಳ್ಳುವ ಚಿರತೆ ಹಗಲು ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮಾಡುವ ವೇಳೆ ಸಿಗದೇ ತಪ್ಪಿಸಿಕೊಳ್ಳುತ್ತಿತ್ತು. ಲೆಪರ್ಡ್ಸ್ ಟಾಸ್ಕ್ ಫೋರ್ಸ್ ತಂಡ ಮತ್ತು ಥರ್ಮಲ್ ಡ್ರೋನ್ ಟೀಂ ಚಿರತೆಗಾಗಿ ತೀವ್ರ ಹುಡುಕಾಟ ನಡೆಸಿತ್ತು.
ಆದರೆ ಎರಡು ದಿನವಾದರೂ ಚಿರತೆ ಪತ್ತೆಯಾಗದೆ ಇರುವುದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗುವಂತೆ ಮಾಡಿತ್ತು. ಆದರೆ, ಮೂರು ದಿನಗಳ ನಂತರ ಈಗ ಚಿರತೆ ಸೆರೆಯಾಗಿದ್ದು, ಸ್ಥಳೀಯ ಜನರು ನಿಟ್ಟುಸಿರು ಬಿಡವಂತಾಗಿದೆ.