ತುಮಕೂರು | ಕುಣಿಗಲ್ ತಾಲ್ಲೂಕು ಎಡೆಯೂರು ಶ್ರೀ ಸಿದ್ದಲಿಂಗೇಶ್ವರಸ್ವಾಮಿ (Edeyur Sri Siddalingeshwar Swami) ಕ್ಷೇತ್ರದಲ್ಲಿ ಡಿಸೆಂಬರ್ 12 ರಂದು ಕಾರ್ತಿಕ ಅಮಾವಾಸ್ಯೆ (Kartika Amavasya) ಇರುವುದರಿಂದ ಸಂಜೆ 6 ಗಂಟೆಗೆ ಶ್ರೀ ಸಿದ್ದಲಿಂಗೇಶ್ವರಸ್ವಾಮಿಯವರಿಗೆ ಲಕ್ಷದೀಪೋತ್ಸವ (Lakshadeepotsava) ಸೇವೆಯನ್ನು ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ತಿಳಿಸಿದ್ದಾರೆ.
Electoral Roll | 1 ಲಕ್ಷ ಮತದಾರರನ್ನು ಕೈ ಬಿಟ್ಟ ಚುನಾವಣಾ ಆಯೋಗ, ಕಾರಣ ಏನು ಗೊತ್ತಾ..? – karnataka360.in
ಲಕ್ಷದೀಪೋತ್ಸವದ ಒಂದು ದೀಪಕ್ಕೆ 35 ರೂ. ಸೇವಾ ದರ ನಿಗಧಿಪಡಿಸಿದೆ ಹಾಗೂ 500 ರೂ. ಪುದುವಟ್ ಸೇವಾ ಠೇವಣಿಯಲ್ಲಿ ತೊಡಗಿಸಿದಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯ ಲಕ್ಷದೀಪೋತ್ಸದಂದು ಒಂದು ದೀಪವನ್ನು ಹಚ್ಚಿಸುವ ಸೇವಾ ಅವಕಾಶವಿದೆ.
ಅಂದು ಸಂಜೆ 5.30 ಗಂಟೆಗೆ ಲಕ್ಷದೀಪೋತ್ಸವದ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಸಮಾರಂಭಕ್ಕೆ ಸ್ವಾಮೀಜಿಗಳು, ಗಣ್ಯ ವ್ಯಕ್ತಿಗಳು ಸೇರಿದಂತೆ ಸಹಸ್ರಾರು ಭಕ್ತಾಧಿಗಳು ಆಗಮಿಸಲಿದ್ದಾರೆ. ರಾತ್ರಿ 10 ಗಂಟೆಗೆ ಬೆಳ್ಳಿಪಲ್ಲಕ್ಕಿ ಉತ್ಸವ ರಾತ್ರಿಯಿಡಿ ಜರುಗಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ದೇವಾಲಯದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.