ತುಮಕೂರು | ತುಮಕೂರು (Tumkur) ಜಿಲ್ಲೆಯ ಕುಣಿಗಲ್ (Kunigal) ಪಟ್ಟಣದ ಸಿದ್ಧಾರ್ಥ ಪ್ರೌಢಶಾಲೆ ಪಕ್ಕದ ರಸ್ತೆಯಲ್ಲಿ ಸಿಲಿಂಡರ್ ಸ್ಫೋಟವಾಗಿದ್ದು (Cylinder detonation) ಸುಮಾರು 6 ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ಹೌದು,,, ಕುಣಿಗಲ್ ಪಟ್ಟಣದ ರವಿಕುಮಾರ್ ಎಂಬುವರ ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಪೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ಮನೆಯ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ. ಇನ್ನೂ ಸ್ಪೋಟದ ಶಬ್ದ ಕೇಳಿ ನೋಡಲು ಮನೆಗೆ ಬಂದವರಿಗೆ ಕೂಡ ಗಾಯಗಳಾಗಿವೆ.
ಸಮೀನ(46), ಕುಶಾಲ್ (11) ಗಂಭೀರ ಗಾಯಗಳಾಗಿದ್ದು, ಮಂಜಮ್ಮ (42), ಶಿವಣ್ಣ (45), ಶ್ರುತಿ (45) ಮತ್ತು ಹೇಮಲತಾ (16) ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಇನ್ನೂ ಘಟನೆಯಿಂದ ಲಕ್ಷಾಂತರ ರೂ ನಷ್ಟವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವ ಕೆಲಸ ಮಾಡಿದ್ದಾರೆ.