ತುಮಕೂರು | ತುಮಕೂರು ಗ್ರಾಮಾಂತರ ವಿಭಾಗದ ಕೆಸರಮಡು ಗ್ರಾಮದಲ್ಲಿ ಪಿಡಬ್ಲ್ಯೂಡಿ ರಸ್ತೆ ಪಕ್ಕ ಇರುವ ಗ್ರಾಮ ಠಾಣ ಜಾಗದಲ್ಲಿ ರಾಜ್ಯ ವಕ್ಫ್ ಬೋರ್ಡ್ ನಿಂದ ತಾತ್ಕಾಲಿಕವಾಗಿ ಕರಗಲಮ್ಮ ಜಾತ್ರೆ ನಡೆಯದಂತೆ ತಹಸೀಲ್ದಾರ್ ರವರಿಗೆ ಪತ್ರವನ್ನು ಕಳುಹಿಸಲಾಗಿತ್ತು. ಅದರಂತೆ ಎಸಿ ಹೋಟೆಲ್ ಶಿವಪ್ಪನವರು ಸಹ ತಹಸೀಲ್ದಾರ್ ಅವರ ಯಥಾ ಸ್ಥಿತಿಯನ್ನು ಪಾಲನೆ ಮಾಡಿ ಜಾತ್ರೆ ನಡೆಯಬಾರದು ಎಂದು ಆದೇಶ ನೀಡಿದ್ದರು.
ಪಟ್ಟು ಬಿಡದ ಗ್ರಾಮಸ್ಥರು ಎಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಿ ಕರಗಲಮ್ಮ ಉತ್ಸವ ನಡೆಯುವಂತೆ ತಹಸೀಲ್ದಾರ್ ಗೆ ಹೇಳಿಸಿ ಶುಕ್ರವಾರ ಶಾಂತಿಯುತವಾಗಿ ಮುಂಜಾನೆ 7 ರಿಂದ 11 ಗಂಟೆಯವರೆಗೆ ಕರಗಲಮ್ಮ ಉತ್ಸವವನ್ನು ಎಲ್ಲಾ ಮಹಿಳೆಯರು ಗ್ರಾಮಸ್ಥರು ಸೇರಿ ನೆರವೇರಿಸಿದ್ದಾರೆ.
ಕರಗಲಮ್ಮ ಜಾತ್ರೆಯನ್ನು ನಡೆಯದಂತೆ ವಕ್ಫ್ ಬೋರ್ಡ್ ನವರು ಎಷ್ಟೇ ಪತ್ರ ನೀಡಿ ಜಾತ್ರಾ ಮಹೋತ್ಸವ ನಡೆಯದಂತೆ ತಹಸೀಲ್ದಾರ್ ಅವರು ತಡೆ ಹಿಡಿದಿದ್ದರು, ಆದರೆ ತುಮಕೂರು ಗ್ರಾಮಾಂತರ ಶಾಸಕರು, ಸಹಕಾರ ಸಚಿವ ರಾಜಣ್ಣನವರು ಅನುಮತಿ ನೀಡಿ, ಮೌಖಿಕವಾಗಿ ಜಾತ್ರೆ ನಡೆಸುವಂತೆ ಸೂಚನೆ ನೀಡಿದರು ಎಂದು ರವೀಶ್ ಹೇಳಿದ್ರು.
ಡಿ ವೈ ಎಸ್ ಪಿ ಶೀನಿವಾಸ ಗೌಡ್ರು, ಸರ್ಕಲ್ ಇನ್ಸ್ಪೆಕ್ಟರ್ ರಾಜೀವ್, ಸಬ್ ಇನ್ಸ್ಪೆಕ್ಟರ್ ರೋಹಿಣಿ ಅವರು ಇಂದು ಗಲಾಟೆ ಮಾಡಿಕೊಳ್ಳಬೇಡಿ ಎಂದು ಸೂಚನೆ ನೀಡಿ ಅನುಮತಿ ನೀಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ ಅವರು ಸಹ ಆಗಮಿಸಿ ಪೂಜೆ ಸಲ್ಲಿಸಿದ್ದರು ಮತ್ತು ಸುಸೂತ್ರವಾಗಿ ಜಾತ್ರೆ ನಡೆಯಿತು ಎಂದು ಕೆಎಚ್ ಗಂಗಾಧರ್, ಮಾಜಿ ಪಂಚಾಯತ್ ಅಧ್ಯಕ್ಷರು ಹೇಳಿದರು.
ಒಟ್ಟಿನಲ್ಲಿ ಯಾವುದೇ ಕೋಮು ಗಲಭೆಗಳಿಲ್ಲದೆ ಸುಮಾರು 250 ಪೊಲೀಸರ ನಿಯೋಜಕತ್ವದಲ್ಲಿ ಶಾಂತಿಯುತವಾಗಿ ಕರಗಲಮ್ಮ ಉತ್ಸವ ಎಲ್ಲಾ ಗ್ರಾಮಸ್ಥರ ಸಮ್ಮುಖದಲ್ಲಿ ಸುಸೂತ್ರವಾಗಿ ನಡೆಯಿತು.