ನವದೆಹಲಿ | ಮದ್ಯ ಹಗರಣಕ್ಕೆ (Alcohol scam) ಸಂಬಂಧಿಸಿದ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ (Tihar Jail) ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ. ಕವಿತಾ (Kavitha) ಅವರು ಶುಕ್ರವಾರ ನ್ಯಾಯಾಲಯದ (Court) ಮೆಟ್ಟಿಲೇರಿದ್ದರು. ಆದೇಶದ ಹೊರತಾಗಿಯೂ, ಜೈಲು ಆಡಳಿತವು ತಮಗೆ ಮನೆಯಲ್ಲಿ ಬೇಯಿಸಿದ ಆಹಾರ ಮತ್ತು ಹಾಸಿಗೆಗಳನ್ನು ಒದಗಿಸಿಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಮ್ಮ ಕನ್ನಡಕ ಮತ್ತು ಜಪಮಾಲೆಯನ್ನು ಜೈಲಿನ ಆವರಣದೊಳಗೆ ತೆಗೆದುಕೊಂಡು ಹೋಗಲು ತಿಹಾರ್ ಜೈಲು ಅಧೀಕ್ಷಕರಿಗೆ ಮನವಿ ಮಾಡಿದ್ದಾರೆ. ತೆಲಂಗಾಣ ಮಾಜಿ ಸಿಎಂ ಕೆ. ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿತ್ತು. ಇತ್ತೀಚೆಗಷ್ಟೇ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದಾರೆ. ಕವಿತಾ ದಕ್ಷಿಣ ಭಾರತದ ಲಾಬಿಯ ಭಾಗವಾಗಿದ್ದರು ಎಂದು ಇಡಿ ಹೇಳುತ್ತದೆ.
ನ್ಯಾಯಾಂಗ ಬಂಧನದ ಅವಧಿಯಲ್ಲಿ ಚಪ್ಪಲಿ, ಬೆಡ್ಶೀಟ್ಗಳು, ಪುಸ್ತಕಗಳು, ಹೊದಿಕೆಗಳು, ಪೆನ್ನುಗಳು, ಆಭರಣಗಳು, ಔಷಧಗಳು ಇತ್ಯಾದಿಗಳನ್ನು ಒದಗಿಸುವಂತೆ ತಿಹಾರ್ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕವಿತಾ ಮನವಿ ಮಾಡಿದ್ದಾರೆ. ಮಾರ್ಚ್ 26 ರ ಆದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ನ್ಯಾಯಾಲಯದ ನಿರ್ದೇಶನದಂತೆ ಯಾವುದೇ ವಸ್ತುಗಳನ್ನು ಅರ್ಜಿದಾರರಿಗೆ ಲಭ್ಯವಾಗಿಲ್ಲ ಎಂದು ಹೇಳಲಾಗಿದೆ. ದೂರನ್ನು ಗಮನಿಸಿದ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಗುರುವಾರ ತಿಹಾರ್ ಜೈಲು ಅಧಿಕಾರಿಗಳಿಂದ ಪ್ರತಿಕ್ರಿಯೆ ಕೇಳಿದ್ದು ಪ್ರಕರಣದ ವಿಚಾರಣೆಯನ್ನು ಮಾರ್ಚ್ 30, 2024 ರಂದು ನಿಗದಿಪಡಿಸಿದ್ದಾರೆ.
ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಇಡಿ ಮಾರ್ಚ್ 15 ರಂದು ತೆಲಂಗಾಣ ವಿಧಾನ ಪರಿಷತ್ತಿನ ಎಂಎಲ್ ಸಿ ಕೆ. ಕವಿತಾ ಅವರನ್ನು ಹೈದರಾಬಾದ್ನಲ್ಲಿರುವ ಅವರ ನಿವಾಸದಲ್ಲಿ ಬಂಧಿಸಲಾಗಿದೆ. ಇಡಿ ಕಸ್ಟಡಿ ಮುಗಿದ ನಂತರ, ಅವರನ್ನು ನ್ಯಾಯಾಂಗ ಬಂಧನದಲ್ಲಿ ಜೈಲಿಗೆ ಕಳುಹಿಸಲಾಯಿತು. ಮಾರ್ಚ್ 26 ರಂದು ತನ್ನ ಆದೇಶದಲ್ಲಿ, ರೂಸ್ ಅವೆನ್ಯೂ ನ್ಯಾಯಾಲಯವು ಜೈಲಿನಲ್ಲಿರುವ ಬಿಆರ್ಎಸ್ ನಾಯಕಿಗೆ ಮನೆ ಆಹಾರ ಮತ್ತು ಔಷಧಿಗಳನ್ನು ಒದಗಿಸುವ ಅರ್ಜಿಯನ್ನು ಅನುಮೋದಿಸಿತ್ತು.