Thursday, December 12, 2024
Homeಜಿಲ್ಲೆಕೊಡಗುದಕ್ಷಿಣ ಕಾಶ್ಮೀರ ಮಡಿಕೇರಿಯಲ್ಲಿ ಕರ್ನಾಟಕದ ಮೊದಲ ಉದ್ದದ ಗಾಜಿನ ಸೇತುವೆ ಉದ್ಘಾಟನೆ..!

ದಕ್ಷಿಣ ಕಾಶ್ಮೀರ ಮಡಿಕೇರಿಯಲ್ಲಿ ಕರ್ನಾಟಕದ ಮೊದಲ ಉದ್ದದ ಗಾಜಿನ ಸೇತುವೆ ಉದ್ಘಾಟನೆ..!

ಕೊಡಗು | ದಕ್ಷಿಣ ಕಾಶ್ಮೀರ, ಪ್ರವಾಸಿಗರ ಸ್ವರ್ಗ ಕೊಡಗಿಗೆ ಆಗಮಿಸಿದರೆ ಇನ್ನು ಗಾಜಿನ ಸೇತುವೆ ಮೇಲೆ ನಡೆದು ಪ್ರಕೃತಿಯ ರಮಣೀಯತೆಯನ್ನು ಸವಿಯಬಹುದು. ಆ ಮೂಲಕ ಪ್ರಕೃತಿ ಸೌಂದರ್ಯ ಆಸ್ವಾದನೆಯ ಹೊಸತೊಂದು ಅನುಭವವನ್ನು ಪಡೆಯಬಹುದು. ಹೌದು ಕರ್ನಾಟಕದ ಮೊದಲ ಉದ್ದದ ಗಾಜಿನ ಸೇತುವೆ ಮಡಿಕೇರಿಯಲ್ಲಿ ಉದ್ಘಾಟನೆಗೊಂಡಿದ್ದು ಪ್ರವಾಸಿಗರನ್ನು ಆಕರ್ಷಿಸಲಿದೆ.

ಮಡಿಕೇರಿ ಹೊರವಲಯದ ಉಡೋತ್ ಮೊಟ್ಟೆಯ ಪಪ್ಪೀಸ್ ಪ್ಲಾಂಟೇಷನ್‍ನಲ್ಲಿ ಸುಮಾರು 32 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಉದ್ಘಾಟನೆಗೊಂಡಿದೆ.

ಸುಮಾರು 5 ಟನ್ ಬಾರ ಹೊರುವ ಸಾಮರ್ಥ್ಯದ ಈ ಸೇತುವೆಯಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇದು ಕರ್ನಾಟಕದ ಮೊದಲ ಉದ್ದದ ಗ್ಲಾಸ್ ಸೇತುವೆಯಾಗಿದ್ದು, ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.

ಈ ಅಪರೂಪದ ಯೋಜನೆಯಿಂದ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ ಎಂದು ಅವರು ಹೇಳಿದರು. ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ, ಭಾರತದ ಸ್ಕಾಟ್‌ಲ್ಯಾಂಡ್ ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಇಂತಹ ಒಂದು ಅದ್ಬುತ ಯೋಜನೆ ಸ್ಥಾಪಿತವಾಗಿರುವುದು ಪ್ರವಾಸೋದ್ಯಮಕ್ಕೆ ಅಶೋದಯಕ ಬೆಳವಣಿಗೆ ಎಂದು ತಿಳಿಸಿದರು.

ಟಿಕೆಟ್ ಕೌಂಟರನ್ನು ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಉದ್ಘಾಟಿಸಿದರು. ಪ್ಲಾಂಟೇಷನ್ ವಾಕ್ ಪಾಟ್‍ಅನ್ನು ಕೇಕಡ ಗಣಪತಿ ಹಾಗೂ ದೇವಯ್ಯ ಉದ್ಘಾಟಿಸಿದರು. ಫೋಟೋ ಪಾಯಿಂಟನ್ನು ಉದ್ಯಮಿ ಗ್ರೀನ್ ಲ್ಯಾಂಡ್ ಶರಿನ್ ಉದ್ಘಾಟಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments