ಮನೋರಂಜನೆ | ಕನ್ನಡ ಚಿತ್ರರಂಗಕ್ಕೆ ಸದಭಿರುಚಿಯ ಜೊತೆಗೆ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ಕೊಟ್ಟ ಹೊಂಬಾಳೆ ಫಿಲಂಸ್ ಇದೀಗ ರಾಘವೇಂದ್ರ ಸ್ಟೋರ್ಸ್ ಎಂಬ ವಿಭಿನ್ನ ಕಥೆಯನ್ನು ಸಿನಿಮಾ ವನ್ನಾಗಿ ಮಾಡಿ ಕನ್ನಡ ಪ್ರೇಕ್ಷಕರ ಮುಂದೆ ಇಡುತ್ತಿದೆ.
ಹೌದು,, ಹ್ಯಾಟ್ರಿಕ್ ನಿರ್ದೇಶಕ ಸಂತೋಷ್ ಆನಂದರಾಮ್ ನಿರ್ದೇಶನ ಮತ್ತು ನವರಸ ನಾಯಕ ಜಗ್ಗೇಶ್ ಜೊತೆಯಾಗಿ ಮೋಡಿ ಮಾಡಲು ರಾಘವೇಂದ್ರ ಸ್ಟೋರ್ಸ್ ಮೂಲಕವಾಗಿ ಇದೇ ಶುಕ್ರವಾರ ತೆರೆ ಮೇಲೆ ತರುತ್ತಿದ್ದಾರೆ.
40 ದಾಟಿದರೂ ಮದುವೆಯಾಗದ ಅಡುಗೆ ಕೆಲಸ ಮಾಡುವ ಯುವಕನ ನೋವಿನ ಕಥೆಯನ್ನು, ಅವನಿಗೆ ಹುಡುಗಿ ಹುಡುಕುವ ಕಥೆಯನ್ನು ನಿರ್ದೇಶಕ ಸಂತೋಷ್ ಆನಂದ್ ರಾಮ್ ಅದ್ಭುತವಾಗಿ ಸೆರೆ ಹಿಡಿದಿದ್ದಾರೆ. ಹಾಸ್ಯದ ಜೊತೆಗೆ ಒಂದಿಷ್ಟು ಉತ್ತಮ ಸಂದೇಶವನ್ನು ನೀಡಿದ್ದಾರೆ ನಟ ಜಗ್ಗೇಶ್.
ಇನ್ನು ಚಿತ್ರದಲ್ಲಿ ನಟಿ ಶ್ವೇತಾ ಶೀವಾಸ್ತವ್, ಹಿರಿಯ ನಟ ದತ್ತಣ್ಣ, ಅಚ್ಚುತ್ ಕುಮಾರ್, ಮಿತ್ರ ಸೇರಿದಂತೆ ದೊಡ್ಡ ತಾರಾ ಬಣವೆ ಇದೆ. ಕನ್ನಡ ಸಿನಿ ಪ್ರೇಮಿಗಳಿಗೆ ಇದೊಂದು ಸದಭಿರುಚಿಯ ಚಿತ್ರ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎನ್ನುವುದನ್ನು ಇತ್ತೀಚಿಗೆ ಬಿಡುಗಡೆಯಾದ ಟೈಲರ್ ಮೂಲಕ ಸಾಕಷ್ಟು ಭರವಸೆ ಹುಟ್ಟಿಸಿದೆ.