ಮನರಂಜನೆ | ಹಾಸ್ಯದ ಜೊತೆಗೆ ಒಂದೊಳ್ಳೆ ಸಂದೇಶವನ್ನು ಸಾರುವ ಸಿನಿಮಾ ರಾಘವೇಂದ್ರ ಸ್ಟೋರ್ಸ್ ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿತ್ತು. ಇದೀಗ ಅಮೆಜಾನ್ ಪ್ರೈಮ್ ನಲ್ಲೂ ಬಿಡುಗಡೆಯಾಗಿದ್ದು ಮೆಚ್ಚುಗೆ ಗಳಿಸುತ್ತಿದೆ.
ರಾಘವೇಂದ್ರ ಸ್ಟೋರ್ಸ್ ನವರಸ ನಾಯಕ ಜಗ್ಗೇಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ. ಚಿತ್ರಕ್ಕೆ ಬಂಡವಾಳವನ್ನು ಹೊಂಬಾಳೆ ಫಿಲಂಸ್ ವಿಜಯ್ ಕಿರಗಂದೂರು ಹೂಡಿದ್ರೆ, ಸಂತೋಷ ಆನಂದ್ ರಾಮ್ ಆಕ್ಷನ್ ಕಟ್ ಹೇಳಿದ್ದಾರೆ. ಶ್ವೇತಾ ಶ್ರೀವಾತ್ಸವ್, ಮಿತ್ರ, ದತ್ತಣ್ಣ ಸೇರಿದಂತೆ ಅಪಾರ ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದೆ.
40ವರ್ಷ ದಾಟಿದರೂ ಮದುವೆಯಾಗದ ಹುಡುಗನ ಕಥೆಯನ್ನು ಚಿತ್ರದಲ್ಲಿ ಹೆಣೆಯಲಾಗಿದ್ದು ಜಗ್ಗೇಶ್ ರವರ ಕಾಮಿಡಿ ಪಂಚ್ ಜೊತೆಗೆ ಕೆಲವು ಉತ್ತಮ ಸಂದೇಶಗಳು ಪ್ರೇಕ್ಷಕರನ್ನು ಕಾಡಿವೆ. ಒಟ್ಟಾರೆಯಾಗಿ ಥಿಯೇಟರ್ ಗಳಲ್ಲಿ ಅದ್ದೂರಿ ಪ್ರದರ್ಶನ ಕಂಡ ರಾಘವೇಂದ್ರ ಸ್ಟೋರ್ಸ್ ಇದೀಗ ಅಮೆಜಾನ್ ಪ್ರೈಮ್ ನಲ್ಲೂ ಸದ್ದು ಮಾಡುತ್ತಿದೆ.