Home Blog

Postal Department Employees | 2024ರ ಲೋಕಸಭೆ ಚುನಾವಣೆ ಮತದಾನದಿಂದ ವಂಚಿತರಾದ ತುಮಕೂರು ಅಂಚೆ ನೌಕರರು

ತುಮಕೂರು | ಮತದಾನದಿಂದ (Voting) ವಂಚಿತರಾಗಿರುವ ಅಂಚೆ ಇಲಾಖೆಯ ನೌಕರರು (Postal Department Employees) ಮತದಾನಕ್ಕೆ ಅವಕಾಶ ಕಲ್ಪಿಸಿ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ (Election Officer), ಮತದಾನ ಸಿಬ್ಬಂದಿಯ ನೋಡಲ್ ಅಧಿಕಾರಿಗಳಿಗೆ ಹಾಗೂ ರಾಜ್ಯ ಚುನಾವಣಾ ಆಯುಕ್ತರಿಗೆ ಪತ್ರದ ಮೂಲಕ ಮನವಿ ಮಾಡಿದರು ಸಹ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಏಪ್ರಿಲ್ 24 2024 ರಂದು ಮೈಕ್ರೋ ಅಬ್ಸರ್ವರ್ ತರಬೇತಿಗಾಗಿ ಬೆಳಗ್ಗೆ 10 ಗಂಟೆಗೆ ಹಾಜರಾಗಬೇಕೆಂದು ಮೊಬೈಲ್ ಕರೆ ಮೂಲಕ ಸೂಚನೆ ನೀಡಿದ್ದರು. ತರಬೇತಿಯಲ್ಲಿ ಮೈಕ್ರೋ ಅಬ್ಸರ್ವರ್ ಗಳ ಮತದಾನಕ್ಕೆ ಸಂಬಂಧಿಸಿದಂತೆ ಇಡಿಸಿ ಅಥವಾ ಅಂಚೆ ಮತದಾನದ ಮೂಲಕ ಸೂಕ್ತ ಸಮಯದಲ್ಲಿ ಮತದಾನ ಮಾಡಲು ಅವಕಾಶವನ್ನು ಅವಕಾಶ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.

ಪ್ರಜಾಪ್ರಭುತ್ವದಲ್ಲಿ ಮತದಾನ ಮಾಡುವುದು ನಮ್ಮ ಹಕ್ಕು ಆದರೆ ತುಮಕೂರು ಜಿಲ್ಲಾಡಳಿತ ಹಾಗೂ ಜಿಲ್ಲಾ ಚುನಾವಣಾಧಿಕಾರಿಯ ನಿರ್ಲಕ್ಷ್ಯದಿಂದಾಗಿ ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕೆಲಸಕ್ಕೆ ನೇಮಕವಾಗಿದ್ದ 22 ಕ್ಕೂ ಹೆಚ್ಚು ಜನರು ಮತದಾನದಿಂದ ವಂಚಿತರಾಗಿದ್ದಾರೆ ಎಂದು ಅಂಚೆ ಇಲಾಖೆ ಸಿಬ್ಬಂದಿ ಆರೋಪಿಸಿದ್ದಾರೆ.

ಮತ ಎಣಿಕೆ ಕೊನೆಯ ದಿನದವರೆಗೂ ಅಂದರೆ ಜೂನ್ 3 ರವರೆಗೂ ಇಡಿಸಿ ಹಾಗೂ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನ ಮಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿದ್ದು, ನಮ್ಮ ಹಕ್ಕನ್ನು ಚಲಾಯಿಸಲು ನಮಗೆ ಅವಕಾಶ ನೀಡಬೇಕೆಂದು ಪತ್ರದ ಮೂಲಕ ಮೇ 9 ರಂದು (TMR/BD/ELECTION – 24/DLGS-09-05-2024 ) ರಂದು ಮನವಿ ಮಾಡಿದ್ದಾರೆ. ಅಧಿಕಾರಿಗಳು ಮತದಾನಕ್ಕೆ ಅವಕಾಶ ನೀಡದಿದ್ದರೆ ನನ್ನ ಹಕ್ಕಿಗಾಗಿ ಕೋರ್ಟ್ ಮೆಟ್ಟಿಲೇರಲು ಹಿಂಜರಿಯುವುದಿಲ್ಲ ಎಂದು ಅಂಚೆ ಇಲಾಖೆ ನೌಕರರು ತಿಳಿಸಿದ್ದಾರೆ.

Nikhil Kumaraswamy | ಎಸ್‌ಐಟಿ ತನಿಖೆಯ ಮೇಲೆ ಅನುಮಾನ ವ್ಯಕ್ತಪಡಿಸಿದ ನಿಖಿಲ್‌ ಕುಮಾರಸ್ವಾಮಿ

ಬೆಂಗಳೂರು | ಪ್ರಜ್ವಲ್ ರೇವಣ್ಣ (Prajwal Revanna) ಪೆನ್‌ಡ್ರೈವ್‌ ಪ್ರಕರಣವನ್ನು ಎಸ್‌ಐಟಿ (SIT) ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ ಎಂದು ಜೆಡಿಎಸ್‌ (JDS) ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) ಆರೋಪಿಸಿದ್ದಾರೆ.

ದೇವೇಗೌಡರ ಕುಟುಂಬವನ್ನು ಟಾರ್ಗೆಟ್‌ ಮಾಡಿದ ರಾಜ್ಯದ ಕಾಂಗ್ರೆಸ್‌ ಸರ್ಕಾರ ರೇವಣ್ಣ ಅವರನ್ನು ಟಾರ್ಗೆಟ್ ಮಾಡಿ ಜೈಲಿಗೆ ಕಳಿಹಿಸಿತು. ಇದೆಲ್ಲ ಹೆಚ್ಚು ದಿನ ನಡೆಯುವುದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಅವರು ಬರೆದ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಕುಮಾರಸ್ವಾಮಿ ಅವರು ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ವಿದೇಶದಿಂದ ಬಂದು ಎಸ್‌ಐಟಿ ತನಿಖೆ ಎದುರಿಸುವಂತೆ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾವೆಲ್ಲ ಕಾಯುತ್ತಿದ್ದೇವೆ. ಒಬ್ಬ ಪ್ರಜೆಯಾಗಿ ಪ್ರಜ್ವಲ್ ಶೀಘ್ರವಾಗಿ ಬರಲಿ ಎನ್ನುವುದು ನಮ್ಮ ಆಶಯ ಕೂಡಾ ಎಂದರು.

ಸರ್ಕಾರದಲ್ಲಿರುವ ಪಕ್ಷ ಯಾವತ್ತೂ ನ್ಯಾಯಯುತವಾಗಿ ನಡೆದುಕೊಳ್ಳುವುದನ್ನು ಕಲಿಯಬೇಕು ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.

HD Deve Gowda | ಪ್ರಜ್ವಲ್ ಗೆ ಕೊನೆಯದಾಗಿ ವಾರ್ನಿಂಗ್ ಕೊಟ್ಟ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ

ಬೆಂಗಳೂರು | ಮಹಿಳೆಯರಿಗೆ (woman) ನೀಡಿದ ದೌರ್ಜನ್ಯ ಪ್ರಕರಣದಲ್ಲಿ ಎಸ್‌ಐಟಿಗೆ (SIT) ಬೇಕಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna) ಅವರು ಪೊಲೀಸರಿಗೆ ಶರಣಾಗಿ, ವಿಚಾರಣೆ ಎದುರಿಸುವಂತೆ ಜೆಡಿಎಸ್‌ (JDS) ರಾಷ್ಟ್ರೀಯ ಅಧ್ಯಕ್ಷ ಎಚ್‌ ಡಿ ದೇವೇಗೌಡ (HD Deve Gowda) ಅವರು ತಾಕೀತು ಮಾಡಿದ್ದಾರೆ.

ಈ ಬಗ್ಗೆ ಪತ್ರ ಬರೆದು ಕರೆ ನೀಡಿರುವ ದೇವೇಗೌಡ ಅವರು, ‘ಇದು ನಾನು ಅವನಿಗೆ ನೀಡುತಿರುವ ಎಚ್ಚರಿಕೆಯಿದು. ಅವನು ಈ ಎಚ್ಚರಿಕೆಗೆ ಮನ್ನಣೆ ಕೊಡದಿದ್ದಲ್ಲಿ ಅವನು ನನ್ನ ಮತ್ತು ಕುಟುಂಬದವರೆಲ್ಲರ ಕೋಪ ಎದುರಿಸಬೇಕಾಗುತ್ತದೆ. ಅವನು ಎಸಗಿದ್ದಾನೆ ಎನ್ನಲಾದ ತಪ್ಪುಗಳನ್ನು ತೀರ್ಮಾನಿಸಲು ಕಾನೂನು ಇದೆ. ತಲೆಬಾಗದಿದ್ದಲ್ಲಿ, ಏಕಾಂಗಿಯಾಗಬೇಕಾಗುತ್ತದೆ. ನನ್ನ ಬಗ್ಗೆ ಗೌರವವಿದ್ದಲ್ಲಿ ಅವನು ಕೂಡಲೆ ಹಿಂದಿರುಗಿ ಬರಬೇಕು’ ಎಂದು ಹೇಳಿದ್ದಾರೆ.

ನಾನು ಅಥವಾ ನನ್ನ ಕುಟುಂಬ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಯಾವುದೇ ಭಾವನೆಗೆ ಸಿಲುಕದೆ, ಅವನು ಎಸಗಿದ್ದಾನೆ ಎನ್ನಲಾದ ಕೃತ್ಯಗಳು ಮತ್ತು ತಪ್ಪುಗಳಿಂದ ನೊಂದಿರುವ, ಅನ್ಯಾಯಕ್ಕೆ ಒಳಗಾಗಿರುವ ಎಲ್ಲರಿಗೂ ನ್ಯಾಯ ಸಿಗಬೇಕು. ಜನರ ವಿಶ್ವಾಸವನ್ನು ಮರಳಿ ಪಡೆಯುವುದಷ್ಟೆ ನನ್ನ ಗುರಿ. ಜನರು ಆರು ದಶಕಗಳ ಕಾಲ ನನ್ನ ರಾಜಕೀಯ ಜೀವನದುದ್ದಕ್ಕೂ ಜತೆಗೆ ನಿಂತಿದ್ದಾರೆ. ಅವರಿಗೆ ನಾನು ಸದಾ ಋಣಿ. ಬದುಕಿರುವವರೆಗೂ ಅವರ ಹಿತದ ವಿರುದ್ಧ ನಡೆದುಕೊಳ್ಳುವುದಿಲ್ಲ  ಎಂದಿದ್ದಾರೆ.

Tumakuru Mahanagara Palike | ಮಳೆ ಹಾನಿಯ ಸಮಸ್ಯೆಗಳಿಗೆ ಸಹಾಯವಾಣಿ ತೆರೆದ ತುಮಕೂರು ಮಹಾನಗರ ಪಾಲಿಕೆ..!

ತುಮಕೂರು | ಮುಂದಿನ ದಿನಗಳಲ್ಲಿ ಮಳೆಯಿಂದಾಗಿ (Rain) ಯಾವುದೇ ತೊಂದರೆಯುಂಟಾದಲ್ಲಿ ತುಮಕೂರು ಮಹಾನಗರ ಪಾಲಿಕೆಯ (Tumakuru Mahanagara Palike) ಕಂಟ್ರೋಲ್ ರೂಮ್ ದೂರವಾಣಿ ಸಂಖ್ಯೆ : 9449872599 ಕ್ಕೆ ಕರೆ ಮಾಡಿ ದೂರು ದಾಖಲಿಸಲು ಪಾಲಿಕೆ ಆಯುಕ್ತ ಬಿ. ವಿ ಅಶ್ವಿಜ (B. V Ashvija) ತಿಳಿಸಿದ್ದಾರೆ.

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿನ ಉಪ್ಪಾರಹಳ್ಳಿ, ಅಂತರಸನಹಳ್ಳಿ, ದಿಬ್ಬೂರು, ಸದಾಶಿವನಗರ, ಅಮಾನಿಕೆರೆ ಕೋಡಿಹಳ್ಳ, ಶೆಟ್ಟಿಹಳ್ಳಿ, ಶಾಂತಿನಗರ ಹಾಗೂ ಎಲ್ಲಾ ಅಂಡರ್ ಪಾಸ್‌ಗಳು ಮತ್ತು ಇತರೆ ಸ್ಥಳಗಳಲ್ಲಿ ಮಳೆಯಿಂದಾಗಿ ಉಂಟಾದ ಪ್ರವಾಹ/ಹಾನಿಗಳಿಗೆ ಸಂಬಂಧಿಸಿದಂತೆ ಸ್ಥಳೀಯ ಸಾರ್ವಜನಿಕರಿಂದ ಬಂದ ದೂರುಗಳ ಬಗ್ಗೆ ಕ್ರಮಕೈಗೊಂಡು ಪಾಲಿಕೆ ಸಿಬ್ಬಂದಿಗಳು ಜೆಸಿಬಿ, ಜಟ್ಟಿಂಗ್ ಮತ್ತು ಸಕ್ಕಿಂಗ್ ಯತ್ರೋಪಕರಣಗಳಿಂದ ಸಮಸ್ಯೆಗಳನ್ನು ಪರಿಹರಿಸಲಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Graphic Designing Training | ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ : ಉಚಿತ ಕಂಪ್ಯೂಟರ್ ಡಿಟಿಪಿ/ ಗ್ರಾಫಿಕ್ ಡಿಸೈನಿಂಗ್ ತರಬೇತಿಗೆ ಅರ್ಜಿ ಆಹ್ವಾನ

ತುಮಕೂರು | ರುಡ್‌ಸೆಟ್ ಸಂಸ್ಥೆಯ (Rudset Institute) ವತಿಯಿಂದ ಹಮ್ಮಿಕೊಂಡಿರುವ ಕಂಪ್ಯೂಟರ್ ಡಿಟಿಪಿ (Computer DTP) / ಗ್ರಾಫಿಕ್ ಡಿಸೈನಿಂಗ್ (Graphic Designing) ಕುರಿತ 45 ದಿನಗಳ ಉಚಿತ ತರಬೇತಿಯು ಜುಲೈ 10 ರಿಂದ ಆಯೋಜಿಸಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ (unemployed) ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆಯೊಂದಿಗೆ ಆಂಗ್ಲ ಭಾಷೆಯನ್ನು ಸಹ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್ ನ್ನು ಹೊಂದಿರಬೇಕು ಹಾಗೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತದೆ.

ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9740982585ನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ತಿಳಿಸಿದ್ದಾರೆ.

Department of Horticulture | ರೈತ ಮಕ್ಕಳಿಗಾಗಿ ಮಾತ್ರ ಈ ತರಬೇತಿ ನೀಡುತ್ತಿದೆ ತೋಟಗಾರಿಕೆ ಇಲಾಖೆ..!

ಕೃಷಿ ಮಾಹಿತಿ | ತೋಟಗಾರಿಕೆ ಇಲಾಖೆಯು (Department of Horticulture) ರಾಜ್ಯದ ವಿವಿಧ ಭಾಗಗಳಲ್ಲಿನ 10 ತೋಟಗಾರಿಕೆ ತರಬೇತಿ ಕೇಂದ್ರಗಳಲ್ಲಿ (Horticulture Training Centre) ರೈತ ಮಕ್ಕಳಿಗಾಗಿ ಜುಲೈ 1 ರಿಂದ 2025ರ ಮಾರ್ಚ್ 31ರವರೆಗೆ 9 ತಿಂಗಳ ತೋಟಗಾರಿಕಾ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ತೋಟಗಾರಿಕೆ ಉಪ ನಿರ್ದೇಶಕ ಶಾರದಮ್ಮ (Sharadamma) ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಲು ಜೂನ್ 3 ಕಡೆಯ ದಿನವಾಗಿದ್ದು, ತರಬೇತಿ ಆಯ್ಕೆಗಾಗಿ ಜೂನ್ 6ರಂದು ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ತುಮಕೂರು ತೋಟಗಾರಿಕೆ ಉಪನಿರ್ದೇಶಕರ ಕಛೇರಿ ಅಥವಾ ದೂ.ಸಂ 0816-2278647ನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

RBI Good news | ಲೋಕಸಭೆ ಚುನಾವಣೆ ಬೆನ್ನಲ್ಲೆ ಸರ್ಕಾರದ ಖಜಾನೆ ತುಂಬಿಸಿದ ಆರ್‌ಬಿಐ : ಹೊಸ ಸರ್ಕಾರಕ್ಕೆ ಗುಡ್ ನ್ಯೂಸ್..!

ನವದೆಹಲಿ | ಲೋಕಸಭೆ ಚುನಾವಣೆ (Lok Sabha Elections) ನಡುವೆಯೇ ಸರ್ಕಾರದ ಖಜಾನೆ ತುಂಬಲಿದೆ. ಹೌದು,, ವಾಸ್ತವವಾಗಿ ಕೇಂದ್ರ ಸರ್ಕಾರದ ಖಜಾನೆ ತುಂಬಲು ಆರ್‌ಬಿಐ (RBI) ಭಾರಿ ಮೊತ್ತವನ್ನು ಲಾಭಾಂಶವಾಗಿ ನೀಡಲು ನಿರ್ಧರಿಸಿದೆ. 2023-24ರಲ್ಲಿ 3 ಲಕ್ಷ ಕೋಟಿ ರೂಪಾಯಿ ಲಾಭ ಗಳಿಸಿದ ಬ್ಯಾಂಕ್‌ಗಳ ಅತ್ಯುತ್ತಮ ಕಾರ್ಯಕ್ಷಮತೆಯಿಂದಾಗಿ, RBI ಕೇಂದ್ರ ಸರ್ಕಾರಕ್ಕೆ 2.11 ಲಕ್ಷ ಕೋಟಿ ರೂಪಾಯಿ (2,10,874 ಕೋಟಿ) ಲಾಭಾಂಶವನ್ನು ನೀಡುವುದಾಗಿ ಘೋಷಿಸಿದೆ.

Badrinath Dham | ಬದರಿನಾಥ ದೇಗುಲದಲ್ಲಿ 15 ಯಾತ್ರಿಕರ ವಿರುದ್ಧ ಕ್ರಮ ಕೈಗೊಂಡ ಪೊಲೀಸರು..! – karnataka360.in

ಆಗಸ್ಟ್ 26, 2019 ರಂದು ಕೇಂದ್ರ ಬ್ಯಾಂಕ್ ಅಂಗೀಕರಿಸಿದ ಬಿಮಲ್ ಜಲನ್ ಸಮಿತಿಯ ಶಿಫಾರಸುಗಳ ಪ್ರಕಾರ ಈ ಲಾಭಾಂಶವನ್ನು ನೀಡಲಾಗುತ್ತಿದೆ ಎಂದು ಆರ್‌ಬಿಐ ಮೇ 22 ರಂದು ತಿಳಿಸಿದೆ. ಪ್ರತಿ ವರ್ಷ ಆರ್‌ಬಿಐ ಹೂಡಿಕೆಯಿಂದ ಬರುವ ಲಾಭಾಂಶವನ್ನು ಕೇಂದ್ರ ಸರ್ಕಾರಕ್ಕೆ ನಿಗದಿತ ಮೊತ್ತದ ರೂಪದಲ್ಲಿ ವರ್ಗಾಯಿಸುತ್ತದೆ. ಕಳೆದ ಹಣಕಾಸು ವರ್ಷದಲ್ಲಿ ಸೆಂಟ್ರಲ್ ಬ್ಯಾಂಕ್ 87,416 ಕೋಟಿ ರೂ.ಗಳನ್ನು ಲಾಭಾಂಶವಾಗಿ ಕೇಂದ್ರಕ್ಕೆ ನೀಡಿತ್ತು.

ಮುಂಬರುವ ಸರ್ಕಾರಕ್ಕೆ ಶುಭ ಸುದ್ದಿ

ಈ ವರ್ಷದ ಮೊತ್ತವು ಸ್ವಲ್ಪ ಮಟ್ಟಿಗೆ ದೊಡ್ಡದಾಗಿದೆ ಮತ್ತು FY23 ಗಿಂತ 141% ಹೆಚ್ಚಾಗಿದೆ. ಈ ಲಾಭಾಂಶದಿಂದ ಮುಂಬರುವ ಸರ್ಕಾರಕ್ಕೆ ಎಷ್ಟು ಸಹಾಯ ಸಿಗುತ್ತದೆ ಎಂಬುದನ್ನು ನೀವು ಊಹಿಸಬಹುದು. ಈ ಮೊತ್ತವು ಸರ್ಕಾರದ ಹಣಕಾಸಿನ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೊಸ ಯೋಜನೆಗಳಿಗೆ ಖರ್ಚು ಮಾಡಲು ಸಹಾಯ ಮಾಡುತ್ತದೆ. ಇಷ್ಟು ಮಾತ್ರವಲ್ಲದೆ, ಇಷ್ಟು ದೊಡ್ಡ ಮೊತ್ತವನ್ನು ಪಡೆಯುವುದರಿಂದ ಭಾರತ ಸರ್ಕಾರವು ಹೂಡಿಕೆಯ ಗುರಿ ತಪ್ಪಿದ ನಂತರ ಆದಾಯ ಸಂಗ್ರಹದಲ್ಲಿನ ಕೊರತೆಯನ್ನು ಸರಿದೂಗಿಸಲು ಅವಕಾಶವನ್ನು ನೀಡುತ್ತದೆ. ಇದರೊಂದಿಗೆ, ಈ ಮೊತ್ತವನ್ನು ಪಡೆದ ನಂತರ ಸರ್ಕಾರದ ಸಾರ್ವಜನಿಕ ಕಲ್ಯಾಣ ಯೋಜನೆಗಳಿಗೆ ಹಣವನ್ನು ಸಂಗ್ರಹಿಸುವುದು ಸಹ ಹೆಚ್ಚಿನ ಪ್ರಮಾಣದಲ್ಲಿ ಸುಲಭವಾಗುತ್ತದೆ.

ಕೋಟಕ್ ಮಹೀಂದ್ರಾ ಬ್ಯಾಂಕ್‌ನ ಮುಖ್ಯ ಅರ್ಥಶಾಸ್ತ್ರಜ್ಞ ಉಪಾಸನಾ ಭಾರದ್ವಾಜ್, ಇಂತಹ ಐತಿಹಾಸಿಕ ಲಾಭಾಂಶವು FY 25 ರಲ್ಲಿ ವಿತ್ತೀಯ ಕೊರತೆಯನ್ನು 0.4% ರಷ್ಟು ಕಡಿಮೆ ಮಾಡುತ್ತದೆ ಎಂದು ಹೇಳುತ್ತಾರೆ. ಮುಂಬರುವ ಬಜೆಟ್‌ನಲ್ಲಿ ಘೋಷಿಸಲಾದ ಕಡಿಮೆ ಸಾಲದ ವ್ಯಾಪ್ತಿಯು ಈಗ ಬಾಂಡ್ ಮಾರುಕಟ್ಟೆಗಳಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ.

IRCA ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್, ‘2.11 ಟ್ರಿಲಿಯನ್ ಮೊತ್ತವು 2025 ರ FY2025 ರ ಮಧ್ಯಂತರ ಬಜೆಟ್‌ನಲ್ಲಿ ಲಾಭಾಂಶ ಮತ್ತು ಲಾಭದ ಅಡಿಯಲ್ಲಿ 1.5 ಟ್ರಿಲಿಯನ್ ರೂಪಾಯಿಗಳ ಬಜೆಟ್ ಅಂಕಿ ಅಂಶಕ್ಕಿಂತ ಹೆಚ್ಚಿನದಾಗಿದೆ, ಇದರಲ್ಲಿ PSU ಗಳ ಲಾಭಾಂಶವೂ ಸೇರಿದೆ. ಬಜೆಟ್‌ಗಿಂತ ಹೆಚ್ಚಿನ ಆರ್‌ಬಿಐ ಲಾಭಾಂಶವು 2025 ರ ಹಣಕಾಸು ವರ್ಷದಲ್ಲಿ ಭಾರತ ಸರ್ಕಾರದ ಸಂಪನ್ಮೂಲಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಆರ್‌ಬಿಐ ಮಂಡಳಿಯು ಅನಿಶ್ಚಿತ ಅಪಾಯದ ಬಫರ್ ಅನ್ನು ಹಿಂದಿನ 6% ರಿಂದ 6.5% ಕ್ಕೆ ಹೆಚ್ಚಿಸಲು ಒಪ್ಪಿಕೊಂಡಿದೆ.

ಈ ಹಂತವು ಆರ್‌ಬಿಐ ಮತ್ತು ಕೇಂದ್ರ ಸರ್ಕಾರದ ನಡುವೆ ಉತ್ತಮ ಸಮನ್ವಯತೆಯನ್ನು ತೋರಿಸುತ್ತದೆ. ಇದುವರೆಗೆ ಆರ್‌ಬಿಐ ಸರ್ಕಾರಕ್ಕೆ ನೀಡಿದ ದಾಖಲೆಯ ಲಾಭಾಂಶವಾಗಿದೆ. 2023-24ರಲ್ಲಿ ಆರ್‌ಬಿಐ 87 ಸಾವಿರದ 416 ಕೋಟಿ ರೂ.ಗಳನ್ನು ಸರ್ಕಾರಕ್ಕೆ ಲಾಭಾಂಶವಾಗಿ ವರ್ಗಾಯಿಸಿದೆ. ಇದಕ್ಕೂ ಮೊದಲು, 2019 ರಲ್ಲಿ, ಸರ್ಕಾರವು RBI ನಿಂದ 1.2 ಲಕ್ಷ ಕೋಟಿ ರೂಪಾಯಿಗಳ ದಾಖಲೆಯ ಲಾಭಾಂಶವನ್ನು ಪಡೆದಿತ್ತು.

ಆರ್‌ಬಿಐಗೆ ಇಷ್ಟೊಂದು ಹಣ ಎಲ್ಲಿಂದ ಬಂತು..?

RBI ತನ್ನ ಹೆಚ್ಚುವರಿ ಆದಾಯದಿಂದ ಸರ್ಕಾರಕ್ಕೆ ಲಾಭಾಂಶವನ್ನು ನೀಡುತ್ತದೆ. ಹೂಡಿಕೆ ಮತ್ತು ಡಾಲರ್‌ಗಳ ಹಿಡುವಳಿ ನಂತರದ ಮೌಲ್ಯಮಾಪನದ ಹೆಚ್ಚಳದಿಂದ ಆರ್‌ಬಿಐ ಈ ಹಣವನ್ನು ಗಳಿಸುತ್ತದೆ. ಇದರೊಂದಿಗೆ ಕರೆನ್ಸಿ ಮುದ್ರಣಕ್ಕೆ ಪಡೆಯುವ ಶುಲ್ಕವನ್ನೂ ಇದರಲ್ಲಿ ಸೇರಿಸಲಾಗಿದೆ.

ನಿಯಮಗಳ ಪ್ರಕಾರ, ಆರ್‌ಬಿಐ ತನ್ನ ಬ್ಯಾಲೆನ್ಸ್ ಶೀಟ್‌ನ 5.5%-6.5% ಅನ್ನು ಸಿಆರ್‌ಬಿ (ಕಂಟಿಜೆಂಟ್ ರಿಸ್ಕ್ ಬಫರ್) ಎಂದು ಇಟ್ಟುಕೊಳ್ಳುವುದು ಕಡ್ಡಾಯವಾಗಿದೆ. 2022-23ರ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳ ಏರಿಕೆಯಿಂದಾಗಿ, CRB ಅನ್ನು 6 ಪ್ರತಿಶತಕ್ಕೆ ಹೆಚ್ಚಿಸಲಾಯಿತು ಮತ್ತು ಬೆಳವಣಿಗೆಯು ಮುಂದುವರಿದರೆ, 2023-24 ರಲ್ಲಿ ಅದನ್ನು 6.5 ಪ್ರತಿಶತಕ್ಕೆ ಹೆಚ್ಚಿಸಲಾಯಿತು. ಇದಲ್ಲದೆ, ಆರ್‌ಬಿಐನ ಸೆಕ್ಯುರಿಟಿಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಮತ್ತು ವಿದೇಶಗಳಲ್ಲಿ ಇರಿಸಲಾಗುತ್ತದೆ, ಅದರಿಂದ ಅದು ಗಳಿಸುತ್ತದೆ.

ಆರ್‌ಬಿಐ ಆದಾಯ ಹೆಚ್ಚಿಸಿದ ಬ್ಯಾಂಕ್‌ಗಳು..!

ವಿದೇಶಿ ವಿನಿಮಯ ವಹಿವಾಟಿನಿಂದ ಬರುವ ಆದಾಯವು ಈ ವರ್ಷ ಕಡಿಮೆಯಾಗುವ ನಿರೀಕ್ಷೆಯಿದೆ, ಏಕೆಂದರೆ RBI 2022-23 ಕ್ಕೆ ಹೋಲಿಸಿದರೆ 2023-24 ರಲ್ಲಿ ಹೆಚ್ಚಿನ ಡಾಲರ್‌ಗಳನ್ನು ಮಾರಾಟ ಮಾಡಲಿಲ್ಲ. ಈ ವರ್ಷದ ಮಾರ್ಚ್‌ನಲ್ಲಿ ಆರ್‌ಬಿಐನ ಫಾರೆಕ್ಸ್ ಮೀಸಲು 67 ಬಿಲಿಯನ್ ಡಾಲರ್‌ಗಳಷ್ಟು ಹೆಚ್ಚಾಗಿದೆ. ಹೆಚ್ಚುತ್ತಿರುವ ಲಾಭಾಂಶದ ಕಾರಣ, ಹಣಕಾಸು ಸಚಿವಾಲಯವು ತನ್ನ ಬಾಂಡ್‌ಗಳ ಮಾರಾಟವನ್ನು ಕಡಿಮೆ ಮಾಡಬಹುದು. ಫೆಬ್ರವರಿಯಲ್ಲಿ ಮಧ್ಯಂತರ ಬಜೆಟ್ ಪ್ರಕಾರ, ಭಾರತ ಸರ್ಕಾರವು 2024-25 ಕ್ಕೆ ಬಾಂಡ್‌ಗಳ ಮೂಲಕ ರೂ 14.13 ಲಕ್ಷ ಕೋಟಿ ಸಂಗ್ರಹಿಸಲು ಯೋಜಿಸಿದೆ.

Muslim Woman Prime Minister | ವಿಶ್ವದ ಮೊದಲ ಮುಸ್ಲಿಂ ಮಹಿಳಾ ಪ್ರಧಾನಿ ಇವರೇ ನೋಡಿ..?

ವಿಶೇಷ ಮಾಹಿತಿ | ಸಾಮಾನ್ಯವಾಗಿ, ಮಹಿಳೆಯರ (Woman) ಮೇಲಿನ ನಿರ್ಬಂಧಗಳಿಗೆ ಸಂಬಂಧಿಸಿದ ಸುದ್ದಿಗಳು ಮುಸ್ಲಿಂ ರಾಷ್ಟ್ರಗಳಿಂದ (Muslim country) ಬರುತ್ತವೆ. ಕೆಲವೆಡೆ ಅವರ ಮೇಲೆ ಡ್ರೆಸ್ ಕೋಡ್ ಹೇರಿದರೆ, ಇನ್ನು ಕೆಲವೆಡೆ ರೆಸ್ಟೊರೆಂಟ್‌ಗಳಲ್ಲಿ ತಿರುಗಾಡಲು ಮತ್ತು ತಿನ್ನಲು ಎಲ್ಲಾ ರೀತಿಯ ನಿಯಮಗಳಿವೆ. ಆದರೆ, ಹಲವು ದೇಶಗಳು ಹಳೆಯ ನಿಷೇಧಗಳನ್ನು ಮುರಿದು ಮಹಿಳೆಯರಿಗೆ ಸ್ವಾತಂತ್ರ್ಯ ನೀಡಲು ಮುಂದೆ ಬರುತ್ತಿವೆ. ಆದರೀಗ ಇಲ್ಲಿನ ಮಹಿಳೆಯರು ಬಾಹ್ಯಾಕಾಶ ಯಾತ್ರೆ ಆರಂಭಿಸಿದ್ದಾರೆ. ಆದರೆ ಮಹಿಳೆಯೊಬ್ಬರು ಪ್ರಧಾನಿಯಾದ (Woman Prime Minister) ವಿಶ್ವದ ಮೊದಲ ಮುಸ್ಲಿಂ ರಾಷ್ಟ್ರ ಯಾವುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರ ಸಿಕ್ಕಿದೆ.

The Secret of the Pyramids | ಈಜಿಪ್ಟಿನ ಪಿರಮಿಡ್ ಗಳ ನಿಗೂಢತೆಯನ್ನು ಭೇದಿಸಿದ ವಿಜ್ಞಾನಿಗಳು..! – karnataka360.in

ಹೌದು,,, ಇಪ್ಪತ್ತನೇ ಶತಮಾನದಲ್ಲಿ ಜಗತ್ತಿನಲ್ಲಿ ಅನೇಕ ಮಹಿಳಾ ಪ್ರಧಾನ ಮಂತ್ರಿಗಳಿದ್ದರು. ಭಾರತದಲ್ಲಿ ಇಂದಿರಾ ಗಾಂಧಿ, ಶ್ರೀಲಂಕಾದಲ್ಲಿ ಎಸ್. ಬಂಡಾರನಾಯಕೆ, ಇಸ್ರೇಲ್ ನಲ್ಲಿ ಗೋಲ್ಡಾ ಮೀರ್ ಮತ್ತು ಪಾಕಿಸ್ತಾನದಲ್ಲಿ ಬೆನಜೀರ್ ಭುಟ್ಟೊ. ಆದರೆ ಬೆನಜೀರ್ ಭುಟ್ಟೊ ಅವರು ಎಲ್ಲಾ ಮಹಿಳಾ ಪ್ರಧಾನ ಮಂತ್ರಿಗಳಿಗಿಂತ ಸಂಪೂರ್ಣವಾಗಿ ಭಿನ್ನರಾಗಿದ್ದರು. ಏಕೆಂದರೆ, ಅವರು ಮುಸ್ಲಿಂ ರಾಷ್ಟ್ರದ ಮೊದಲ ಮಹಿಳಾ ಪ್ರಧಾನಿಯಾಗಿದ್ದರು. ಅವರ ಹಿಂದೆ ಯಾವುದೇ ಮುಸ್ಲಿಂ ರಾಷ್ಟ್ರದಲ್ಲಿ ಮಹಿಳಾ ಪ್ರಧಾನಿ ಇರಲಿಲ್ಲ. 1988ರಲ್ಲಿ ಪ್ರಧಾನಿಯಾಗುವ ಅವಕಾಶ ಸಿಕ್ಕಾಗ ಬೆನಜೀರ್ ಅವರಿಗೆ ಕೇವಲ 35 ವರ್ಷ. ಅವರು ತುಂಬಾ ವಿದ್ಯಾವಂತ ಮತ್ತು ಉಗ್ರಗಾಮಿ ನಾಯಕಿಯಾಗಿದ್ದರು.

ರಾಜಕೀಯ ಪರಿಣಿತೆ

ಬೆನಜೀರ್ ಅವರ ತಂದೆ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೊ ಅವರು ಬೆನಜೀರ್ ಅವರನ್ನು ರಾಜಕೀಯಕ್ಕೆ ಪ್ರವೇಶಿಸಲು ಬಯಸಿದ್ದರು. ಬೆನಜೀರ್ ಅವರಿಗೆ ರಾಜಕೀಯದ ಎಬಿಸಿಡಿ ಕಲಿಸಿದರು. ನಂತರ ಅವರು ರಾಜಕೀಯದ ಪರಿಣಿತ ಪಡೆದುಕೊಂಡರು, ಇಂದಿಗೂ ಪಾಕಿಸ್ತಾನದ ಜನರು ಅವರ ಹೆಸರನ್ನು ಬಹಳ ಗೌರವದಿಂದ ತೆಗೆದುಕೊಳ್ಳುತ್ತಾರೆ.

ಸೇನೆಯನ್ನು ನೇರವಾಗಿ ಎದುರಿಸುತ್ತಿದ್ದ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಸೇನೆ ಕೂಡ ಅವರ ವಿರುದ್ಧ ಸಾಕಷ್ಟು ಅಪಪ್ರಚಾರ ಮಾಡಿತ್ತು. ಹೆಲಿಕಾಪ್ಟರ್‌ನಿಂದ ಅವರ ವಿರುದ್ಧ ಕರಪತ್ರಗಳನ್ನು ಸಹ ಬಿಡಲಾಯಿತು. ಆದರೆ ಅವರು ದೃಢವಾಗಿ ನಿಂತಿದ್ದರು. ಅಂತಿಮವಾಗಿ, ಡಿಸೆಂಬರ್ 27, 2007 ರಂದು ಆತ್ಮಹತ್ಯಾ ಬಾಂಬರ್ ದಾಳಿಗೆ ಬಲಿಯಾದರು. ಆ ವೇಳೆ ಬೆನಜೀರ್ ರಾವಲ್ಪಿಂಡಿಯಲ್ಲಿ ಚುನಾವಣಾ ಭಾಷಣ ಮುಗಿಸಿ ಹಿಂತಿರುಗುತ್ತಿದ್ದರು.

ಬೆನಜೀರ್ ನಂತರ ಅನೇಕ ಮಹಿಳೆಯರು ಮುಂದೆ ಬಂದರು

ಬೆನಜೀರ್ ನಂತರ, ಅನೇಕ ಮುಸ್ಲಿಂ ಮಹಿಳೆಯರು ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ಉನ್ನತ ಸ್ಥಾನಗಳನ್ನು ಅಲಂಕರಿಸಿದರು. ಇವರಲ್ಲಿ ಬಾಂಗ್ಲಾದೇಶದ ಖಲೀದಾ ಜಿಯಾ ಮತ್ತು ಶೇಖ್ ಹಸೀನಾ, ಟರ್ಕಿಯ ತನ್ಸು ಸಿಲ್ಲರ್, ಸೆನೆಗಲ್‌ನ ಮೇಮ್ ಮಡಿಯೋರ್ ಬೋಯೆ ಮೊದಲಾದವರು ಸೇರಿದ್ದಾರೆ. ಇಂದಿಗೂ ಬಾಂಗ್ಲಾದೇಶದಲ್ಲಿ ಮಹಿಳಾ ಪ್ರಧಾನಿಯೊಬ್ಬರು ಅಧಿಕಾರದಲ್ಲಿದ್ದಾರೆ. ಮಹಿಳೆಯರು ಅತ್ಯಂತ ವೇಗವಾಗಿ ರಾಜಕೀಯ ಪ್ರವೇಶಿಸುತ್ತಿದ್ದಾರೆ. ಅವರು ಪಕ್ಷವನ್ನು ನಡೆಸುವುದು ಮಾತ್ರವಲ್ಲದೆ, ಅಧಿಕಾರದ ಉನ್ನತ ಸ್ಥಾನದಿಂದ ಸರ್ಕಾರವನ್ನು ನಡೆಸುತ್ತಿದ್ದಾರೆ.

Badrinath Dham | ಬದರಿನಾಥ ದೇಗುಲದಲ್ಲಿ 15 ಯಾತ್ರಿಕರ ವಿರುದ್ಧ ಕ್ರಮ ಕೈಗೊಂಡ ಪೊಲೀಸರು..!

ಉತ್ತರಾಖಂಡ | ಪೊಲೀಸರು (Police) ಬದರಿನಾಥ ಧಾಮದಲ್ಲಿ (Badrinath Dham) 15 ಯಾತ್ರಿಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಈ ಯಾತ್ರಾರ್ಥಿಗಳು ದೇವಸ್ಥಾನದ ಆವರಣದಲ್ಲಿ ಮೊಬೈಲ್ ಫೋನ್ (Mobile phone) ಬಳಸುತ್ತಿದ್ದರು ಎನ್ನಲಾಗಿದ್ದು ಅವರೆಲ್ಲರಿಗೂ ದಂಡ ವಿಧಿಸಿದ್ದಾರೆ. ದೇವಾಲಯದ ಆವರಣದಿಂದ 50 ಮೀಟರ್‌ಗಳ ಒಳಗೆ ಮೊಬೈಲ್ ಫೋನ್‌ಗಳ ಬಳಕೆಯನ್ನು (Use of mobile phones) ನಿಷೇಧಿಸಲಾಗಿದೆ. ಈ ಯಾತ್ರಿಕರು ಇಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದರು ಎನ್ನಲಾಗಿದೆ.

Porsche car accident | ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣ : ಆರೋಪಿಯ ತಂದೆಯನ್ನು ಬಂಧಿಸಿದ ಪೊಲೀಸರು – karnataka360.in

ಈ ಯಾತ್ರಾರ್ಥಿಗಳು ರೀಲ್‌ಗಳು ಮತ್ತು ವೀಡಿಯೊಗಳನ್ನು ಮಾಡಲು ಮೊಬೈಲ್ ಫೋನ್‌ಗಳನ್ನು ಬಳಸುತ್ತಿದ್ದರು. ದೇವಸ್ಥಾನದ ಪಾವಿತ್ರ್ಯತೆ ಕಾಪಾಡಲು ಹಾಗೂ ಯಾತ್ರಾರ್ಥಿಗಳಿಗೆ ಅಡ್ಡಿಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ. ಬುಧವಾರ ಆಡಳಿತ ಮಂಡಳಿಯು ಈ ಕ್ರಮ ಕೈಗೊಂಡಿದೆ. ದಂಡವಾಗಿ ಯಾತ್ರಾರ್ಥಿಗಳಿಂದ 500 ರೂ. ಸ್ವೀಕರಿಸಲಾಗಿದೆ. ದೇವಾಲಯದ ಆವರಣದಲ್ಲಿ ಮೊಬೈಲ್ ಫೋನ್ ಬಳಕೆಗೆ ಸಂಬಂಧಿಸಿದಂತೆ ನಿಯಮಗಳನ್ನು ಪಾಲಿಸುವಂತೆ  ಪೊಲೀಸರು ಯಾತ್ರಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಮುಖ್ಯ ಕಾರ್ಯದರ್ಶಿ ರಾಧಾ ರಾತುರಿ ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಎರಡು ಪಟ್ಟು ಭಕ್ತರು ದರ್ಶನಕ್ಕೆ ಆಗಮಿಸುತ್ತಿದ್ದಾರೆ. ಎಲ್ಲಾ ಭಕ್ತರು ಸುಲಭವಾಗಿ ದರ್ಶನ ಪಡೆಯಬಹುದೆಂದು ಖಚಿತಪಡಿಸಿಕೊಳ್ಳಲು, ಆನ್‌ಲೈನ್ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಮುಖ್ಯ ಕಾರ್ಯದರ್ಶಿಯವರ ಆದೇಶದ ಮೇರೆಗೆ ಚಾರ್ ಧಾಮ್ ದೇವಾಲಯದ ಆವರಣದ 50 ಮೀಟರ್ ವ್ಯಾಪ್ತಿಯಲ್ಲಿ ಮೊಬೈಲ್ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ.

xr:d:DAFZ5i7fRwc:1974,j:1545142424808044413,t:23103117

ಇದಲ್ಲದೆ, ಉತ್ತರಾಖಂಡ ಸರ್ಕಾರವು ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ತಮ್ಮ ರಾಜ್ಯಗಳ ಭಕ್ತರಿಗೆ ನೋಂದಣಿ ಇಲ್ಲದೆ ಚಾರ್ಧಾಮ್ ಯಾತ್ರೆಗೆ ಭೇಟಿ ನೀಡಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಲು ಮನವಿ ಮಾಡಿದೆ. ಚೆಕ್ ಪೋಸ್ಟ್ ನಲ್ಲಿ ದಾಖಲಾತಿ ಇಲ್ಲದೆ ಯಾವುದೇ ಭಕ್ತರು ಸಿಕ್ಕಿಬಿದ್ದರೆ ಮುಂದೆ ಹೋಗದಂತೆ ತಡೆಯಲಾಗುತ್ತದೆ.

Shah Rukh Khan | ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ಆಸ್ಪತ್ರೆಗೆ ದಾಖಲು..!

ಮನರಂಜನೆ | ಬಾಲಿವುಡ್ (Bollywood) ಮೆಗಾಸ್ಟಾರ್ ಶಾರುಖ್ ಖಾನ್ (Shah Rukh Khan) ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಅಹಮದಾಬಾದ್‌ನ (Ahmedabad) ಕೆಡಿ ಆಸ್ಪತ್ರೆಗೆ ದಾಖಲಾಗಿದ್ದರು. ನಿರ್ಜಲೀಕರಣ ಮತ್ತು ಕೆಮ್ಮಿನಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹೇಳಲಾಗುತ್ತಿದ್ದು, ಶಾರುಖ್ ಖಾನ್ ಅವರನ್ನು ನಿಗಾ ಘಟಕದಲ್ಲಿ ಇರಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

Actress Vidya murder | ಪತಿಯಿಂದಲೇ ಅಮಾನುಷವಾಗಿ ಹತ್ಯೆಗೀಡಾದ ನಟಿ ವಿದ್ಯಾ..! – karnataka360.in

ಇಂದು (ಬುಧವಾರ) ಶಾರುಖ್ ಖಾನ್ ಅವರನ್ನು ಸಂಜೆ 4 ಗಂಟೆಯ ನಂತರ ಆಸ್ಪತ್ರೆಗೆ ಕರೆತರಲಾಯಿತು. ಐಪಿಎಲ್ 2024 ಕ್ವಾಲಿಫೈಯರ್ 1 ರಲ್ಲಿ ತನ್ನ ತಂಡ ಕೆಕೆಆರ್ ಅನ್ನು ಬೆಂಬಲಿಸಲು ಬಾಲಿವುಡ್ ನಟ ಶಾರುಖ್ ಅಹಮದಾಬಾದ್‌ನಲ್ಲಿದ್ದರು. ಈ ವೇಳೆ ಅವರು ಅಹಮದಾಬಾದ್‌ನ ಐಟಿಸಿ ನರ್ಮದಾ ಹೋಟೆಲ್‌ನಲ್ಲಿ ತಂಗಿದ್ದರು. ಸದ್ಯ ಅವರ ಆರೋಗ್ಯ ಚೆನ್ನಾಗಿದೆ ಎಂದು ಆಸ್ಪತ್ರೆಯಿಂದ ತಿಳಿದುಬಂದಿದೆ.

ಮಂಗಳವಾರ ನಡೆದ ಐಪಿಎಲ್‌ನ ಕ್ವಾಲಿಫಯರ್ 1ರಲ್ಲಿ ಶಾರುಖ್ ಖಾನ್ ತಂಡ ಕೆಕೆಆರ್ ಸ್ಥಾನ ಪಡೆದಿದೆ. ಕ್ವಾಲಿಫೈಯರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹೀನಾಯ ಸೋಲು ಕಂಡಿತ್ತು. ಶಾರುಖ್ ಖಾನ್ ತಮ್ಮ ತಂಡದ ಗೆಲುವನ್ನು ಸಂಭ್ರಮಿಸುತ್ತಿದ್ದರು. ವಿಜಯದ ನಂತರ ಶಾರುಖ್ ಖಾನ್ ತಮ್ಮ ತಂಡದ ಆಟಗಾರರನ್ನು ಅಭಿನಂದಿಸಲು ಮೈದಾನಕ್ಕೆ ಬಂದಿದ್ದರು.

ನಿರ್ಜಲೀಕರಣದ ಕಾರಣ ಆಸ್ಪತ್ರೆಗೆ ದಾಖಲು

ಶಾರುಖ್ ಖಾನ್ ನಿರ್ಜಲೀಕರಣದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲಿ ವೈದ್ಯರು ಅವರನ್ನು ಸ್ವಲ್ಪ ಸಮಯದವರೆಗೆ ತಮ್ಮ ನಿಗಾದಲ್ಲಿ ಇರಿಸಿದರು. ಇದಾದ ಬಳಿಕ ಅವರ ಸ್ಥಿತಿ ಸುಧಾರಿಸಿದ್ದು, ವೈದ್ಯರು ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ. ಇದೀಗ ಶಾರುಖ್ ಖಾನ್ ಆಸ್ಪತ್ರೆಯಿಂದ ವಾಪಸಾಗಿದ್ದಾರೆ.