ಬೀದರ್ | ಶೈಕ್ಷಣಿಕ ಮತ್ತು ಸಂಶೋಧನಾ (Academic and Research) ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಭಾರತೀಯ ನೌಕಾಪಡೆ (Indian Navy) ಹಾಗೂ ಬೀದರ್ (Bidar) ನಗರದ ಗುರುನಾನಕ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್ (Guru Nanak Group of Institutions) ನಡುವೆ ನವದೆಹಲಿಯಲ್ಲಿ ಒಪ್ಪಂದ ಏರ್ಪಟ್ಟಿತು.
Lok Sabha Elections | ಹೈಕಮಾಂಡ್ ಸೂಚನೆಗೆ ಒಲ್ಲೆ ಎಂದ್ರ ಸಚಿವ ಈಶ್ವರ ಖಂಡ್ರೆ..! – karnataka360.in
ಗುರುನಾನಕ್ ಸಂಸ್ಥೆಯ ಅಧ್ಯಕ್ಷ ಎಸ್. ಬಲಬೀರ್ ಸಿಂಗ್ ಮತ್ತು ನೌಕಾಪಡೆಯ ನಿರ್ದೇಶಕ ಕಮೋಡೋರ್ ಜಿ. ರಾಮಬಾಬು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿ, ಕಡತಗಳನ್ನು ವಿನಿಮಯ ಮಾಡಿಕೊಂಡರು.
ಗುರುನಾನಕ್ ಸಮೂಹ ಸಂಸ್ಥೆಗಳ ಉಪಾಧ್ಯಕ್ಷೆ ರೇಷ್ಮಾ ಕೌರ್ ಮಾತನಾಡಿ, ಗುರುನಾನಕ್ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ನೌಕಾಪಡೆಯವರು ತರಬೇತಿ ಕೊಡುವರು. ವಿದ್ಯಾರ್ಥಿಗಳು ನೌಕಾಪಡೆ ಸೇರಲು ಅನುಕೂಲವಾಗಲಿದೆ’ ಎಂದರು.