ಕೃಷಿ ಮಾಹಿತಿ | ಭಾರತೀಯ ಹವಾಮಾನ ಇಲಾಖೆಯ (Indian Meteorological Department) ಮುನ್ಸೂಚನೆಯಂತೆ ತುಮಕೂರು (Tumakuru) ಜಿಲ್ಲೆಯಾದ್ಯಂತ ಆಗಸ್ಟ್ 30 ರಿಂದ ಆಗಸ್ಟ್ 31 ರವರಗೆ ಮಳೆ (Rain) ಯಾಗುವ ಪ್ರಮಾಣ ಕಡಿಮೆಯಿದ್ದು ಒಣ ಹವಾಮಾನ (Meteorological) ಮುಂದುವರಿಯಲ್ಲಿದು ದೀರ್ಘಾವಧಿ ತೋಟಗಾರಿಕೆ (Horticulture) ಬೆಳೆಗಳಿಗೆ ರಕ್ಷಣಾತ್ಮಕ ನೀರಾವರಿ ಒದಗಿಸಿ ಮತ್ತು ಕೃಷಿ ತ್ಯಾಜ್ಯ ವಸ್ತುಗಳನ್ನು ಮರದ ಬುಡದ ಸುತ್ತಲು ಹೋದಿಕೆಯಾಗಿ ಹಾಕಿ ಎಂದು ರೈತರಿಗೆ ತಿಳಿಸಲಾಗಿದೆ.
ಸೆಪ್ಟೆಂಬರ್ 01 ರಿಂದ ಸೆಪ್ಟೆಂಬರ್ 03 ರವರಗೆ ಹಗುರದಿಂದ ಸಾಧಾರಣ ಮಳೆಯಾಗುವ ಸಂಭವವಿದ್ದು ಮಣ್ಣಿನ ತೇವಾಂಶದ ಆಧಾರದ ಮೇಲೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳ ಬಿತ್ತನೆ, ಸಸ್ಯ ಸಂರಕ್ಷಣೆ ಸಿಂಪರಣೆ, ರಾಸಾಯನಿಕ ಗೊಬ್ಬರಗಳ ಬಳಕೆ ಮಾಡಬಹುದಾಗಿದೆ.
ಜನವರಿ 1 ರಿಂದ ಆಗಸ್ಟ್ 29 ರವರಿಗೆ ತುಮಕೂರು ಜಿಲ್ಲೆಯ ಮಳೆಯ ವಿವರ (ಮಿ.ಮೀ) ವಾಡಿಕೆ ಮಳೆ-333, ವಾಸ್ತವಿಕ ಮಳೆ -343.ಆಗಸ್ಟ್ ತಿಂಗಳ ತುಮಕೂರು ಜಿಲ್ಲೆಯ ಮಳೆಯ ವಿವರ (ಮಿ.ಮೀ) ವಾಡಿಕೆ ಮಳೆ-82, ವಾಸ್ತವಿಕ ಮಳೆ -23, ಕೊರತೆ-72%.
ತಾಲ್ಲೂಕುವಾರು ಮಳೆಯ ವಿವರ
ಚಿಕ್ಕನಾಯಕನಹಳ್ಳಿ – ವಾಡಿಕೆ ಮಳೆ-83, ವಾಸ್ತವಿಕ ಮಳೆ-11, ಕೊರತೆ-87%,
ಗುಬ್ಬಿ – ಸಾಮಾನ್ಯ ಮಳೆ-101, ವಾಡಿಕೆ ಮಳೆ-30, ಕೊರತೆ -70%
ಕೊರಟಗೆರೆ – ವಾಡಿಕೆ ಮಳೆ-94, ವಾಸ್ತವಿಕ ಮಳೆ -12, ಕೊರತೆ -57%
ಕುಣಿಗಲ್ – ವಾಡಿಕೆ ಮಳೆ-109 ವಾಸ್ತವಿಕ ಮಳೆ -37, ಕೊರತೆ -66%
ಮಧುಗಿರಿ – ವಾಡಿಕೆ ಮಳೆ-88 ವಾಸ್ತವಿಕ ಮಳೆ -11, ಕೊರತೆ-87%
ಪಾವಗಡ – ವಾಡಿಕೆ ಮಳೆ-82, ವಾಸ್ತವಿಕ ಮಳೆ -16, ಕೊರತೆ -81%
ಶಿರಾ – ವಾಡಿಕೆ ಮಳೆ-75 ವಾಸ್ತವಿಕ ಮಳೆ -25, ಕೊರತೆ -67%
ತಿಪಟೂರು – ವಾಡಿಕೆ ಮಳೆ-70 ವಾಸ್ತವಿಕ ಮಳೆ-21, ಕೊರತೆ -70%
ತುಮಕೂರು- ವಾಡಿಕೆ ಮಳೆ – 110 ವಾಸ್ತವಿಕ ಮಳೆ, – 31, ಕೊರತೆ -72%
ತುರುವೇಕೆರೆ- ವಾಡಿಕೆ ಮಳೆ-85, ವಾಸ್ತವಿಕ ಮಳೆ -33, ಕೊರತೆ-61%
ತಿಪಟೂರು ತಾ. ಕೊನೇಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿರುವ ಜಿಲ್ಲಾ ಕೃಷಿ ಹವಾಮಾನ ಘಟಕದ ನೋಡಲ್ ಅಧಿಕಾರಿಗಳು ಹಾಗೂ ಮುಖ್ಯಸ್ಥರಾದ ಡಾ. ಗೋವಿಂದ ಗೌಡ. ವಿ. ರವರು ಮಾಹಿತಿ ನೀಡಿರುತ್ತಾರೆ.