ನವದೆಹಲಿ | ಅಂತರರಾಷ್ಟ್ರೀಯ ಹಣಕಾಸು ನಿಧಿ (IMF) ಏಪ್ರಿಲ್ 22, 2025 ರಂದು ಬಿಡುಗಡೆ ಮಾಡಿದ ವರದಿಯಲ್ಲಿ, ಭಾರತವು ಜಪಾನ್ ಅನ್ನು ಮೀರಿ ಪ್ರಪಂಚದ ನಾಲ್ಕನೇ ಅತಿದೊಡ್ಡ ಆರ್ಥಿಕ (India 4th Largest Economy) ಶಕ್ತಿಯಾಗಿ ಹೊರಹೊಮ್ಮಿರುವುದಾಗಿ ಘೋಷಿಸಿದೆ. ಈ ಘೋಷಣೆಯೊಂದಿಗೆ ಭಾರತ ತನ್ನ $4.19 ಟ್ರಿಲಿಯನ್ ಆರ್ಥಿಕತೆಯಿಂದ ಜಪಾನ್ ನಿಂದ ಮುನ್ನಡೆ ಪಡೆದಿದೆ.
ಭಾರತವು ಈಗ ನಾಲ್ಕನೇ ಅತಿದೊಡ್ಡ ಆರ್ಥಿಕ (India 4th Largest Economy) ಶಕ್ತಿ
ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರು ಮೇ 25, 2025 ರಂದು ನಡೆದ 10ನೇ ನೀತಿ ಆಯೋಗದ ಗವರ್ನಿಂಗ್ ಕೌನ್ಸಿಲ್ ಸಭೆಯಲ್ಲಿ ಮಾತನಾಡಿ, ಇದೀಗ ಭಾರತ $4 ಟ್ರಿಲಿಯನ್ ಆರ್ಥಿಕತೆಯುಳ್ಳ (India 4th Largest Economy) ದೇಶವಾಗಿದೆ. ಇದು ನನ್ನ ಅಂಕಿ ಅಂಶವಲ್ಲ, IMF ಅಧಿಕೃತ ಅಂಕಿಅಂಶ,” ಎಂದು ತಿಳಿಸಿದ್ದಾರೆ.
ಸುಬ್ರಹ್ಮಣ್ಯಂ ಮುಂದಿನ 2 ರಿಂದ 3 ವರ್ಷಗಳಲ್ಲಿ ಭಾರತ ಜರ್ಮನಿಯನ್ನೂ ಮೀರಿ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿ ಪರಿಣಮಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ. “ನಾವು ಯೋಜನೆಯಂತೆ ಸಾಗಿದರೆ, ಜರ್ಮನಿಯನ್ನೂ ನಾವು ಮೀರುತ್ತೇವೆ ಎಂದು ಹೇಳಿದ್ದಾರೆ.
ಇದನ್ನು : Karnataka Covid Update | ಎಚ್ಚರ..! ರಾಜ್ಯದಲ್ಲಿ ಹೆಚ್ಚಾಗುತ್ತಿದೆ ಕೋವಿಡ್ – 19 ಮಹಾಮಾರಿ
2025ರ ಟಾಪ್ 10 ಆರ್ಥಿಕತೆಗಳ ಪಟ್ಟಿ (IMF ಅಂಕಿಅಂಶಗಳ ಪ್ರಕಾರ)
1. ಅಮೆರಿಕಾ – $30.51 ಟ್ರಿಲಿಯನ್
2. ಚೀನಾ – $19.23 ಟ್ರಿಲಿಯನ್
3. ಜರ್ಮನಿ – $4.74 ಟ್ರಿಲಿಯನ್
4. ಭಾರತ – $4.19 ಟ್ರಿಲಿಯನ್
5. ಜಪಾನ್ – $4.19 ಟ್ರಿಲಿಯನ್
6. ಬ್ರಿಟನ್ – $3.84 ಟ್ರಿಲಿಯನ್
7. ಫ್ರಾನ್ಸ್ – $3.21 ಟ್ರಿಲಿಯನ್
8. ಇಟಲಿ – $2.42 ಟ್ರಿಲಿಯನ್
9. ಕನೆಡಾ – $2.23 ಟ್ರಿಲಿಯನ್
10. ಬ್ರೆಜಿಲ್– $2.13 ಟ್ರಿಲಿಯನ್
IMF ವರದಿಯ ಪ್ರಕಾರ, 2025–26ರಲ್ಲಿ ಭಾರತದ GDP $4.28 ಟ್ರಿಲಿಯನ್ ತಲುಪಲಿದೆ. ಜಪಾನ್ನ GDP ಇದೇ ಅವಧಿಯಲ್ಲಿ $4.18 ಟ್ರಿಲಿಯನ್ ಆಗಿರಲಿದೆ. ಇದು ಭಾರತ ವಿಶ್ವದ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯೆಂಬುದನ್ನು ಮತ್ತೆ ಒತ್ತಿಹೇಳುತ್ತದೆ.