ಚಿಕ್ಕಮಗಳೂರು | ಅಂದು ಮಹಿಳೆ ಅಡುಗೆ ಮನೆ ಮಕ್ಕಳು ಸಂಸಾರ ಅಂಥಾ ಇದ್ದ ಕಾಲ, ಇಂದು ಮಹಿಳೆ ಪುರಷನ ಸರಿಸಮನವಾಗಿ ಸಾಧನೆ ಮಾಡುವಷ್ಟು ಏತ್ತರಕ್ಕೆ ಬೆಳೆದಿದ್ದಾಳೆ. ಅದರಲ್ಲೂ ಭಾರತೀಯ ಮಹಿಳೆ ಇಡೀ ಜಗತ್ತು ಭಾರತದತ್ತ ತಿರುಗಿ ನೊಡುವಂತಿ ಮಾಡಿದ್ದಾಳೆ.
ಹೌದು,, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ 3 ಮಿಷನ್ ಯಶಸ್ವಿಯಾಗಿ ಉಡಾವಣೆಯಾಗಿದ್ದು, ಈ ತಂಡದಲ್ಲಿ ಹಲವಾರು ಮಹಿಳಾ ವಿಜ್ಞಾನಿಗಳು ಕೂಡ ಭಾಗಿಯಾಗಿದ್ದರು.
ಅದರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರನ ಡಾ. ಕೆ.ನಂದಿನಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ. ಇದರಿಂದಾಗಿ ಇಲ್ಲಿನ ಜನರಿಗೆ ಹೆಮ್ಮೆ ಮೂಡಿಸಿದೆ ಎಂದು ಡಾ. ಕೆ.ನಂದಿನಿಯವರ ತಂದೆ ಕೇಶವಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.
ನನ್ನ ಮಗಳ ಜನ್ಮ ದಿನದಂದು ಚಂದ್ರಯಾನ ಯಶಸ್ವಿಯಾಗಿ ಉಡಾವಣೆಯಾಗಿದ್ದು ನಮ್ಮ ಜಿವನದ ಅಮುಲ್ಯವಾದ ದಿನ ಎಂದು ಅವರ ಇಡೀ ಕುಟುಂಬ ಸಂತಸಪಟ್ಟಿದೆ.