Site icon Karnataka 360

Illegal Tutorials | ಟುಟೋರಿಯಲ್ ನಡೆಸಿದ್ರೆ ಮುಲಾಜಿಲ್ಲದೆ ಕ್ರಮ

ತುಮಕೂರು | ಪ್ರಥಮ ಹಾಗೂ ದ್ವಿತೀಯ ಪಿಯುಸಿ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಖಾಸಗಿ ಟುಟೋರಿಯಲ್ (Illegal Tutorials) ಇನ್ಸಿಟ್ಯೂಷನ್‌ಗಳನ್ನು ನಡೆಸುವವರು ಕರ್ನಾಟಕ ಟುಟೋರಿಯಲ್ ಇನ್ಸ್ಟಿಟ್ಯೂಷನ್ ನಿಯಮಾವಳಿಯನ್ವಯ ಕಡ್ಡಾಯವಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ಅನುಮತಿ ಪಡೆಯಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಡಾ. ಬಾಲಗುರುಮೂರ್ತಿ ಹೇಳಿದ್ದಾರೆ.

ಇದನ್ನು ಓದಿ : Hombale Films | ಬಹು ದೊಡ್ಡ ಘೋಷಣೆ ಮಾಡಿದ ಕನ್ನಡದ ಹೆಮ್ಮೆ ಹೊಂಬಾಳೆ ಫಿಲ್ಮ್ಸ್

ಅನುಮತಿ ಇಲ್ಲದೆ ಟುಟೋರಿಯಲ್ (Illegal Tutorials) ನಡೆಸಿದರೆ ಕಾನೂನು ಕ್ರಮ

ಅನುಮತಿ ಇಲ್ಲದೆ ಟುಟೋರಿಯಲ್ (Illegal Tutorials) ನಡೆಸಿದರೆ ಕಾನೂನು ಕ್ರಮ ಅನಿವಾರ್ಯ, ಎಂದು ಅವರು ಎಚ್ಚರಿಸಿದ್ದಾರೆ. ಶುಕ್ರವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪದವಿ ಪೂರ್ವ ಪಠ್ಯಕ್ರಮಕ್ಕೆ ತಯಾರಿ ನೀಡುವ ಹೆಸರಿನಲ್ಲಿ ಕೆಲವು ಸಂಸ್ಥೆಗಳು ಹಾಗೂ ವ್ಯಕ್ತಿಗಳು ಅನುಮತಿಯಿಲ್ಲದೆ ಟುಟೋರಿಯಲ್ ಕೇಂದ್ರಗಳನ್ನು ನಡೆಸುತ್ತಿದ್ದಾರೆ. ಇಂತಹ ಸಂಸ್ಥೆಗಳ ವಿರುದ್ಧ ಶೀಘ್ರದಲ್ಲೇ ಪರಿಶೀಲನೆ ನಡೆಸಿ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳುಮಾಡಬಾರದಂತೆ ಮತ್ತು ಶಿಕ್ಷಣದ ಗುಣಮಟ್ಟವನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತಿದೆ ಎಂದರು.

Exit mobile version