Thursday, December 12, 2024
HomeUncategorisedHybrid Cow | ತುಮಕೂರು ಜಿಲ್ಲೆ ರೈತರಿಗೆ ಗುಡ್ ನ್ಯೂಸ್ : ಮಿಶ್ರತಳಿ ಹಸು ಘಟಕ...

Hybrid Cow | ತುಮಕೂರು ಜಿಲ್ಲೆ ರೈತರಿಗೆ ಗುಡ್ ನ್ಯೂಸ್ : ಮಿಶ್ರತಳಿ ಹಸು ಘಟಕ ನಿರ್ಮಾಣ ಮಾಡಲು ಸಹಾಯಧನ

ಕೃಷಿ ಮಾಹಿತಿ | ಹಾಲು ಉತ್ಪಾದಕರಿಗೆ (Milk producer) ಉತ್ತೇಜನ ನೀಡುವ ಸಲುವಾಗಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು (Department of Animal Husbandry and Veterinary Services) ಒಂದು ಮಿಶ್ರತಳಿ ಹಸು (hybrid cow) ಘಟಕದ ಅನುಷ್ಠಾನಕ್ಕಾಗಿ ಸಹಾಯಧನ ಸೌಲಭ್ಯ ನೀಡಲು ಅರ್ಹ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ (Scheduled Caste / Scheduled Tribe) ರೈತಾಪಿ ಜನರಿಂದ ಅರ್ಜಿ ಆಹ್ವಾನಿಸಿದೆ.

Tumkur  | ಹೊರ ರಾಜ್ಯಗಳಿಗೆ ಮೇವು ಸರಬರಾಜು ಮಾಡಿದ್ರೆ ಜೈಲು ಗ್ಯಾರಂಟಿ..! – karnataka360.in

ಮಿಶ್ರತಳಿ ಹಸು ಘಟಕದ ಮೊತ್ತ 65,000/- ರೂ.ಗಳಾಗಿದ್ದು, ಇದರಲ್ಲಿ ಸಹಾಯ ಧನ 58,500/- ರೂ. (ಶೇ.90%) ಒಳಗೊಂಡಿರುತ್ತದೆ. ಉಳಿದ ಮೊತ್ತವನ್ನು ಫಲಾನುಭವಿ ವಂತಿಕೆ / ಸಾಲದ ರೂಪದಲ್ಲಿ ಬ್ಯಾಂಕಿನಿಂದ 6,500 ರೂ.(ಶೇ.10%)ರಷ್ಟು ಪಡೆಯಬೇಕಾಗುತ್ತದೆ.

ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯತ್ವವನ್ನು ಹೊಂದಿರುವ ಆಸಕ್ತ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವರು ನವೆಂಬರ್ 29ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿದಾರರು ಫ್ರೂಟ್ ಐಡಿಯ ಗುರುತಿನ ಸಂಖ್ಯೆ ಹೊಂದಿರಬೇಕು. ಆಯ್ಕೆಗೊಂಡ ಫಲಾನುಭವಿಗಳು ಕಡ್ಡಾಯವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರಾಗಿರಬೇಕು ಅಥವಾ ಕಡ್ಡಾಯವಾಗಿ ಸದಸ್ಯತ್ವ ಪಡೆದಿರಬೇಕು. ಆಯ್ಕೆಗೊಂಡ ಫಲಾನುಭವಿಯು ಸ್ವತ್ತು ಪಡೆದ ನಂತರ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಡ್ಡಾಯವಾಗಿ ಹಾಲು ಪೂರೈಸುವ ಷರತ್ತಿಗೆ ಒಳಪಟ್ಟು ವ್ಯವಸ್ಥಾಪಕ ನಿರ್ದೇಶಕರು / ಪ್ರತಿನಿಧಿಯಿಂದ ದೃಢೀಕರಿಸಿದ ಮುಚ್ಚಳಿಕೆ ಸಲ್ಲಿಸಬೇಕು. ಕಳೆದ 5 ವರ್ಷಗಳಲ್ಲಿ ಪಶುಪಾಲನಾ ಇಲಾಖೆಯಲ್ಲಿ ವಿವಿಧ ಯೋಜನೆಗಳಲ್ಲಿ ಹೈನುಗಾರಿಕೆ ಸಹಾಯಧನ ಸವಲತ್ತು ಪಡೆದಿರುವ ಕುಟುಂಬಗಳು ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.

ಅರ್ಜಿ ಸಲ್ಲಿಸುವವರು ತಮ್ಮ ಅರ್ಜಿಯೊಂದಿಗೆ ಆರ್.ಡಿ.ನಂಬರ್ ಇರುವ ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಲಗತ್ತಿಸಬೇಕು. ಅರ್ಜಿದಾರರು FRUITS ತಂತ್ರಾಂಶದಲ್ಲಿ ನೋಂದಣಿಯಾಗಿರಬೇಕು. ವಿಶೇಷ ಚೇತನರಾಗಿದ್ದಲ್ಲಿ ಅಗತ್ಯ ಪ್ರಮಾಣ ಪತ್ರ ಹಾಗೂ ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಬೇಕು.

ಅರ್ಜಿ ಮತ್ತು ಹೆಚ್ಚಿನ ಮಾಹಿತಿಗಾಗಿ ಆಯಾ ತಾಲ್ಲೂಕುಗಳ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ)ಗಳ ಕಚೇರಿಯನ್ನು ಸಂಪರ್ಕಿಸಲು ಕೋರಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments