ತುಮಕೂರು | ತಾನು ಭಾರತೀಯ ಸೇವೆಗೆ ಸೇರಬೇಕು, ದೇಶ ಸೇವೆ ಮಾಡಬೇಕು ಎಂದು ಕನಸು ಕಟ್ಟಿರುವ ಯುವಕರಿಗೆ ತುಮಕೂರಿನ ಮಾಜಿ ಸೈನಿಕರು ಸುವರ್ಣ ಅವಕಾಶವನ್ನು ನೀಡಿದ್ದಾರೆ.
ಹೌದು,, ತುಮಕೂರು ನಗರ ಮತ್ತು ಜಿಲ್ಲೆಯ 17 ರಿಂದ 21 ವರ್ಷದ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಮುಗಿಸಿದ ಯುವಕರಿಗೆ ಸೇನೆ ಸೇರಲು ಇಚ್ಛೆ ಪಡುವರಲ್ಲಿ ದೇಶಭಕ್ತಿ, ದೃಢತೆ ಮತ್ತು ವೀರತನ, ಆರೋಗ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಮೂಡಿಸುವ ಸಲುವಾಗಿ ಜಿಲ್ಲೆಯ ಮಾಜಿ ಸೈನಿಕರುಗಳು ಉಚಿತ ತರಬೇತಿಯನ್ನು ನೀಡಲು ಬಯಸಿದ್ದಾರೆ.
ತುಮಕೂರಿನ ಮಾದನಾಯಕನಹಳ್ಳಿ ಬಳಿ ಇರುವ ಬ್ರಹ್ಮ ಚೈತನ್ಯ ಆಶ್ರಮದ ಬಳಿ ತರಬೇತಿ ನೀಡಲಾಗುತ್ತದೆ. ತರಬೇತಿಯನ್ನು ಬಯಸುವ ಯುವಕರು 8310258226, 9481522018, 9686568925, 8861227636, 9480153920 ಸಂಖ್ಯೆಗೆ ಸಂಪರ್ಕ ಮಾಡಬಹುದಾಗಿದೆ.