Hemavathi Link Canal | ಸೆಕ್ಷನ್ 144 ಹಾಕಿದ್ರೆ ಕಚ್ಚೇನು ಕಟ್ಟಲ್ಲ ನಮ್ಮ ಹೋರಾಟ ಮಾಡಿಯೇ ಮಾಡುತ್ತೇವೆ

ತುಮಕೂರು | ಹೇಮಾವತಿ ಲಿಂಕ್ ಕೆನಾಲ್ (Hemavathi Link Canal) ಯೋಜನೆಗೆ ಸಂಬಂಧಿಸಿದಂತೆ ತುಮಕೂರಿನಲ್ಲಿ ರಾಜಕೀಯ ಮತ್ತು ರೈತ ಸಂಘಟನೆಗಳ ಚಟುವಟಿಕೆ ಗರಿಷ್ಠ ಮಟ್ಟ ತಲುಪಿದೆ. ಈ ಯೋಜನೆ ವಿರೋಧಿಸಿ ನಾಳೆ ಬಿಜೆಪಿ ಹಾಗೂ ವಿವಿಧ ರೈತ ಪರ ಸಂಘಟನೆಗಳು ಗುಬ್ಬಿ ತಾಲೂಕಿನಲ್ಲಿ ಭಾರೀ ಪ್ರತಿಭಟನೆ ನಡೆಸಲು ಸಜ್ಜಾಗಿವೆ.

ಇದನ್ನು ಓದಿ : Chand Symbol Sheep | ಏಳು ತಿಂಗಳ ಈ ಕುರಿಗೆ 3.50 ಲಕ್ಷ ಅಂತೆ..!

ಬಿಜೆಪಿ ಶಾಸಕ ಸುರೇಶ್ ಗೌಡ ಅವರು ಈ ಕುರಿತು ಸ್ಫೋಟಕ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಈ ಕೆನಾಲ್ ಯೋಜನೆಗೆ (Hemavathi Link Canal) ಅನುಮೋದನೆ ನೀಡಿತು ಎಂದು ಆರೋಪಿಸಿದರು. ಡಿಕೆ ಶಿವಕುಮಾರ್ ಮತ್ತು ಪರಮೇಶ್ವರ್ ಅವರ ಮುಂದೆ ಈ ಯೋಜನೆಗೆ ವಿರೋಧಿಸಿ ನಾವೇ ಧರಣಿ ಮಾಡಿದ್ದೆವು. ಆದರೂ ರೈತರ ಹೋರಾಟಕ್ಕೆ ಲಕ್ಷ್ಯವಿಲ್ಲದೇ, ಒಬ್ಬರ ಅನುಕೂಲಕ್ಕಾಗಿ ಯೋಜನೆ ರೂಪಿಸುತ್ತಿದ್ದಾರೆ ಎಂದರು.

ಲಿಂಕ್ ಕೆನಾಲ್ ಯೋಜನೆಗೆ (Hemavathi Link Canal) ವಿರೋಧಿಸಿ ಸುರೇಶ್ ಗೌಡ ಎಚ್ಚರಿಕೆ

ಮೂಲ ಯೋಜನೆಗೆ ದಿಕ್ಕು ತಪ್ಪಿಸಿ ಡೈವರ್ಷನ್ ಮಾಡುವ ಪ್ರಯತ್ನಕ್ಕೂ ವಿರೋಧ ಇದೆ. ಕುಣಿಗಲ್‌ಗೆ ನೀರು ಹರಿಯೋದಕ್ಕೆ ನಮ್ಮ ತಕರಾರಿಲ್ಲ, ಆದರೆ ನಮ್ಮ ಹಕ್ಕಿನ ನೀರನ್ನು ಕಿತ್ತುಕೊಳ್ಳೋ ಯೋಜನೆ ಇದಾಗಿರುವ ಕಾರಣ ನಾಳೆ ಎಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಆದರೆ ಜಿಲ್ಲೆಯಲ್ಲಿನ ಎಲ್ಲಾ ಶಾಸಕರು ಟೆಕ್ನಿಕಲ್ ಕಮಿಟಿಯಲ್ಲಿ ಒಪ್ಪಿಗೆ ನೀಡಿದ್ದಾರೆ ಎಂಬ ಕುಣಿಗಲ್ ಶಾಸಕ ಡಾ. ರಂಗನಾಥ್ ಹೇಳಿಕೆಗೆ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಡಿಪಿ ಸಭೆಯಲ್ಲಿ ಮತ್ತು ಪರಮೇಶ್ವರ್ ನೇತೃತ್ವದ ಸಮಿತಿಯಲ್ಲೂ ನಾವು ವಿರೋಧಿಸಿದ್ದೇವೆ ಎಂದು ತಿಳಿಸಿದರು.

ಶಾಂತಿಯುತ ಹೋರಾಟ ನಡೆಸಲಾಗುವುದು ಎಂದು ಘೋಷಿಸಿದ ಸುರೇಶ್ ಗೌಡ, ನಾವು ಗಾಂಧೀಯ ಮಾರ್ಗದಲ್ಲಿಯೇ ಸಾಗುತ್ತೇವೆ, ಆದರೆ ಸತ್ತರೂ ಹೋರಾಟ ನಿಲ್ಲಿಸುವುದಿಲ್ಲ. 144 ಸೆಕ್ಷನ್ ಜಾರಿಗೊಳಿಸಿರುವುದನ್ನು ನಾವು ಲೆಕ್ಕಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇದಲ್ಲದೇ, ನಮ್ಮ ಅಧಿಕಾರ ಶಾಶ್ವತವಲ್ಲ, ರೈತರ ಹಕ್ಕು ಶಾಶ್ವತ ಎಂದು ಅವರು ರೈತಪಕ್ಷದ ನಿಲುವು ಸ್ಪಷ್ಟಪಡಿಸಿದರು. ಸಿದ್ದರಾಮಯ್ಯ ಮತ್ತು ಡಿಕೆಶಿ ಸಾರ್ವಜನಿಕ ಸಭೆ ಕರೆದು ಸ್ಪಷ್ಟನೆ ನೀಡಲಿ. ಜಿಲ್ಲೆಯ ಎಲ್ಲಾ ಶಾಸಕರನ್ನು ಒಳಗೊಂಡು ತುರ್ತು ಸಭೆ ನಡೆಯಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *