ಹಾಸನ | ಇದು ಕೇವಲ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಅಲ್ಲ, ಇದು ಎಲ್ಲಾ ಸಂಘಟನೆಯ ಕಾರ್ಯಕರ್ತರ ಕಾರ್ಯಕ್ರಮ ಎಂದು ಹಾಸನದಲ್ಲಿ ನಡೆಯುತ್ತಿರುವ ಜನ ಕಲ್ಯಾಣ ಸಮಾವೇಶದ (Hasana samavesha) ಆರಂಭಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಕೆ ಎನ್ ರಾಜಣ್ಣ ಹೇಳಿದ್ದಾರೆ.
ಇತಿಹಾಸ ಪುಟ ಸೇರುವ ಸಮಾವೇಶ ಇದಾಗಲಿದೆ. ಇಂತಹ ಸಮಾವೇಶ ಹಿಂದೆಯೂ ನೆಡೆದಿಲ್ಲ ಮುಂದೆಯೂ ನೆಡೆಯುತೋ ಗೊತ್ತಿಲ್ಲ. ಇಂತಹ ಸಮಾವೇಶಕ್ಕೆ ನಾನು ಸಾಕ್ಷಿ ಆಗುತ್ತಿದ್ದೇನೆ. ಹಾಸನ ಜೆಡಿಎಸ್ನ ಭದ್ರಕೋಟೆ ಎಂಬ ಮಾತಿಗಾಗಲೇ ಸುಳ್ಳಾಗಿದೆ. ಮತದಾರರು ಈಗಾಗಲೇ ಲೋಕಸಭಾ ಚುನಾವಣೆಯಲ್ಲಿ ಅದನ್ನು ಸಾಬೀತು ಮಾಡಿದ್ದಾರೆ ಎಂದರು.
ಹಾಸನ ಲೋಕ ಸಭಾ ಸದಸ್ಯರಾದ ಶೇಯಸ್ ಪಟೇಲ್ ಮಾತನಾಡಿ, ಈ ಸಮಾವೇಶಕ್ಕೆ ಯಾವುದೇ ಗೊಂದಲ ಇಲ್ಲ. ಸಿದ್ದರಾಮಯ್ಯ ಅಭಿಮಾನಿಗಳು ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಮಾಡುತ್ತಿದ್ದೇವೆ. ಇದು ನಾವು ಯಾರ ಮೇಲೂ ಸೇಡು ತಿಳಿಸಿಕೊಳ್ಳುತ್ತಿಲ್ಲ, ಬದಲಾಗಿ ನಮ್ಮ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ಈ ಸಮಾವೇಶ ಮಾಡುತ್ತಿದ್ದೇವೆ ಎಂದರು.