ತುಮಕೂರು | 5ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ (girl) ತೊಡೆಗೆ ಕಾದ ಇಸ್ತ್ರಿ ಪೆಟ್ಟಿಗೆಯನ್ನು (Ironing box) ಇಟ್ಟು ದೊಡ್ಡಮ್ಮ ಕಿರುಕುಳ (Harassment) ನೀಡಿರುವ ಘಟನೆ ನೆರೆ ರಾಜ್ಯವಾದ ಆಂಧ್ರಪ್ರದೇಶದ (Andhra Pradesh) ಮಡಕಶಿರಾ ತಾಲೂಕಿನ ನಿದ್ರಘಟ್ಟೆ (sleepy) ಗ್ರಾಮದಲ್ಲಿ ನಡೆದಿದೆ.
ಬಾಲಕಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಟ್ಟಿದ್ದ ಹಣದ ಆಸೆಗೆ ಮಧುಗಿರಿ ತಾಲೂಕಿನ ಪೂಜಾರಹಳ್ಳಿ ಗ್ರಾಮದ ನಿವಾಸಿಯಾಗಿರುವ ಬಾಲಕಿ ಲಕ್ಷ್ಮಿ ಅವರಿಗೆ ದೊಡ್ಡಮ್ಮ ನಂಜಮ್ಮ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಬಾಲಕಿ ಲಕ್ಷ್ಮಿ ಅವರ ತಾಯಿ ನರಸಮ್ಮ ಮೃತಪಟ್ಟಿದ್ದು, ತನ್ನ ಮಗಳಿಗಾಗಿ ತಾಯಿಯು ಸುಮಾರು 4 ಲಕ್ಷ ಹಣವನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಇಟ್ಟಿದ್ದರು. ಈ ಹಣವನ್ನು ನಂಜಮ್ಮ ಲಪಟಾಯಿಸುವ ಸಲುವಾಗಿ ಬಾಲಕಿಯ ತೊಡೆಯನ್ನು ಇಸ್ತ್ರಿ ಪೆಟ್ಟಿಗೆಯಿಂದ ಸುಟ್ಟು ಚಿತ್ರ ಹಿಂಸೆ ಕೊಟ್ಟಿದ್ದಾಳೆ.
5 ನೇ ತರಗತಿ ಓದುತ್ತಿದ್ದ ಬಾಲಕಿ ಸೋಮವಾರ ಪರೀಕ್ಷೆಗೆ ಹಾಜರಾಗಿರಲಿಲ್ಲ. ಹೀಗಾಗಿ ಶಿಕ್ಷಕರು ಮತ್ತು ಸಂಬಂಧಿಕರು ಬಾಲಕಿಯನ್ನು ಊರಿಗೆ ಕರೆಸಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಇನ್ನು ಈ ಸಂಬಂಧ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.