ಮೈಸೂರು | ಇದುವರೆಗೆ ಕಾಂಗ್ರೆಸ್ (Congress) ನಾಯಕರನ್ನು ಹೊಗಳುತ್ತಾ ಬಿಜೆಪಿ (BJP) ನಾಯಕರನ್ನು ತೆಗಳುತ್ತಿದ್ದ ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ (H. Vishwanath) ಇದೀಗ ಬಿಜೆಪಿಯ ಮೈಸೂರು ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ್ (Yaduveer) ಪರ ಬ್ಯಾಟಿಂಗ್ ಮಾಡುತ್ತಿರುವುದು ಕಾಂಗ್ರೆಸ್ ನಾಯಕರ (Congress leaders) ಆಕ್ರೋಶಕ್ಕೆ ಕಾರಣವಾಗಿದೆ.
Siddaramaiah | ರಾಜಕೀಯ ನಿವೃತ್ತಿ ಘೋಷಣೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ..! – karnataka360.in
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಪರ ಹೆಚ್. ವಿಶ್ವನಾಥ್ ಬ್ಯಾಟ್ ಬೀಸಿರುವ ವಿಚಾರ ಕುರಿತು ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಪ್ರತಿಕ್ರಿಯೆ ನೀಡಿ ಹೆಚ್. ವಿಶ್ವನಾಥ್ ಈಗಾಗಲೇ ಬಿಜೆಪಿಯಿಂದ ಎಂಎಲ್ ಸಿ ಆಗಿದ್ದಾರೆ. ಅವರು ಬಿಜೆಪಿ ಪಕ್ಷದವರು. ಅವರ ಅಭ್ಯರ್ಥಿ ಪರ ನಿಲ್ಲುವುದು ಸಹಜ. ಅವರು ನಮ್ಮ ಪಕ್ಷದವರಲ್ಲ ಹಾಗಾಗಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದಿದ್ದಾರೆ.
ನನ್ನ ಪರವಾಗಿ ಸಿಎಂ, ಡಿಸಿಎಂ ನಮ್ಮ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ. ನಮ್ಮ ಸರ್ಕಾರದ ಯೋಜನೆಗಳು, ಜನಪರ ಆಡಳಿತ ನನ್ನ ಕೈಹಿಡಿಯಲಿವೆ ಎಂಬ ನಂಬಿಕೆ ಇದೆ. ಪ್ರತಾಪ್ ಸಿಂಹ ನನ್ನ ಸ್ನೇಹಿತ, ಸೈದ್ದಾಂತಿಕವಾಗಿ ನಮ್ಮಲ್ಲಿ ಜೊತೆ ಭಿನ್ನಾಭಿಪ್ರಾಯ ಇರಬಹುದು. ನಾವು ಹೊರಗಡೆ ಬಂದರೆ ಜೊತೆಗೆ ಕುಳಿತು ಕಾಫಿ ಕುಡಿಯುತ್ತೇವೆ. ಫೋನಿನಲ್ಲಿ ಮಾತಾಡುತ್ತೇವೆ ಬೇಕಾದರೆ ಈಗಲೇ ಫೋನ್ ಮಾಡಬೇಕಾ..? ಪ್ರತಾಪ್ ಸಿಂಹ ಸುಮ್ಮನೆ ರಾಜಕೀಯವಾಗಿ ನನ್ನನ್ನ ಟೀಕೆ ಮಾಡ್ತಾರೆ ಅಷ್ಟೇ.
ಅವರು ನಾನು ಒಕ್ಕಲಿಗ ಅಲ್ಲಾ ಅನ್ನೋದಾದರೆ ಅದನ್ನು ಸಾಬೀತು ಪಡಿಸಲಿ, ಜೊತೆಗೆ ನನ್ನ ಜೈಲಿಗೆ ಕಳುಹಿಸುತ್ತೇನೆ ಎಂದಿದ್ದಾರೆ ಆದಷ್ಟು ಬೇಗ ಕಳುಹಿಸಲಿ. ನನ್ನ ಬಗ್ಗೆ ಮಾತನಾಡುವ ಬದಲು ನಿಮಗೆ ಟಿಕೆಟ್ ಮಿಸ್ ಮಾಡಿದ್ದು ಯಾರು ಅಂತ ಹೇಳಿ ಎಂದು ಪ್ರತಾಪ್ ಸಿಂಹಗೆ ಟಾಂಗ್ ನೀಡಿದ್ದಾರೆ.