ತುಮಕೂರು | ಕಳ್ಳತನ (Theft) ಆರೋಪದ ಹಿನ್ನೆಲೆಯಲ್ಲಿ ವಶಕ್ಕೆ ಪಡೆದು ಪೊಲೀಸ್ ಠಾಣೆಗೆ (Police Station) ಕರೆದುಕೊಂಡು ಬಂದಿದ್ದ ಆರೋಪಿಯು ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾಗಿರುವಂತಹ ಘಟನೆ ತುಮಕೂರು (Tumkur) ಜಿಲ್ಲೆಯ ಗುಬ್ಬಿ ಪೊಲೀಸ್ ಠಾಣೆಯಲ್ಲಿ (Gubbi Police Station) ನಡೆದಿದೆ.
ಹೌದು,, ಗದಗ ಮೂಲದ ಆರೋಪಿ ಸೈಯದ್ ಆಲಿ ಬಾಳ ಸಾಹೇಬ್ ನದಾಫ್ ಎಂಬಾತನನ್ನು ಕಳ್ಳತನ ಪ್ರಕರಣದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯದ ಅನುಮತಿಯ ಮೇರೆಗೆ ವಿಚಾರಣೆಗಾಗಿ ಗುಬ್ಬಿ ಪೊಲೀಸ್ ಠಾಣೆಯ ಸಿಬ್ಬಂದಿ ದೇವಿಕಾ ದೇವಿ ಅವರು ಠಾಣೆಗೆ ಕರೆದುಕೊಂಡು ಬಂದಿದ್ದರು.
ಇಂದು ಮುಂಜಾನೆ 4.30ರ ಸುಮಾರಿಗೆ ಪೊಲೀಸರ ಕಣ್ತಪ್ಪಿಸಿ ಆರೋಪಿ ಸೈಯದ್ ಆಲಿ ಬಾಳ ಸಾಹೇಬ್ ನದಾಫ್ ಗುಬ್ಬಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದಾನೆ. ಕೊರಿಯೋಗ್ರಾಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಆರೋಪಿಯು ಕಳ್ಳತನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವ ಆರೋಪಿ ಮೂಲತಃ ಗದಗ ಜಿಲ್ಲೆಯ ಹುಲ್ಲೂರು ಗ್ರಾಮದ ನಿವಾಸಿಯಾಗಿದ್ದಾರೆ.
ಇನ್ನು ಆರೋಪಿ ಎಡಗೈ ಮೇಲೆ ಸಿರಿಗನ್ನಡಂ, ಬಲಗೈ ಮೇಲೆ ಎಲ್ಲಾ ಧರ್ಮದ ಹಚ್ಚೆಯನ್ನು ಹಾಕಲಾಗಿದೆ. ಇದೀಗ ಪೊಲೀಸ್ ವಶದಿಂದ ತಪ್ಪಿಸಿಕೊಂಡಿರುವ ಆರೋಪಿಯನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚನೆ ಮಾಡಿ ಪೊಲೀಸ್ರು ಅಖಾಡಕ್ಕೆ ಇಳಿದಿದ್ದಾರೆ. ಈತನೊಬ್ಬ ನಟೋರಿಯಸ್ ಕಳ್ಳನಾಗಿದ್ದು ಒಂಟಿ ಮಹಿಳೆಯರನ್ನೇ ಗುರಿಯಾಗಿರಿಸಿಕೊಂಡು ಕಳ್ಳತನ ಮಾಡಲು ಯತ್ನಿಸುತ್ತಾನೆ ಹೀಗಾಗಿ ಈತನ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಪೊಲೀಸ್ ಸಿಬ್ಬಂದಿ ಸಾರ್ವಜನಿಕರಿಗೆ ಸೂಚನೆ ನೀಡಿದ್ದಾರೆ.