Thursday, December 12, 2024
Homeಜಿಲ್ಲೆಬೆಂಗಳೂರು ನಗರGruha lakshmi scheme | ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಇನ್ನೂ ಬರುತ್ತಿಲ್ಲವೇ..? ಹಾಗಾದ್ರೆ ಹೀಗೆ...

Gruha lakshmi scheme | ಗೃಹಲಕ್ಷ್ಮಿ ಯೋಜನೆಯ ಹಣ ನಿಮಗೆ ಇನ್ನೂ ಬರುತ್ತಿಲ್ಲವೇ..? ಹಾಗಾದ್ರೆ ಹೀಗೆ ಮಾಡಿ..!

ಬೆಂಗಳೂರು | ಚುನಾವಣೆಗೂ (Election) ಮೊದಲು ಕೊಟ್ಟ ಭರವಸೆಯಂತೆ ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಜಾರಿಗೆ ತಂದಿದ್ದು, ಈ ಮೂಲಕ ಗೃಹಿಣಿಯರಿಗೆ 2000 ಪ್ರತಿ ತಿಂಗಳು ಖಾತೆಗೆ (Bank Account) ಜಮಾ ಮಾಡಲಾಗುತ್ತಿದೆ. ಕಳೆದ ಎಂಟು ತಿಂಗಳಿನಿಂದ ಮಹಿಳೆಯರು ತಲಾ ಎರಡು ಸಾವಿರ ರೂಪಾಯಿಗಳಂತೆ ಇಲ್ಲಿಯವರೆಗೆ 14 ರಿಂದ 16 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

Dangerous Dogs | ಕೇಂದ್ರ ಸರ್ಕಾರದ ಸುತ್ತೋಲೆಯನ್ನು ರದ್ದು ಪಡಿಸಿದ ಕರ್ನಾಟಕ ಹೈಕೋರ್ಟ್..! – karnataka360.in

ಆದ್ರೆ ಸಾಕಷ್ಟು ಮಹಿಳೆಯರಿಗೆ ಅರ್ಜಿ ಸಲ್ಲಿಸಿದ ನಂತರವೂ ಹಣ ಬಂದಿಲ್ಲ, ಇಂತಹ ಸಂದರ್ಭದಲ್ಲಿ ಈ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಅಂತಹ ಮಹಿಳೆಯರ ಖಾತೆಗೆ ಹಣ ಹಾಕಲೇಬೇಕು ಎಂದು ಕಟ್ಟುನಿಟ್ಟಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ನಿಮ್ಮ ಖಾತೆಗೆ ಕಾರಣಕ್ಕಾಗಿ ಹಣ ಬರುತ್ತಿಲ್ಲ

* ಆಧಾರ್ ಸೀಡಿಂಗ್ ಬಹಳ ಪ್ರಮುಖವಾದ ಕೆಲಸವಾಗಿದ್ದು ನೀವು ನಿಮ್ಮ ಬ್ಯಾಂಕ್ ಖಾತೆಗೆ (Bank Account) ಆಧಾರ್ ಸೀಡಿಂಗ್ (Aadhaar seeding) ಮಾಡಿಸಿಕೊಳ್ಳಬೇಕು.

* ಇನ್ನು ನಿಮ್ಮ ಖಾತೆಗೆ ಸಂಬಂಧಪಟ್ಟಂತೆ ಯಾವುದೇ ಸಮಸ್ಯೆ ಇದ್ದರೆ, ತಕ್ಷಣ ಬ್ಯಾಂಕ್ ಗೆ ಹೋಗಿ ಪರಿಶೀಲಿಸಿಕೊಳ್ಳಿ. ಸಿಬ್ಬಂದಿಗಳ ಬಳಿ ಮಾಹಿತಿ ಪಡೆದು, ಖಾತೆಯಲ್ಲಿ ಯಾವುದೇ ಅಪ್ಡೇಟ್ ಆಗದೆ ಇದ್ದರೆ ತಕ್ಷಣ ಮಾಡಿಕೊಳ್ಳಿ.

* ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದ್ದರೂ, ನಿಮಗೆ ಎಸ್ಎಂಎಸ್ ಬಾರದೇ ಇರಬಹುದು ಅಂತಹ ಸಂದರ್ಭದಲ್ಲಿ ನೀವು ಬ್ಯಾಂಕಿಗೆ ಹೋಗಿ ನಿಮ್ಮ ಪಾಸ್ ಬುಕ್ ಎಂಟ್ರಿ ಮಾಡಿಸಿ ಆಗ ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ತಿಳಿಯಬಹುದು.

* ತಾಂತ್ರಿಕ ದೋಷಗಳು ಇದ್ದರೆ ಅವುಗಳನ್ನು ತಕ್ಷಣ ಪರಿಹರಿಸಿ ಹಣ ಜಮಾ ಮಾಡಲು ಸಚಿವೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಇವರ ಸಹಾಯ ಪಡೆಯಬಹುದು..?

ನಿಮ್ಮ ಖಾತೆಗೆ ಹಣ ಬಾರದೆ ಇದ್ದರೆ ಅಂಗನವಾಡಿ ಸಹಾಯಕಿಯರು ಮತ್ತು ಆಶಾ ಕಾರ್ಯಕರ್ತೆಯರು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರದ ಜೊತೆಗೆ ಕೈಜೋಡಿಸಿವೆ, ಈ ಹಿನ್ನೆಲೆಯಲ್ಲಿ ನೀವು ಅವರ ಸಹಾಯವನ್ನು ಪಡೆದು ನಿಮ್ಮ ಖಾತೆಗೆ ಹಣ ಬರುವಂತೆ ಮಾಡಿಕೊಳ್ಳಬಹುದು. ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.

ಹಾಗಾಗಿ ಯಾವುದೇ ಮಹಿಳೆ ತಮ್ಮ ಖಾತೆಗೆ ಹಣ ಬಾರದೆ ಇದ್ದಾಗ ಅದರ ಬಗ್ಗೆ ಚಿಂತೆ ಮಾಡದೆ ಆಶಾ ಕಾರ್ಯಕರ್ತೆ ಅಥವಾ ಅಂಗನವಾಡಿ ಸಹಾಯಕಿಯರನ್ನು ಸಂಪರ್ಕಿಸಿ ಅವರಿಗೆ ತಮ್ಮ ಸಮಸ್ಯೆಗಳನ್ನು ತಿಳಿಸಿದರೆ ಪರಿಹಾರ ಪಡೆದುಕೊಳ್ಳಬಹುದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments