Thursday, December 12, 2024
Homeಜಿಲ್ಲೆಬೆಂಗಳೂರು ನಗರGruha Jyothi | ಬೇಸಿಗೆ ಅಂತ ಅತಿಯಾಗಿ ಫ್ಯಾನ್, ಎಸಿ ಬಳಸಿದ್ರೆ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತೆ...

Gruha Jyothi | ಬೇಸಿಗೆ ಅಂತ ಅತಿಯಾಗಿ ಫ್ಯಾನ್, ಎಸಿ ಬಳಸಿದ್ರೆ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತೆ ಜೋಕೆ..?

ಬೆಂಗಳೂರು | ಕಳೆದ ವಿಧಾನಸಭೆ ಚುನಾವಣೆಯ (Assembly election) ವೇಳೆ ರಾಜ್ಯ ಕಾಂಗ್ರೆಸ್ ಸರ್ಕಾರ (Congress Govt) ಕೊಟ್ಟಂತಹ ಐದು ಭರವಸೆಗಳಲ್ಲಿ ಗೃಹ ಜ್ಯೋತಿ (Gruha Jyothi) ಗ್ಯಾರಂಟಿಯೂ ಕೂಡ ಒಂದು. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಒಂದಿಷ್ಟು ನಿಯಮಗಳನ್ನ ರೂಪಿಸಿ ಇದನ್ನು ಜಾರಿಗೊಳಿಸಿತು.

Sadananda Gowda Joined Congress Party | ಮಾಜಿ ಸಿಎಂ ಡಿ ವಿ ಸದಾನಂದ ಗೌಡ ಕಾಂಗ್ರೆಸ್ ಸೇರ್ಪಡೆ ನಿರ್ಧಾರ ಘೋಷಣೆ..? – karnataka360.in

ರಾಜ್ಯದ ಪ್ರತಿಯೊಬ್ಬರ ಮನೆಗೆ 200 ಯೂನಿಟ್ ವರೆಗೆ ಉಚಿತ ವಿದ್ಯುತ್ (Free electricity) ನೀಡುವ ಭರವಸೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದೂ 200 ಯೂನಿಟ್ ಗಿಂತ ಅಧಿಕವಾಗಿ ಬಳಕೆ ಮಾಡಿದರೆ, ಅಧಿಕವಾಗಿ ಬಳಕೆ ಮಾಡಿದ ಮೊತ್ತವನ್ನು ಪಾವತಿ ಮಾಡಬೇಕು ಎಂದು ಆಗ ತಿಳಿಸಿತ್ತು. ಇದೀಗ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 10 ತಿಂಗಳು ಕಳೆಯುತ್ತಿದೆ. ಇದೀಗ ಬೇಸಿಗೆ ಕೂಡ ಆರಂಭವಾಗಿದೆ. ಹೀಗಾಗಿ ವಿದ್ಯುತ್ ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ ಇದರ ನಡುವೆ ಸರಕಾರ ರಾಜ್ಯದ ಜನರಿಗೆ ಸೂಚನೆಯನ್ನು ನೀಡಿದೆ.

ಹೌದು,, ಗೃಹಜೋತಿ ಯೋಜನೆ ಅಡಿ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಅಷ್ಟು ಯೂನಿಟ್ ಗೆ ಶುಲ್ಕ ಕಟ್ಟಬೇಕಾಗುತ್ತದೆ. ಬಹು ಮುಖ್ಯವಾಗಿ ಈಗಾಗಲೇ ಬೇಸಿಗೆ ಆರಂಭವಾಗಿದ್ದು ಪ್ರತಿಯೊಬ್ಬರ ಮನೆಯಲ್ಲೂ ಫ್ಯಾನ್, ಎಸಿ, ಕೂಲರ್, ರೆಫ್ರಿಜರೇಟರ್ ಹೆಚ್ಚಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ವಿದ್ಯುತ್ ಬಿಲ್ ಹೆಚ್ಚಿಗೆ ಬರುವುದು ಸಾಮಾನ್ಯ. ಜನಸಾಮಾನ್ಯರು ಮಿತವಾಗಿ ಬಳಸಿ 200 ಯೂನಿಟ್ ದಾಟದಂತೆ ನೋಡಿಕೊಳ್ಳಬೇಕು, ಇಲ್ಲವಾದಲ್ಲಿ ಖರ್ಚು ಮಾಡಿದ ಅಷ್ಟು ಯೂನಿಟ್ ಗಳಿಗೆ ಬಿಲ್ ಕಟ್ಟಬೇಕಾಗುತ್ತದೆ.

ಇನ್ನು ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಜಾರಿಯಾದ ನಂತರ ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ 3496 ಮಿಲಿಯನ್ ಯೂನಿಟ್ ಹೆಚ್ಚಳವಾಗಿ ಬಳಕೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments