ಹುಬ್ಬಳ್ಳಿ | ಕಾಂಗ್ರೆಸ್ ನದ್ದು ರಿವರ್ಸ್ ಗೇರ್ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಲೇವಡಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಾರೆ ಅನ್ನೋದು ಗೊತ್ತಿದೆ. ಅವರ ಅಧಿಕಾರ ಇದೆ ಏನ ಮಾಡುತ್ತಾರೆ ನೊಡೋಣ. ಆದರೆ ಸಾರ್ವತ್ರಿಕವಾಗಿ ಜನ ಸಮುದಾಯಕ್ಕೆ ಅನ್ಯಾಯ ಮಾಡಿದರೆ ನಾವು ಕಾನೂನಾತ್ಮಕವಾಗಿ, ರಾಜಕೀಯವಾಗಿ ಹೋರಾಟ ಮಾಡುತ್ತೇವೆ. ಅಧಿಕಾರ ಬಂದಾಗ ಸ್ವೇಚ್ವಾಚಾರವಾಗಿ ಎಲ್ಲವನ್ನು ಬದಲಾವಣೆ ಮಾಡುತ್ತೇವೆ ಅನ್ನೋದು ದುರಹಂಕಾರದ ಮಾತು ಎಂದರು.
ಕಾಂಗ್ರೆಸ್ ನವರು ಗ್ಯಾರಂಟಿಯಲ್ಲೂ ರೀವರ್ಸ್ ಹೋಗ್ತೀದಾರೆ. ನಾವು ಮಾಡಿದ ಜನಪರ ಕಾನೂನಿನಲ್ಲಿ ರೀವರ್ಸ್ ಹೋಗುತ್ತಿದ್ದಾರೆ. ಇದರ ಪರಿಣಾಮ ಜನರಿಗೆ ಗೊತ್ತಾಗಿದೆ. ಇಷ್ಟು ಬೇಗ ಸರ್ಕಾರ ಸೇಡಿನ ಕ್ರಮ ತೆಗೆದುಕೊಳ್ಳುತ್ತಿದೆ. ಇದು ರೀವರ್ಸ್ ಗೇರ್ ಸರ್ಕಾರ ಅಷ್ಟೇ ಅಲ್ಲ. ಇದು ಕಾಂಗ್ರೆಸ್ ನ ಸೇಡಿನ ಕ್ರಮ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.