Wednesday, February 5, 2025
Homeಜಿಲ್ಲೆಬೆಂಗಳೂರು ನಗರGovernment Employees Elections | ಮತ್ತೊಮ್ಮೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ. ಎಸ್...

Government Employees Elections | ಮತ್ತೊಮ್ಮೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ. ಎಸ್ ಷಡಾಕ್ಷರಿ

ಬೆಂಗಳೂರು | ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ 2024-29ನೇ ಅವಧಿಯ ರಾಜ್ಯಾಧ್ಯಕ್ಷ ಹಾಗೂ ರಾಜ್ಯ ಖಜಾಂಚಿ ಸ್ಥಾನದ ಚುನಾವಣೆ (Government Employees Elections) ಶುಕ್ರವಾರ ಮುಗಿದಿದ್ದು, ಸಂಘದ ರಾಜ್ಯಾದ್ಯಕ್ಷರಾಗಿ ಮತ್ತೊಮ್ಮೆ ಸಿ. ಎಸ್ ಷಡಾಕ್ಷರಿ ಆಯ್ಕೆಯಾಗಿದ್ದಾರೆ.

ಮತದಾನವು ಬೆಳಗ್ಗೆ 9 ಗಂಟೆಯಿಂದ ಸಂಜೆ 4 ರವರೆಗೆ ನಗರದ ಕಬ್ಬನ್‌ ಪಾರ್ಕ್‌ನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ನೆರವೇರಿದೆ. ಅಂತಿಮವಾಗಿ ಷಡಾಕ್ಷರಿಯವರ ಪ್ರತಿ ಸ್ಪರ್ಧಿ ಬಿ.ಪಿ. ಕೃಷ್ಣಗೌಡ ಅವರೊಂದಿಗೆ 64 ಮತಗಳ ಅಂತರದಲ್ಲಿ ಅಂದರೆ ಒಟ್ಟಾರೆ 507 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಗೆಲುವು ಸಾಧಿಸುವ ಮುಖಾಂತರ ಪ್ರಭಲ್ಯ ಮೆರೆದಿದ್ದಾರೆ.

ರಾಜ್ಯ ಖಜಾಂಚಿ ಸ್ಥಾನಕ್ಕೆ ಶಿವರುದ್ರಯ್ಯ ವಿ.ವಿ ಅವರು ಆಯ್ಕೆಯಾಗಿದ್ದು, ನಾಗರಾಜ ಆರ್. ಜುಮ್ಮನ್ನವರೊಂದಿಗೆ 18 ಮತಗಳ ಅಂತರದಲ್ಲಿ ಅಂದರೆ ಒಟ್ಟು 485 ಮತಗಳನ್ನು ಗಳಿಸಿ ಆಯ್ಕೆಯಾಗಿದ್ದಾರೆ. ರಾಜ್ಯ ಸರ್ಕಾರಿ ನೌಕರರ ಅಧ್ಯಕ್ಷರಾಗಿ ಸಿ. ಎಸ್ ಷಡಾಕ್ಷರಿ ಮತ್ತೊಮ್ಮೆ ಆಯ್ಕೆ ಆಗಿರುವುದಕ್ಕೆ ಅಭಿಮಾನಿಗಳು ಹಾಗೂ ಜಿಲ್ಲಾ ಅಧ್ಯಕ್ಷರುಗಳು  ಸೇರಿದಂತೆ ಅನೇಕ ಜನ ಶುಭ ಕೋರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments