Thursday, December 12, 2024
Homeರಾಷ್ಟ್ರೀಯGas cylinder Blast | ಗ್ಯಾಸ್ ಸಿಲಿಂಡರ್ ಸ್ಫೋಟದ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ...

Gas cylinder Blast | ಗ್ಯಾಸ್ ಸಿಲಿಂಡರ್ ಸ್ಫೋಟದ ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಯುವಕ..!

ಉತ್ತರ ಪ್ರದೇಶ | ಮೊಟ್ಟೆ ಅಂಗಡಿಯಲ್ಲಿ (Egg shop) ಇರಿಸಲಾಗಿದ್ದ ಗ್ಯಾಸ್ ಸಿಲಿಂಡರ್‌ಗೆ (Gas cylinder) ಬೆಂಕಿ ಹೊತ್ತಿಕೊಂಡಿತ್ತು. ಅಲ್ಲಿದ್ದ ಇಬ್ಬರು ಯುವಕರು ಬೆಂಕಿ (fire) ನಂದಿಸುವ ಬದಲು ಬೆಂಕಿ ಹೊತ್ತಿಕೊಂಡ ಸಿಲಿಂಡರ್ ಹಾಗೂ ಅಂಗಡಿಯಲ್ಲಿ ರೀಲ್ಸ್ (Reels) ಮಾಡಲು ಶುರು ಮಾಡಿದ್ದಾರೆ. ಆಗ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಅಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ ಓರ್ವ ಸಾವನ್ನಪ್ಪಿದ್ದಾನೆ.

Ballot Paper Voting | 2024ರ ಲೋಕಸಭೆ ಚುನಾವಣೆ ; ಇವಿಎಂ ಬದಲು ಬ್ಯಾಲೆಟ್ ಪೇಪರ್ ಮೂಲಕ ಮತದಾನ..! – karnataka360.in

ಮಾಹಿತಿಯ ಪ್ರಕಾರ, ಕಾನ್ಪುರ (Kanpur) ನಗರದ ಬಿಲಹೌರ್ ಪ್ರದೇಶದ ಉತ್ತರಪುರದಲ್ಲಿ ಮದ್ಯ ಮಾರಾಟ ನಡೆಯುತ್ತಿದ್ದು ಇದರ ಪಕ್ಕದಲ್ಲಿದ್ದ ಮೊಟ್ಟೆ ಅಂಗಡಿಗೆ ಬೆಂಕಿ ಹೊತ್ತಿಕೊಂಡಿದೆ. ಜಿತು ಬಹೇಲಿಯಾ ಎಂಬುವರ ಮೊಟ್ಟೆ ಅಂಗಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಅಂಗಡಿಗೂ ವ್ಯಾಪಿಸಿದೆ. ಅಷ್ಟರಲ್ಲಿ ಸಿಲಿಂಡರ್ ಬೆಂಕಿಗೆ ಆಹುತಿಯಾಗುತ್ತಿರುವುದನ್ನು ನೋಡಿ ಪಕ್ಕದಲ್ಲೇ ನಿಂತಿದ್ದ 20 ವರ್ಷದ ನಿಖಿಲ್ ಮತ್ತು ಅಮನ್ ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡುತ್ತಿದ್ದರು. ಆಗ ಏಕಾಏಕಿ ಸಿಲಿಂಡರ್ ಸ್ಫೋಟಗೊಂಡಿದೆ.

50 ಮೀಟರ್ ದೂರದಲ್ಲಿ ರೀಲ್ಸ್ ಮಾಡುತ್ತಿದ್ದ ಯುವಕರು

ಸಿಲಿಂಡರ್ ಸ್ಫೋಟಗೊಂಡಾಗ ಅದರ ತುಂಡು ನಿಖಿಲ್ ಎಂಬ ಯುವಕನ ತಲೆಗೆ ನುಗ್ಗಿತ್ತು. ಇದರಿಂದ ನಿಖಿಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅವನಿಂದ ಕೇವಲ 50 ಮೀಟರ್ ದೂರದಲ್ಲಿ ನಿಂತು, ಯುವಕರಿಬ್ಬರೂ ರೀಲ್ಸ್ ಮಾಡುತ್ತಿದ್ದನು ಮತ್ತು ಇನ್ನೂ ಕೆಲವರು ಈ ದೃಶ್ಯವನ್ನು ವೀಕ್ಷಿಸುತ್ತಿದ್ದರು. ಸ್ಫೋಟ ಸಂಭವಿಸುತ್ತಿದ್ದಂತೆ, ನಿಖಿಲ್, ಅಮನ್ ಛೋಟಾಲಾಲ್ ಮತ್ತು ತುಲೈ ಗಾಯಗೊಂಡಿದ್ದಾರೆ. ಪೊಲೀಸರು ಮತ್ತು ಇತರ ಜನರು ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ನಿಖಿಲ್ ಸಾವನ್ನಪ್ಪಿದ್ದಾನೆ.

ಸಿಲಿಂಡರ್ ಉರಿಯುತ್ತಿರುವುದನ್ನು ವಿಡಿಯೋ ಮಾಡುತ್ತಿದ್ದ ಯುವಕರು

20ರ ಹರೆಯದ ನಿಖಿಲ್  ರೀಲ್ಸ್ ಮಾಡುವಲ್ಲಿ ಒಲವು ಹೊಂದಿದ್ದ ಎನ್ನಲಾಗಿದೆ. ನಿಖಿಲ್ ಉತ್ತರಪುರದ ಶಾಂತಿನಗರದ ನಿವಾಸಿಯಾಗಿದ್ದ. ಅಂಗಡಿಗಳಿಗೆ ಬೆಂಕಿ ಹೊತ್ತಿಕೊಂಡಾಗ ಸಿಲಿಂಡರ್ ಕೂಡ ಸುಟ್ಟು ಕರಕಲಾಗಿತ್ತು. ಸಿಲಿಂಡರ್ ಯಾವಾಗ ಬೇಕಾದರೂ ಬ್ಲಾಸ್ಟ್ ಆಗಬಹುದು ಎನ್ನಲಾಗುತ್ತಿತ್ತು. ಯುವಕರಿಬ್ಬರೂ ಅದನ್ನೇ ರೀಲ್ಸ್ ಮಾಡತೊಡಗಿದರು.  ಆಗ ಸಿಲಿಂಡರ್‌ಗೆ ಬೆಂಕಿ ಹೊತ್ತಿಕೊಂಡು ಸಿಡಿದು ನಾಲ್ವರು ಗಾಯಗೊಂಡಿದ್ದಾರೆ. ಇದರಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರು ಗಾಯಾಳುಗಳನ್ನು ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸಿಪಿ ಅಜಯ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments