ಬೆಂಗಳೂರು | ಹೊಸ ವರ್ಷದ ಆಚರಣೆಗೆ ಗಾಂಜಾ ಪೆಡ್ಲರ್ಸ್ (Ganja Peddlers) ಇದೀಗ ಫುಲ್ ಆಕ್ಟೀವ್ ಆಗಿದ್ದಾರೆ. ರೈಲ್ವೇ ಪೊಲೀಸರ ಕಾರ್ಯಾಚರಣೆಯಲ್ಲಿ ಸುಸಜ್ಜಿತವಾಗಿ ಪ್ಯಾಕಿಂಗ್ ಮಾಡಿ ಯಾರ ಗಮನಕ್ಕೂ ಬಾರದೆ ಸಾಗಾಟ ಮಾಡುತ್ತಿದ್ದ ಗಾಂಜಾ ಪೆಡ್ಲರ್ಸ್ (Ganja Peddlers) ಗಳನ್ನು ಬಂಧಿಸಲಾಗಿದೆ.
ಹೌದು,,, ಮಾದಕ ವಸ್ತುಗಳ ಸಾಗಾಟದ ಮೇಲೆ ಕಣ್ಣಿಟ್ಟಿರುವ ಪೊಲೀಸರು ಸಿಟಿ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಗಳನ್ನ ಹಾಕಿ ಚೆಕಿಂಗ್ ಮಾಡುತ್ತಿದ್ದಾರೆ. ಗಾಂಜಾ ಮತ್ತು ಡ್ರಗ್ಸ್ ಸಪ್ಲೈ ಹಿನ್ನೆಲೆ ಎಲ್ಲಾ ವಾಹನಗಳ ಮೇಲೆ ನಿಗಾವಹಿಸಿದ್ದಾರೆ. ಇದೇ ಸಮಯವನ್ನೇ ಟಾರ್ಗೆಟ್ ಮಾಡಿಕೊಂಡು ರೈಲಿನ ಮೂಲಕ ಕೆಜಿಗಟ್ಟಲೆ ಗಾಂಜಾ ಸಪ್ಲೈ ಮಾಡಲಾಗುತ್ತಿದೆ. ಪೊಲೀಸ್ ಶ್ವಾನಕ್ಕೂ ವಾಸನೆ ಬಾರದ ರೀತಿ ರೈಲು ಭೋಗಿಗಳಲ್ಲಿ ಸಾಗಾಟ ಮಾಡಲಾಗುತ್ತಿದೆ.
ಆಂದ್ರ ಪ್ರದೇಶ, ತಮಿಳುನಾಡು, ಓರಿಸ್ಸಾ ಗಾಂಜಾಗೆ ನಗರದಲ್ಲಿ ಬೇಡಿಕೆ ಹೆಚ್ಚಾಗಿದ್ದು, ವಾಹನಗಳಲ್ಲಿ ಸರಬರಾಜು ಮಾಡಿದ್ರೆ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ರೈಲಿನ ಮೂಲಕ ನಗರಕ್ಕೆ ಸಪ್ಲೈ ಮಾಡಲಾಗುತ್ತಿದೆ.
ಹೊಸ ವರ್ಷಕ್ಕೆ ಬೆಂಗಳೂರು ಪಾರ್ಟಿಗಳು ಸೇರಿದಂತೆ ಸಬ್ ಪೆಡ್ಲರ್ ಗಳಿಗೆ ಸಪ್ಲೈ ಮಾಡಲಾಗುತ್ತಿದೆ. ಇದೀಗ ರೈಲ್ವೆ ಪೊಲೀಸರು ಸ್ಪೆಷಲ್ ಡ್ರೈವ್ ನಡೆಸಿ. ಪ್ರಶಾಂತಿ ಮತ್ತು ಹಟಿಯಾ ಎಕ್ಸ್ ಪ್ರೆಸ್ ಭೋಗಿಗಳಲ್ಲಿ ತಲಾಶ್ ಮಾಡಿದ್ದಾರೆ.
ಇದೇ ವೇಳೆ ಟ್ರ್ಯಾಲಿ ಬ್ಯಾಗ್ ಗಳಲ್ಲಿ ಪ್ಯಾಕಿಂಗ್ ಮಾಡಿಕೊಂಡು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಎರಡನೇ ದಿನದಲ್ಲಿ ಬರೋಬ್ಬರಿ ಒಂದು ಕೋಟಿ ಮೌಲ್ಯದ ಗಾಂಜಾ ಸೀಜ್ ಆಗಿದೆ. ಎಂಟು ಮಂದಿಯನ್ನ ಬಂಧಿಸಿರುವ ರೈಲ್ವೆ ಪೊಲೀಸರು ವಿಚಾರಣೆನಡೆಸಿದ್ದಾರೆ.