Thursday, December 12, 2024
Homeಜಿಲ್ಲೆತುಮಕೂರುForest Department | ಏಪ್ರಿಲ್ 9ರ ಒಳಗೆ ಅರಣ್ಯ ಇಲಾಖೆಗೆ ಒಪ್ಪಿಸದೆ ಇದ್ದರೆ 7 ವರ್ಷ...

Forest Department | ಏಪ್ರಿಲ್ 9ರ ಒಳಗೆ ಅರಣ್ಯ ಇಲಾಖೆಗೆ ಒಪ್ಪಿಸದೆ ಇದ್ದರೆ 7 ವರ್ಷ ಜೈಲು ಮತ್ತು 25,000 ರೂ ದಂಡ..!

ತುಮಕೂರು | ಕರ್ನಾಟಕ ವನ್ಯಜೀವಿ (Wildlife of Karnataka) (ರಕ್ಷಣೆ-ಅಘೋಷಿತ ವನ್ಯಜೀವಿ/ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸದ ಟ್ರೋಫಿಗಳನ್ನು ಅಧ್ಯರ್ಪಿಸಲು ಅವಕಾಶ) ನಿಯಮಗಳನ್ವಯ ಮಾಲೀಕತ್ವದ ಪ್ರಮಾಣ ಪತ್ರವನ್ನು (Affidavit) ಹೊಂದಿರದ ವನ್ಯಜೀವಿಗಳ ವಸ್ತುಗಳು ಮತ್ತು ಟ್ರೋಫಿಗಳನ್ನು (Wildlife items and trophies) ಸರ್ಕಾರಕ್ಕೆ ಒಪ್ಪಿಸಲು ಏಪ್ರಿಲ್ 9 ರವರೆಗೆ ಕಾಲಾವಕಾಶ ನೀಡಲಾಗಿದೆ ಎಂದು  ಉಪ ಅರಣ್ಯ ಸಂರಕ್ಷಣಾಧಿಕಾರಿ (Conservator of Forests) ಅನುಪಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Pavagada Solar Park | ಸೋಲಾರ್ ಪಾರ್ಕ್ ಮೂಲಕ ಚರಿತ್ರೆ ಸೃಷ್ಟಿಸುವ ಭಾಗವಾದ ಪಾವಗಡ..! – karnataka360.in

ಮಾಲೀಕತ್ವದ ಪ್ರಮಾಣ ಪತ್ರವಿಲ್ಲದೆ ಅಘೋಷಿತ ವನ್ಯಜೀವಿ/ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸದ ಟ್ರೋಫಿಗಳನ್ನು ಹೇಗೆ ಇಲಾಖೆಗೆ ಒಪ್ಪಿಸುವ ಬಗ್ಗೆ ಅರಣ್ಯ ಇಲಾಖೆಯಿಂದ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

ಮಾರ್ಗಸೂಚಿಯನ್ವಯ ಮಾಲೀಕತ್ವದ ಪ್ರಮಾಣ ಪತ್ರವಿಲ್ಲದೆ ಅಘೋಷಿತ ವನ್ಯಜೀವಿ/ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸದ ಟ್ರೋಫಿ ಇತ್ಯಾದಿಗಳನ್ನು ಇಟ್ಟುಕೊಂಡಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ 7 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 25,000 ರೂ.ಗಳಿಗಿಂತ ಕಡಿಮೆಯಿಲ್ಲದ ದಂಡ ವಿಧಿಸಲಾಗುವುದು.

ಸದರಿ ನಿಯಮದ ಪ್ರಕಾರ ಸಾರ್ವಜನಿಕರು/ಸಂಘ ಸಂಸ್ಥೆ ಅಘೋಷಿತ ವನ್ಯಜೀವಿ/ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸದ ಟ್ರೋಫಿ ಇತ್ಯಾದಿಗಳನ್ನ ಹತ್ತಿರದ ವನ್ಯಜೀವಿ ಅಥವಾ ಪ್ರಾದೇಶಿಕ ವ್ಯಾಪ್ತಿಯ ವಲಯ ಅರಣ್ಯ ಕಛೇರಿ (ವಲಯ ಅರಣ್ಯಾಧಿಕಾರಿ) ಅಥವಾ ಉಪ ವಿಭಾಗ ಕಛೇರಿ (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ) ಅಥವಾ ವಿಭಾಗ ಕಛೇರಿ(ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ)ಗೆ ಒಪ್ಪಿಸಬಹುದಾಗಿದೆ.

ಅರಣ್ಯ ಇಲಾಖೆಯ ವೆಬ್‌ಸೈಟ್ www.aranya.gov.in ನಲ್ಲಿ ಫಾರ್ಮ್-1 (ಅರ್ಜಿ ನಮೂನೆ)ರ ಮಾದರಿ ಲಭ್ಯವಿದ್ದು, ಅರ್ಜಿಯನ್ನು ಡೌನ್‌ಲೋಡ್ ಮಾಡಬಹುದಾಗಿದೆ ಅಥವಾ ಹತ್ತಿರದ ವಲಯ ಅರಣ್ಯ ಕಛೇರಿ ಅಥವಾ ಉಪ ವಿಭಾಗ ಕಛೇರಿ (ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ) ಅಥವಾ ವಿಭಾಗ ಕಛೇರಿ (ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಛೇರಿ) ಯಿಂದ ಪಡೆಯಬಹುದಾಗಿದೆ.

ಅಘೋಷಿತ ವನ್ಯಜೀವಿ/ಪ್ರಾಣಿಗಳ ಅಂಗಾಂಗಗಳ ಪದಾರ್ಥಗಳು, ಟ್ರೋಫಿಗಳು ಮತ್ತು ಸಂಸ್ಕರಿಸದ ಟ್ರೋಫಿಗಳನ್ನು ಅಧ್ಯರ್ಪಿಸುವ ಪ್ರಕ್ರಿಯೆ 10 ನೇ ಏಪ್ರಿಲ್ 2024 ಕ್ಕೆ ಮುಕ್ತಾಯಗೊಳ್ಳುತ್ತದೆ. ಮಾಲೀಕತ್ವದ ಪ್ರಮಾಣ ಪತ್ರವಿಲ್ಲದ ಎಲ್ಲಾ ವನ್ಯಜೀವಿ ವಸ್ತುಗಳು/ಟ್ರೋಫಿಗಳನ್ನು ಹೊಂದಿರುವವರ ಮೇಲೆ ಕಾನೂನುಬಾಹಿರವೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುವುದು. ಅವಧಿ ಮುಗಿದ ನಂತರ ಅಧ್ಯರ್ಪಿಸಲು ಯಾವುದೇ ಅವಕಾಶವನ್ನು ನೀಡಲಾಗುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments