ತುಮಕೂರು | ತುಮಕೂರು ನಗರದ ದಿಬ್ಬೂರಿನಲ್ಲಿ ವಿದೇಶಿ ಪ್ರಜೆಗಳ ನಿರಾಶ್ರಿತ ಕೇಂದ್ರವೊಂದಿದೆ. ನಿರಾಶ್ರಿತ ಕೇಂದ್ರ ಅಂದ್ರೆ ವಿದೇಶಿ ಪ್ರಜೆಗಳು ನಮ್ಮ ದೇಶಕ್ಕೆ ವಿದ್ಯಾಭ್ಯಾಸ ಸೇರಿದಂತೆ ಹಲವು ಕೆಲಸಗಳಿಗೆಂದು ಬಂದು ವಿದ್ಯಾಭ್ಯಾಸ ಮುಗಿದರು, ತಮ್ಮ ಕೆಲಸ ಪೂರ್ಣಗೊಂಡರು, ವೀಸಾ ಅವಧಿ ಅಂತ್ಯವಾದರು ಇಲ್ಲೆ ಜಾಂಡವೊಡೆದು ಉಳಿದುಕೊಂಡಿರುವುದು. ಅದರಲ್ಲಿ ಉಗಾಂಡ, ಆಫ್ರಿಕಾ, ಬಾಂಗ್ಲಾದೇಶ ಸೇರಿದಂತೆ ಹಲವು ದೇಶಗಳ ಜನರಿದ್ದಾರೆ. ಕೆಲವರು ಡ್ರಗ್ಸ್ ವ್ಯಸನಿಗಳು ಕೂಡ ಇದ್ದಾರೆ. ಇಂಥವರನ್ನು ಅವರ ದೇಶದ ಎಂಬೆಸಿ ನವರು ಕರೆದುಕೊಂಡು ಹೋಗುವವರೆಗೂ ಅವರನ್ನು ಸುರಕ್ಷಿತವಾಗಿಡುವ ಕೇಂದ್ರವೇ ನಿರಾಶ್ರಿತ ಕೇಂದ್ರ.
ಇವರಿಗೆ ಬೇಕಾದ ಊಟ, ವಸತಿ, ಸೌಕರ್ಯಗಳನ್ನು ಕೊಡುವುದರ ಜೊತೆಗೆ ಇವರ ರಕ್ಷಣೆಗಾಗಿ ಪೋಲಿಸರನ್ನು ನಿಯೋಜಿಸಿದ್ದಾರೆ. ಇಷ್ಟೇಲ್ಲಾ ಉಪಚಾರ ಕೊಟ್ಟೋರಿಗೆ ಈ ವಿದೇಶಿ ಪ್ರಜೆಗಳು ಕೊಟ್ಟಿದು ಏನ್ ಗೊತ್ತ..? ತಮ್ಮ ದೇಶದ ಶೈಲಿಯ ಪುಂಡಾಟ. ಎಸ್ ಹೌದು, ಅಡುಗೆ ಸಹಾಯಕಿ ಲಕ್ಷ್ಮಿ ಮೇಲೆ ಏಕಾ ಏಕಿ ಹಲ್ಲೆಮಾಡಲು ಶುರುಮಾಡಿದ್ದಾರೆ. ಇದನ್ನು ಗಮನಿಸಿದ ಪೋಲಿಸ್ ಸಿಬ್ಬಂದಿ ಬಿಡಿಸಲು ಹೋಗಿದ್ದಾರೆ.
ಅಷ್ಟೆ, ಪೊಲೀಸ್ ಅನ್ನೋದನ್ನು ನೋಡದೆ ನರಭಕ್ಷಕರಂತೆ ಪೋಲಿಸ್ ಸಿಂಬ್ಬದಿಗಳ ಮೇಲೆ ಎಗರಿದ್ದಾರೆ. ಲಾಟಿ ಗಳನ್ನು ಮುರಿದ್ದಿದ್ದು ಸಾಲದು ಅಂತ ಪಿಎಸ್‌ಐ ಚಂದ್ರಕಲಾ ಕೈ ಮುರಿದ್ದಾರೆ, ಜೊತೆಗೆ ಮತ್ತೋರ್ವ ಸಿಬ್ಬಂದಿ ತಾಸಿನಾ ಬಾನು ಕಿವಿ ಕಚ್ಚಿದ್ದಾರೆ. ಡ್ರೈವರ್ ಬಸವರಾಜು, ಅಡುಗೆ ಸಹಾಯಕಿ ಲಕ್ಷ್ಮಮ್ಮ ಮೇಲೆ ಹಲ್ಲೆಮಾಡಿ ವಿಕೃತಿ ಮೆರೆದಿದ್ದಾರೆ.
ಬ್ರೆಡ್ ಕೇಳಿದ್ದಾರೆ ಕೊಟ್ಟಿದ್ದಾರೆ, ಹಾಲು ಕೇಳಿದ್ದಾರೆ ಕೊಟ್ಟಿದ್ದಾರೆ, ಅವರೆ ಅಡುಗೆ ಮಾಡಿಕೊಳ್ಳಲಿ ಎಂದು ಎಲ್ಲಾ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಇಷ್ಟೆಲ್ಲಾ ಸೌಲಭ್ಯಗಳನ್ನ ಕೊಟ್ಟು ನೋಡಿಕೊಳ್ಳುತ್ತಿರುವ ಸಿಬ್ಬಂದಿಗಳ ಮೇಲೆ ಇವರು ಹೀಗಾ ನೋಡಿಕೊಳ್ಳುವುದು. ಒಂದಿಷ್ಟು ಮಾನವೀಯತೆ ಇಲ್ಲದ ಅನಾಗರೀಕರು.
ಸದ್ಯ ಹಲ್ಲೆ ಗೊಳಗಾದವರು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದಾರೆ, ವಿಷಯ ತಿಳಿದ ಪೋಲಿಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ್ ವಾಡ್ ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ವಿದೇಶಿ ಪ್ರಜೆಗಳಿಗೆ ನಮ್ಮಲ್ಲಿರುವ ಕಾನೂನುಗಳು ಒಂದು ಕಡೆ ವರವಾಗಿದೆ. ಅವರನ್ನು ಅಷ್ಟು ಸುಲಭವಾಗಿ ಶಿಕ್ಷಿಸಲು ಆಗುತ್ತಿಲ್ಲಾ, ಹಾಗಾಗಿ ಉಗಂಡ, ನೈಜೀರಿಯ, ದಕ್ಷಿಣ ಆಫ್ರಿಕನ್ನರು ದೇಶದೇಲ್ಲೆಡೆ ಡ್ರಗ್, ಗಾಂಜ, ಅಫಿಮ್ ಹೀಗೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದಾರೆ, ಪ್ರಶ್ನಿಸಲು ಹೋದರೆ ಗಲಾಟೆ ಮಾಡುತ್ತಾರೆ. ಇನ್ನು ಮುಂದೆ ಇಂತಹ ಪ್ರಕರಣದಲ್ಲಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗದಿದ್ದಲ್ಲಿ ಮಾತ್ರ ವಿದೇಶಿ ಪ್ರಜೆಗಳಿಗೆ ನಮ್ಮ ದೇಶದ ಕಾನೂನಿನ ಬಗ್ಗೆ ಭಯ ಹುಟ್ಟುಲು ಸಾಧ್ಯ. ಪೊಲೀಸರು ಹಾಗೂ ನಿರಾಶ್ರಿತ ಕೇಂದ್ರದ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಇಂತಹವರಿಗೆ ಕಠಿಣ ಶಿಕ್ಷೆಯಾಗಲಿ ಎನ್ನುವುದು ಆಶಯ.