ಕೃಷಿ ಮಾಹಿತಿ | ಮೀನುಗಾರಿಕೆ ಇಲಾಖೆಯು (Department of Fisheries) ಶೇ.100ರ ಸಹಾಯಧನದಲ್ಲಿ (Subsidy) ಮೀನುಗಾರಿಕೆ ಸಲಕರಣೆ ಕಿಟ್ (Fishing equipment kit) ಸೌಲಭ್ಯಕ್ಕಾಗಿ ಮೀನುಗಾರಿಕೆಯಲ್ಲಿ ತೊಡಗಿರುವ ಜಿಲ್ಲೆಯ ತಿಪಟೂರು, ಗುಬ್ಬಿ, ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗಡಿ ಬಾಧಿತ ಗ್ರಾಮಗಳ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ವ್ಯಕ್ತಿ/ಸಂಘ ಸಂಸ್ಥೆಗಳು ತಿಪಟೂರು/ಗುಬ್ಬಿ/ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗೆ ಏಪ್ರಿಲ್ 20 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಡೇಕೆರೆ, ಗೋಡೇಕೆರೆ ಹಟ್ಟಿ, ರಂಗನಾಥಪುರ, ಬಾಣದೇವರಹಟ್ಟಿ, ಹೊನ್ನೇಬಾಗಿ ಕ್ಯಾಂಪ್, ಹೊಸಹಳ್ಳಿ, ಬಗ್ಗನಹಳ್ಳಿ, ನಡುವನಹಳ್ಳಿ, ನಾರಸೀಹಳ್ಳಿ, ಚಿಕ್ಕರಾಂಪುರ, ಕಾತ್ರಿಕೆಹಾಳ್, ತೀರ್ಥಪುರ, ಜೋಗಿಹಳ್ಳಿ, ಗುರುವಾಪುರ, ಅಜ್ಜೀಗುಡ್ಡೆ, ರಾಮನಹಳ್ಳಿ, ಜೆ.ಸಿ.ಪುರ, ಕಾಡೇನಹಳ್ಳಿ, ಚಿಕ್ಕನಾಯಕನಹಳ್ಳಿ, ಸಾವಿಗೆಹಳ್ಳಿ, ಆಲದಕಟ್ಟೆ, ಬಳ್ಳೇಕಟ್ಟೆ, ಬೈಲಪ್ಪನಮಠ, ಅಂಕಲಬಾವಿ, ಅವಳಗೆರೆ, ಚಿಕ್ಕಬಿದರೆ, ದೊಡ್ಡಬಿದರೆ, ಪೋಚಕಟ್ಟೆ, ಹುಳಿಯಾರು, ಬಾವನಹಳ್ಳಿ
ಗುಬ್ಬಿ ತಾಲ್ಲೂಕಿನ ಕಂಚಗಾನಹಳ್ಳಿ, ಬಡವನಪಾಳ್ಯ, ಹೊನ್ನಕಂಬಿಹಟ್ಟಿ, ಎನ್.ಹೊಸಹಳ್ಳಿ, ದೇವರಹಟ್ಟಿ, ದೊಡ್ಡಗುಣಿ, ಗುಡ್ಡದ ಹೋಬಳಾಪುರ, ಗುಡ್ಡದ ಹಟ್ಟಿ, ಕರಡಿಕಲ್ಲು, ಯಲ್ಲಾಪುರ, ವಿರೂಪಾಕ್ಷಿ ಪುರ, ಬೊಮ್ಮರಸನಹಳ್ಳಿ, ಹೊಸಹಟ್ಟಿ, ಬಸವನಗುಡಿ; ತಿಪಟೂರು ತಾಲ್ಲೂಕಿನ ಅಯ್ಯನಪಾಳ್ಯ, ಕಾಮಗೊಂಡನಹಳ್ಳಿ, ಯಗಚಿಕಟ್ಟೆ, ಬಿಳಿಗೆರೆ, ಕೆಬಿ ಕ್ರಾಸ್, ಹಟ್ಣ, ತರಬೇನಹಳ್ಳಿ, ಹಾಲುಗೋಣ, ಹರೇನಹಳ್ಳಿ ಗ್ರಾಮದ ವ್ಯಕ್ತಿ/ಸಂಘ ಸಂಸ್ಥೆಗಳು ಮೀನುಗಾರಿಕೆ ಸಲಕರಣೆ ಕಿಟ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.