ತುಮಕೂರು | ಪಿಸಿಟಿ ಕ್ಲಬ್ ತುಮಕೂರು ಮತ್ತು ತುಮಕೂರು ಛಾಯಾಗ್ರಾಹಕರ ವತಿಯಿಂದ ಮೊದಲನೇ ವರ್ಷದ ಛಾಯಾಗ್ರಾಹಕರ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು.
ಇದೇ ಸಂದರ್ಭದಲ್ಲಿ ಮಾತನಾಡಿದ ತುಮಕೂರು ನಗರ ಶಾಸಕರಾದ ಜ್ಯೋತಿ ಗಣೇಶ್ ರವರು, ಕೋವಿಡ್ ಸಾಂಕ್ರಾಮಿಕ ಸೋಂಕಿನ ವೇಳೆಯಲ್ಲಿ ಛಾಯಾಗ್ರಾಹಕರುಗಳು ಸಾಕಷ್ಟು ಸಮಸ್ಯೆಗಳನ್ನ ಅನುಭವಿಸಿದರು. ಆದರೆ ಅಂತಹ ಸಂರ‍್ಭಗಳಲ್ಲೂ ಕೂಡ ಕೆಲವರು ತಮ್ಮ ಉದ್ಯಮಗಳನ್ನು ಉಳಿಸಿಕೊಂಡರು. ಅಂತಹವರ ಒಂದು ಸಂಘಟನೆಯ ಜೊತೆ ನಾವು ಸದಾ ಕಾಲ ಇರುತ್ತೇವೆ ಎಂದರು.
ಸಾಮಾನ್ಯವಾಗಿ ಛಾಯಾಗ್ರಹಕರು ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಕಂಡು ಬರುತ್ತಾರೆ. ಆದರೆ ಇಂದು ಅವರಲ್ಲಿ ಇರುವಂತಹ ಕ್ರೀಡಾ ಮನೋಭಾವವನ್ನು ಬೆಳೆಸಲು ಇಂತಹ ಒಂದು ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿರುವುದು ಉತ್ತಮ ಸಂಗತಿ. ಅದರಲ್ಲೂ ಕೂಡ ನಮ್ಮ ತುಮಕೂರಿನಲ್ಲಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿರುವುದು ಅದರ ಮೂಲಕವಾಗಿ ಬೇರೆ ಬೇರೆ ಜಿಲ್ಲೆಗಳಿಂದ ಬಂದಂತಹ ಛಾಯಾಗ್ರಹಕರನ್ನು ಒಂದು ಕಡೆ ಸೇರುವಂತೆ ಮಾಡಿರುವುದು ನಿಮ್ಮಲ್ಲಿರುವಂತಹ ಕ್ರೀಡಾ ಪ್ರೀತಿಗೆ ಸಾಕ್ಷಿ. ಇದು ಇನ್ನೂ ಕೂಡ ಮುಂದುವರೆಯಲಿ ಎಂದು ಆಶಿಸಿದರು.
ಇದೇ ವೇಳೆಯಲ್ಲಿಆಶೀರ್ವಚನ ನೀಡಿದ ಹಿರೇಮಠದ ಅಧ್ಯಕ್ಷರಾದ ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಜಿಗಳು, ಎರಡು ದಿನಗಳು ಯಶಸ್ವಿಯಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾವಳಿಯನ್ನು ತುಮಕೂರು ಛಾಯಾಗ್ರಾಹಕರ ವತಿಯಿಂದ ಆಚರಣೆ ಮಾಡಲಾಗಿದೆ. ಬ್ಯಾಟ್ ಮತ್ತು ಬಾಲ್ ಅನ್ನು ಬಳಕೆ ಮಾಡುವ ಮೂಲಕ ಇದಕ್ಕೆ ಚಾಲನೆ ನೀಡಿದ್ದೇವೆ. ಭಾರತೀಯರ ಸಂಸ್ಕೃತಿ ಸಂಪ್ರದಾಯದಂತೆ ದೀಪವನ್ನು ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದ್ದೇವೆ ಎಂದರು.
ಛಾಯಾಗ್ರಾಹಕರಿಂದ ಛಾಯಾಗ್ರಹಗಳಿಗಾಗಿ ಛಾಯಾಗ್ರಹಕರಿಗೋಸ್ಕರ ಎನ್ನುವಂತಹ ಮಾತುಗಳು ನಿಜಕ್ಕೂ ಕೂಡ ಅದ್ಬುತವಾಗಿದೆ. ತುಂಬಾ ಸುಂದರವಾಗಿ ಈ ಒಂದು ಕಾರ್ಯಕ್ರಮವನ್ನು ಆಚರಣೆ ಮಾಡಲಾಗಿದೆ. ಆಷಾಢ ಮಾಸದಲ್ಲಿ ಛಾಯಾಗ್ರಾಹಕರಿಗೆ ಸೇರಿದಂತೆ ಬಹುತೇಕವಾಗಿ ಶುಭ ಸಮಾರಂಭಗಳನ್ನು ಮಾಡುವವರಿಗೆ ಕೆಲಸ ಕಡಿಮೆ ಹೀಗಾಗಿ ಇಂತಹ ಒಂದು ಸಂರ‍್ಭದಲ್ಲಿ ಈ ರೀತಿಯಾದಂತಹ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದು ಉತ್ತಮ ಬೆಳವಣಿಗೆ ಎಂದರು.
ಈ ವೇಳೆಯಲ್ಲಿ ಮಾತನಾಡಿದ ಛಾಯಾಗ್ರಾಹಕರದ ಸುರೇಶ್ ಅವರು, ತುಮಕೂರಿನಲ್ಲಿರುವಂತಹ ಎಲ್ಲಾ ಛಾಯಾಗ್ರಾಹಕರು ಸೇರಿ ವಿಶೇಷವಾಗಿ ಈ ಕ್ರಿಕೆಟ್ ಪಂದ್ಯಾವಳಿಯಿಂದ ಆಯೋಜನೆ ಮಾಡಿದ್ದೇವೆ. ಇಲ್ಲಿ ರಾಜ್ಯದ ನಾನಾ ಭಾಗಗಳಿಂದ ಛಾಯಾಗ್ರಾಹಕರು ಆಗಮಿಸಿದ್ದಾರೆ. ಯಶಸ್ವಿಯಾಗಿ ಜುಲೈ 8 ಮತ್ತು 9 ರಂದು ನಡೆಸುತ್ತಿದ್ದೇವೆ. ಯಾವುದೇ ಅಡೆತಡೆ ಇಲ್ಲದೆ ಒಮ್ಮನಸ್ಸಿನಿಂದ ಆಚರಣೆ ಮಾಡುತ್ತಿರುವುದು ಸಂತಸವನ್ನು ತಂದಿದೆ ಎಂದರು.
ಇದೇ ವೇಳೆಯಲ್ಲಿ ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದಂತಹ ಛಾಯಾಗ್ರಹಕ ಕ್ರೀಡಾಪಟುಗಳು, ಛಾಯಾಗ್ರಾಹಕರು, ಮಾಲೀಕರು ಜನಪದ ಗೀತೆಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.