Thursday, December 12, 2024
Homeಜಿಲ್ಲೆತುಮಕೂರುFire accident | ಆಕಸ್ಮಿಕ ಬೆಂಕಿ ಅವಘಡಕ್ಕೆ ಆಹುತಿಯಾದ ಸಾಲು ಸಾಲು ಗುಡಿಸಲುಗಳು..!

Fire accident | ಆಕಸ್ಮಿಕ ಬೆಂಕಿ ಅವಘಡಕ್ಕೆ ಆಹುತಿಯಾದ ಸಾಲು ಸಾಲು ಗುಡಿಸಲುಗಳು..!

ತುಮಕೂರು | ಆಕಸ್ಮಿಕ (accidental) ಅಗ್ನಿ ಅವಘಡಕ್ಕೆ (Fire accident) ಸುಮಾರು ಐದು ಗುಡಿಸಲುಗಳು ಸುಟ್ಟು ಭಸ್ಮವಾಗಿರುವಂತಹ ಘಟನೆ ತುಮಕೂರು (Tumkur) ಜಿಲ್ಲೆ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ನೆಲದಿಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

Tumakuru News | ತುಮಕೂರಿನ ಮಠದ ಜಾತ್ರೆಗೆ ಬಂದಿದ್ದ ಬಾಲಕಿ ಮೇಲೆ ಅತ್ಯಾಚಾರ..! – karnataka360.in

ಗುರುವಾರ ಮಧ್ಯಾಹ್ನದ ವೇಳೆಗೆ ಕೆಂಪಮ್ಮ ಎಂಬುವರ ಗುಡಿಸಲಿಗೆ ಬೆಂಕಿ ಕಾಣಿಸಿಕೊಂಡಿದ್ದು ನಂತರ ಬೆಂಕಿಯ ಜ್ವಾಲೆಯು ಪಕ್ಕದಲ್ಲಿದ್ದ ನರಸಮ್ಮ, ಸರಸ್ವತಮ್ಮ, ಶಿವಮ್ಮ, ರಾಮಕ್ಕ ಎಂಬುವವರ ಗೂಡಿಸಲಿಗೂ ಕೂಡ ವ್ಯಾಪಿಸಿದೆ. ಘಟನೆಯಲ್ಲಿ ಗುಡಿಸಲುಗಳು ಬೆಂಕಿಗೆ ಆಗುಲಿಯಾಗಿವೆ.

ಇನ್ನು ಗುಡಿಸಲಿನಲ್ಲಿ ಇಟ್ಟಿದ್ದ ಬಟ್ಟೆ, ದವಸ, ಧಾನ್ಯಗಳು, ಪಾತ್ರೆ ಸಾಮಗ್ರಿಗಳು ಸೇರಿದಂತೆ ಅನೇಕ ದಾಖಲೆಗಳು ಕೂಡ ಬೆಂಕಿಯ ಜ್ವಾಲೆಗೆ ಸುಟ್ಟುಹೊಗಿವೆ.

ಘಟನೆಯನ್ನು ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದು ಕಳ್ಳಂಬೆಳ್ಳ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಇನ್ನೂ ಘಟನೆಯಲ್ಲಿ ಗುಡಿಸಲುಗಳನ್ನು ಕಳೆದುಕೊಂಡ, ಅದರಲ್ಲಿದ್ದ ಅನೇಕ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು ಸರ್ಕಾರದ ವತಿಯಿಂದ ನಮಗೆ ಪರಿಹಾರವನ್ನು ನೀಡಬೇಕು ಎಂದು ಸಂತ್ರಸ್ತ ಕುಟುಂಬಗಳು ಮನವಿ ಮಾಡಿವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments