ತುಮಕೂರು | ಸಗಟು ದರದಲ್ಲಿ ಪ್ರೆಟ್ರೋಲ್ ಖರೀದಿಗಾಗಿ ಬಂಕ್ ಗೆ ಬಂದಿದ್ದ ತಾಯಿ ಮಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಒಬ್ಬರು ಮೃತಪಟ್ಟು ಮತ್ತೊಬ್ಬರು ಗಂಭೀರವಾಗಿ ಘಾಯಗೊಂಡಿರುವ ಘಟನೆ ಮಧುಗಿರಿ ತಾಲೂಕಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ಆಗ್ನಿ ಅವಗಡದ ವಿವರಗಳು ಸಿ ಸಿ ಕ್ಯಾಮರಾ ದಲ್ಲಿ ಸೆರೆಯಾಗಿವೆ.
ತಾಲೂಕಿನ ದೊಡ್ಡಿರಿ ಹೋಬಳಿಯ ಬಡವನಹಳ್ಳಿಯ ಚೆಕ್ ಪೋಸ್ಟ್ ಬಳಿ ಇರುವ ಪೆಟ್ರೋಲ್ ಬಂಕ್ ನಲ್ಲಿ ತಮ್ಮ ಚಿಲ್ಲೆರೆ ಅಂಗಡಿಯಲ್ಲಿ ಪೆಟ್ರೋಲ್ ಮಾರಾಟದ ಸಲುವಾಗಿ ದ್ವಿಚಕ್ರ ವಾಹನದಲ್ಲಿ ಬಂದಿದ್ದರು.
ಬುಧವಾರ ಸಂಜೆ ಸುಮಾರು 4 ರ ಸಮಯದಲ್ಲಿ ಬಡವನಹಳ್ಳಿಯ ಪೆಟ್ರೋಲ್ ಬ್ಯಾಂಕ್ ಬಳಿಗೆ ಬಂದು ಪೆಟ್ರೋಲ್ ನನ್ನು ಕ್ಯಾನ್ ನಲ್ಲಿ ತುಂಬಿಸುವಾಗ ದ್ವಿಚಕ್ರ ವಾಹನದಲ್ಲಿ ಕುಳಿತು ಕೊಂಡಿದ್ದ ಭವ್ಯ(18) ತಾಯಿ ರತ್ನಮ್ಮ(46) ಎನ್ನುವವರಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಬೆಂಕಿಗೆ ಆಹುತಿಯಾದ ಭವ್ಯ ಮತ್ತು ರತ್ನಮ್ಮ ರವರುಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇದೀಗ ಚಿಕಿತ್ಸೆ ಫಲಕಾರಿಯಾಗದೆ ಭವ್ಯ ಗುರುವಾರ ರಾತ್ರಿ ಮೃತಪಟ್ಟಿದ್ದಾರೆ. ತಾಯಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಶುಕ್ರವಾರ ಶಿರಾ ತಾಲೂಕಿನ ಜವನಹಳ್ಳಿಯಲ್ಲಿ ಸ್ವಂತ ಜಮೀನಿನಲ್ಲಿ ಭವ್ಯವರ ಅಂತ್ಯಕ್ರಿಯೆ ನಡೆಸಲಾಗಿದೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.