ಮಾರುಕಟ್ಟೆಯಲ್ಲಿ ಈ ಮೂರು ಹಣಕಾಸು ಸಾಧನಗಳು ಹೇಗೆ ಕೆಲಸ ಮಾಡುತ್ತವೆ ಎಂದು ನೋಡೋಣ.
ಸ್ಥಿರ ಠೇವಣಿಗಳು (FD ಗಳು): ಸೇಫ್ ಆಯ್ಕೆ
ಸ್ಥಿರ ಠೇವಣಿ ಎಂದರೆ ಬ್ಯಾಂಕುಗಳು ಮತ್ತು ಎನ್ಬಿಏಫ್ಸಿಗಳು ನೀಡುವ ಹಣಕಾಸು ಸಾಧನವಾಗಿದ್ದು, ಅಲ್ಲಿ ನೀವು ಸ್ಥಿರ ಬಡ್ಡಿದರದಲ್ಲಿ ಸ್ಥಿರ ಅವಧಿಗೆ ಒಂದು ದೊಡ್ಡ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ.
ಕಮ್ಮಿ ಅಪಾಯ, ಊಹಿಸಬಹುದಾದ ಆದಾಯ, ಅರ್ಥಮಾಡಿಕೊಳ್ಳಲು ಮತ್ತು ನಿರ್ವಹಿಸಲು ಸುಲಭ ಮತ್ತು ತೆರಿಗೆ ಉಳಿಸುವ ಕಾರಣ ಎಫ್ಡಿ ಅನೇಕ ಹೂಡಿಕೆದಾರ ನೆಚ್ಚಿನ ಹೂಡಿಕೆಯ ಮಾರ್ಗವಾಗಿದೆ.
ಮ್ಯೂಚುಯಲ್ ಫಂಡ್ಗಳು: ಕಾಪೌಂಡಿಂಗ್ ಲಾಭ
ಮ್ಯೂಚುಯಲ್ ಫಂಡ್ಗಳು ಷೇರುಗಳು, ಸಾಲ ಅಥವಾ ಹೈಬ್ರಿಡ್ ಸಾಧನಗಳಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸುತ್ತವೆ.
ಇದರಲ್ಲಿ ಬರುವ ಎಸ್ಐಪಿಗಳು (ವ್ಯವಸ್ಥಿತ ಹೂಡಿಕೆ ಯೋಜನೆಗಳು) ಇತ್ತೀಚಿನ ವರ್ಷಗಳಲ್ಲಿ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ನಿಯಮಿತ, ಸಣ್ಣ ಹೂಡಿಕೆಯ ಕಾರಣ ಮ್ಯೂಚುಯಲ್ ಫಂಡ್ಗಳ ಎಸ್ಐಪಿ ಹೂಡಿಕೆದಾರರ ಅಗ್ರಗಣ್ಯ ಆಯ್ಕೆಯಾಗಿದೆ.
ಅಪಾಯದ ವಿಚಾರಕ್ಕೆ ಬಂದರೆ ಎಫ್ಡಿಗೆ ಹೋಲಿಸಿದರೆ, ಮ್ಯೂಚುಯಲ್ ಫಂಡ್ಗಳು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತವೆ
ಹೆಚ್ಚಿನ ಸಲಹೆಗಾರರು ಎಸ್ಐಪಿ ಆರಂಭಿಸಲು ಸಲಹೆ ನೀಡೋದ್ಯಾಕೆ?
ರೂಪಾಯಿ ವೆಚ್ಚವನ್ನು ಸರಾಸರಿ ಮಾಡಲು, ಭಾವನಾತ್ಮಕ ಹೂಡಿಕೆಯನ್ನು ಕಡಿಮೆ ಮಾಡಲು ಮತ್ತು ಕಾಲಾನಂತರದಲ್ಲಿ ಸಂಪತ್ತನ್ನು ಸೃಷ್ಟಿಸಲು ಅವಕಾಶ ನೀಡುವ ಕಾರಣ, ಹಣಕಾಸು ಸಲಹೆಗಾರರು ಇದನ್ನೇ ಶಿಫಾರಸು ಮಾಡುತ್ತಾರೆ.
ನಿವೃತ್ತಿ, ಮನೆ ಖರೀದಿಸುವುದು ಅಥವಾ ಮಗುವಿನ ಶಿಕ್ಷಣದಂತಹ ಗುರಿಗಳಿಗಾಗಿ ದೀರ್ಘಾವಧಿಯ ಸಂಪತ್ತು ಸೃಷ್ಟಿಗೆ ಈ ಆಯ್ಕೆ ಸೂಕ್ತ ಎನ್ನುವುದು ತಜ್ಞರ ಅಭಿಪ್ರಾಯ.
ವಿನಿಮಯ-ವಹಿವಾಟು ನಿಧಿಗಳು (ETFಗಳು): ಕಡಿಮೆ-ವೆಚ್ಚದ ಮಾರುಕಟ್ಟೆ
ಇಟಿಎಫ್ಗಳು ವಿನಿಮಯ ಕೇಂದ್ರಗಳಲ್ಲಿ ಷೇರುಗಳಂತೆ ವ್ಯಾಪಾರ ಮಾಡುವ ಹೂಡಿಕೆ ನಿಧಿಗಳಾಗಿವೆ. ಅವು ಸಾಮಾನ್ಯವಾಗಿ ನಿಫ್ಟಿ 50 ಅಥವಾ ಸೆನ್ಸೆಕ್ಸ್ನಂತಹ ಸೂಚ್ಯಂಕಗಳನ್ನು ಟ್ರ್ಯಾಕ್ ಮಾಡುತ್ತವೆ.
ಕಡಿಮೆ ವೆಚ್ಚ ಅನುಪಾತ, ಪಾರದರ್ಶಕ ಮತ್ತು ಟ್ರ್ಯಾಕ್ ಮಾಡಲು ಸುಲಭ, ಉತ್ತಮ ದ್ರವ್ಯತೆ ಅಂದರೆ ಇದನ್ನು ಷೇರುಗಳಂತೆ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು ಮತ್ತು ನಿಧಿ ವ್ಯವಸ್ಥಾಪಕ ಪಕ್ಷಪಾತವಿಲ್ಲದ ಕಾರಣ ಹೂಡಿಕೆದಾರರು ಇಟಿಎಫ್ಗಳನ್ನು ಆಯ್ಕೆ ಮಾಡಬಹುದು.
ಇದರಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರಿಗೆ ಡಿಮ್ಯಾಟ್ ಖಾತೆ ಮತ್ತು ಸ್ವಲ್ಪ ಮಾರುಕಟ್ಟೆ ಜ್ಞಾನದ ಅಗತ್ಯವಿದೆ, ಇದರಲ್ಲಿ ನೇರವಾಗಿ ಎಸ್ಐಪಿ ಸೌಲಭ್ಯವಿಲ್ಲ ಮತ್ತು ಬುಲ್ ಮಾರುಕಟ್ಟೆಯಲ್ಲಿ ಸಕ್ರಿಯವಾಗಿ ನಿರ್ವಹಿಸಲ್ಪಡುವ ನಿಧಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸದಿರಬಹುದು. ಇವೆರೆಡು ಇದರ ಅನಾನುಕೂಲತೆಯಾಗಿದೆ.
ದೀರ್ಘಾವಧಿಯ ಹಣಕಾಸು ಯೋಜನೆಗಾಗಿ ಈ ಮೂರು ಆಯ್ಕೆಗಳಲ್ಲಿ ಯಾವುದು ಬೆಸ್ಟ್?
ಈ ಮೂರು ನಿಮ್ಮ ಸಂಪೂರ್ಣ ಹಣಕಾಸು ಅಗತ್ಯಗಳನ್ನು ಪೂರೈಸಲು ಸಾಧ್ಯವಿಲ್ಲದಿದ್ದರೂ, ಹಣಕಾಸಿನ ನೆರವನ್ನು ನೀಡುತ್ತವೆ.
ಜೊತೆಗೆ ಸಮತೋಲಿತ ವಿಧಾನವು ಆರ್ಥಿಕ ಹಿಂಜರಿತದ ಸಮಯದಲ್ಲಿ ಸುರಕ್ಷಿತವಾಗಿರಲು ಮತ್ತು ದೀರ್ಘಾವಧಿಯಲ್ಲಿ ನಿಮ್ಮ ಸಂಪತ್ತನ್ನು ಬೆಳೆಸಲು ನಿಮಗೆ ಸಹಾಯ ಮಾಡುತ್ತದೆ.
ತುರ್ತು ನಿಧಿಗೆ, ಅಲ್ಪಾವಧಿಗೆ (1–3 ವರ್ಷಗಳು) ಎಫ್ಡಿ, ದೀರ್ಘಾವಧಿಯ ಗುರಿಗಳಿಗೆ (5–20 ವರ್ಷಗಳು) ಮ್ಯೂಚುವಲ್ ಫಂಡ್ನ ಎಸ್ಐಪಿ ಮತ್ತು ನಿಷ್ಕ್ರಿಯ ಸಂಪತ್ತು ನಿರ್ಮಾಣ ಮತ್ತು ಸೂಚ್ಯಂಕ ಹೂಡಿಕೆಗಾಗಿ ಇಟಿಎಫ್ಗಳು ಸೂಕ್ತ ಅನ್ನೋದು ಆರ್ಥಿಕ ತಜ್ಞರ ಸಲಹೆ.