ತುಮಕೂರು | ಭಾರತೀಯ ಜನತಾ ಪಾರ್ಟಿಯ (Bharatiya Janata Party) ಹೈಕಮಾಂಡ್ನ ನಾಯಕರು ನಾವು ಕುಟುಂಬ ವಿರೋಧಿಗಳು ಎಂದು ಹೇಳುತ್ತಾ ಬಂದರೂ ಸಹ ಇಂದು ಯಡಿಯೂರಪ್ಪನವರ (Yediyurappa) ಮುಂದೆ ತಲೆ ಬಗ್ಗಿಸಿ ಕುಟುಂಬ ರಾಜಕಾರಣ ಮಾಡಲು ಪ್ರೇರೆಪಿಸಿದಂತೆ, `ನಾ ಖಾವುಂಗ ನಾ ಖಾನೆ ದೂಂಗ’ ಎಂದ ನಾಯಕರು ಈಗ ಕುಟುಂಬ ರಾಜಕಾರಣವನ್ನು (Family politics) ಮುನ್ನೆಲೆಗೆ ತಂದಿರುವುದು ದುರಂತವೇ ಸರಿ ಎಂದು ಆಪ್ ಮುಖಂಡ ಎಂ.ಎಸ್. ಮಧುಸೂಧನ್ (M.S. Madhusudhan) ಟೀಕೆ ಮಾಡಿದ್ದಾರೆ.
ಯಾವ ನೈತಿಕತೆ ಇಟ್ಟುಕೊಂಡು ಬಿಜೆಪಿ ಮಾತನಾಡುತ್ತದೆ ಎಂಬುದೇ ತಿಳಿಯದ ಹಾಗಾಗಿದೆ, ತಂದೆ ಮಗ, ಕುಟುಂಬ ಸದಸ್ಯರಿಗೇ ಎಲ್ಲಾ ಪದವಿಗಳು ದೊರೆತರೆ ಬೇರೆಯವರಿಗೆ ಅರ್ಹತೆ ಇದ್ದರೂ ಸಹ ಅವರಿಗೆ ಸ್ಥಾನಮಾನ ದೊರೆಯದು, ಬಿಜೆಪಿ ಮತ್ತು ಜೆಡಿಎಸ್ ಕುಟುಂಬ ರಾಜಕಾರಣದಲ್ಲಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.
ಸನ್ಮಾನ್ಯ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ಬಿ.ವೈ.ವಿಜಯೇಂದ್ರರ ಮೇಲೆ ಅನೇಕ ಆರೋಪಗಳಿದ್ದವು. ಇಂದು ಬಿ.ವೈ.ವಿಜಯೇಂದ್ರರನ್ನು ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ಹಾಸ್ಯಾಸ್ಪದ, ಇಂದು ರಾಜ್ಯದ ಜನರಿಗೆ ಏನನ್ನು ಸೂಚಿಸಿದಂತಿದೆ. ಇಂದು ಬಿಜೆಪಿ ಸಹ ಕುಟುಂಬ ರಾಜಕಾರಣದ ಹೊರತಾಗಿಲ್ಲ ಎಂದು ಎಎಪಿಯ ತುಮಕೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ. ಎಸ್. ಮಧುಸೂಧನ್ ಖಾರವಾಗಿ ಟೀಕೆ ಮಾಡಿದ್ದಾರೆ.