Thursday, December 12, 2024
Homeರಾಷ್ಟ್ರೀಯFake Universities | ದೇಶದಲ್ಲಿವೆ 20 ನಕಲಿ ವಿಶ್ವವಿದ್ಯಾಲಯಗಳು : ಕರ್ನಾಟಕದ ಈ ವಿಶ್ವವಿದ್ಯಾಲಯ ಕೂಡ...

Fake Universities | ದೇಶದಲ್ಲಿವೆ 20 ನಕಲಿ ವಿಶ್ವವಿದ್ಯಾಲಯಗಳು : ಕರ್ನಾಟಕದ ಈ ವಿಶ್ವವಿದ್ಯಾಲಯ ಕೂಡ ನಕಲಿ..!

ನವದೆಹಲಿ | ದೇಶದಲ್ಲಿರುವಂತಹ ವಿಶ್ವವಿದ್ಯಾಲಯಗಳಲ್ಲಿ ಸುಮಾರು 20 ವಿಶ್ವವಿದ್ಯಾಲಯಗಳು ನಕಲಿಯಾಗಿದ್ದು. ಇವುಗಳಿಗೆ ಯಾವುದೇ ಪದವಿ ಪ್ರಮಾಣಪತ್ರ ವಿತರಿಸುವ ಅಧಿಕಾರವಿಲ್ಲ ಎಂದು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ (ಯುಜಿಸಿ) ತಿಳಿಸಿದೆ. ಆತಂಕಕಾರಿ ವಿಷಯವೆಂದರೆ ದೆಹಲಿಯಲ್ಲೇ ಇವುಗಳ ಸಂಖ್ಯೆ ಹೆಚ್ಚಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಯುಜಿಸಿ ಕಾರ್ಯದರ್ಶಿ ಮನೀಶ್‌ ಜೋಶಿ, ಯುಜಿಸಿ ಕಾಯ್ದೆಯ ನಿಯಮಾವಳಿಗೆ ವಿರುದ್ಧವಾಗಿ ಈ ವಿಶ್ವವಿದ್ಯಾಲಯಗಳು ಪದವಿ ಪ್ರಮಾಣಪತ್ರ ನೀಡುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರಮಾಣಪತ್ರಗಳು ಉನ್ನತ ಶಿಕ್ಷಣಕ್ಕಾಗಲಿ, ಉದ್ಯೋಗಕ್ಕಾಗಲಿ ಮಾನ್ಯತೆ ಹೊಂದಿಲ್ಲ ಎಂದು ತಿಳಿಸಿದ್ದಾರೆ.

ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ

ನವದೆಹಲಿ

  • ಆಲ್‌ ಇಂಡಿಯಾ ಇನ್ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಅಂಡ್‌ ಫಿಜಿಕಲ್‌ ಹೆಲ್ತ್‌ ಸೈನ್ಸ್‌ಸ್‌
  • ಕಮರ್ಷಿಯಲ್‌ ಯುನಿವರ್ಸಿಟಿ ಲಿಮಿಟೆಡ್‌–ದರಿಯಾಗಂಜ್
  • ಯುನೈಟೆಡ್‌ ನೇಶನ್ಸ್‌ ಯುನಿವರ್ಸಿಟಿ
  • ವೃತ್ತಿಪರ ವಿಶ್ವವಿದ್ಯಾಲಯ
  • ಎಡಿಆರ್‌–ಸೆಂಟ್ರಿಕ್ ಜುರಿಡಿಕಲ್ ಯುನಿವರ್ಸಿಟಿ
  • ಇಂಡಿಯನ್‌ ಇನ್ಸ್ಟಿಟ್ಯೂಷನ್ ಆಫ್ ಸೈನ್ಸ್‌ ಅಂಡ್‌ ಎಂಜಿನಿಯರಿಂಗ್
  • ವಿಶ್ವಕರ್ಮ ಒಪನ್ ಯುನಿವರ್ಸಿಟಿ ಫಾರ್ ಸೆಲ್ಫ್‌ ಎಂಪ್ಲಾಯ್‌ಮೆಂಟ್‌
  • ಆಧ್ಯಾತ್ಮಿಕ ವಿಶ್ವವಿದ್ಯಾಲಯ

ಉತ್ತರಪ್ರದೇಶ

  • ಗಾಂಧಿ ಹಿಂದಿ ವಿದ್ಯಾಪೀಠ
  • ನ್ಯಾಷನಲ್ ಯುನಿವರ್ಸಿಟಿ ಆಫ್‌ ಎಲೆಕ್ಟ್ರೋ ಕಾಂಪ್ಲೆಕ್ಸ್‌ ಹೋಮಿಯೋಪಥಿ
  • ನೇತಾಜಿ ಸುಭಾಷ್ ಚಂದ್ರ ಬೋಸ್‌ ಯುನಿವರ್ಸಿಟಿ (ಮುಕ್ತ ವಿಶ್ವವಿದ್ಯಾಲಯ)
  • ಭಾರತೀಯ ಶಿಕ್ಷಾ ಪರಿಷದ್‌

ಆಂಧ್ರಪ್ರದೇಶ

  • ಕ್ರೈಸ್ಟ್ ನ್ಯೂ ಟೆಸ್ಟಮೆಂಟ್ ಡೀಮ್ಡ್ ಯುನಿವರ್ಸಿಟಿ
  • ಬೈಬಲ್ ಓಪನ್ ಯುನಿವರ್ಸಿಟಿ ಆಫ್ ಇಂಡಿಯಾ

ಪಶ್ಚಿಮ ಬಂಗಾಳ

  • ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್
  • ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ ಮೆಡಿಸಿನ್ ಅಂಡ್ ರಿಸರ್ಚ್ ಸಂಸ್ಥೆಗಳು

ಕರ್ನಾಟಕ

  • ಬಡಗಾಂವಿ ಸರ್ಕಾರ್ ವರ್ಲ್ಡ್ ಓಪನ್ ಯುನಿವರ್ಸಿಟಿ ಎಜುಕೇಶನ್ ಸೊಸೈಟಿ

ಕೇರಳ

  • ಸೇಂಟ್ ಜಾನ್ಸ್ ಯುನಿವರ್ಸಿಟಿ

ಪುದುಚೇರಿ

  • ಶ್ರೀ ಬೋಧಿ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌

 ಮಹಾರಾಷ್ಟ್ರ

  • ರಾಜಾ ಅರೇಬಿಕ್ ವಿಶ್ವವಿದ್ಯಾಲಯ
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments