ಬೆಂಗಳೂರು ನಗರ | 2023ರ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈಗಾಗಲೇ ಚುನಾವಣಾ ಆಯೋಗ ಶಾಂತಿಯುತ ಮತದಾನಕ್ಕೆ ಅಗತ್ಯವಾದಂತಹ ಸೂಕ್ತ ಕ್ರಮಗಳನ್ನು ಕೈಗೊಂಡಿದೆ.
ಇದರ ಒಂದು ಅಂಗವಾಗಿ ಕರ್ನಾಟಕ ರಾಜ್ಯದ ಸುಮಾರು 15 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡು ಮತಯಂತ್ರ ಬಳಕೆ ಮಾಡಲು ಚುನಾವಣಾ ಆಯೋಗ ತೀರ್ಮಾನ ಮಾಡಿದೆ. ಇದಕ್ಕೆ ಕಾರಣ ಈ ಕ್ಷೇತ್ರಗಳಲ್ಲಿ 16 ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿರುವುದು.
ಗೌರಿಬಿದನೂರು, ಹನೂರು, ಗಂಗಾವತಿ, ರಾಯಚೂರು, ಹುಬ್ಬಳ್ಳಿ- ಧಾರವಾಡ ಕೇಂದ್ರ, ರಾಜಾಜಿನಗರ, ಶಿವಮೊಗ್ಗ ನಗರ, ಚಿಕ್ಕಬಳ್ಳಾಪುರ, ಹೊಸಕೋಟೆ, ಶ್ರೀರಂಗಪಟ್ಟಣ, ಚಿತ್ರದುರ್ಗ, ನರಸಿಂಹರಾಜ, ಬ್ಯಾಟರಾಯನಪುರ, ಯಲಹಂಕ ಮತ್ತು ಬಳ್ಳಾರಿ ನಗರ ಕ್ಷೇತ್ರಗಳಲ್ಲಿ ಎರಡು ಮತಯಂತ್ರ ಬಳಕೆ ಮಾಡಲು ಚುನಾವಣೆ ಆಯೋಗ ನಿರ್ಧಾರ ಮಾಡಿದೆ.