ತುಮಕೂರು | ಕಚೇರಿಲ್ಲೇ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮಧುಗಿರಿ ಡಿ ವೈ ಎಸ್ ಪಿ ರಾಮಚಂದ್ರಪ್ಪ (DySP Ramachandrappa) ಬಂಧನದ ಬೆನ್ನಲ್ಲೆ ಒಂದೊಂದೆ ರಾಸಲಿಲೇ ಪ್ರಕರಣ ಬೆಳಕಿಗೆ ಬರುತ್ತಿವೆ. ಇದೀಗ ಡಿವೈಎಸ್ಪಿ ರಾಮಚಂದ್ರಪ್ಪನ ಮತ್ತೊಂದು ಕಾಮಪುರಾಣ ಹೊರೆಗೆ ಬಂದಿದ್ದು, ವಿಡಿಯೋ ಮೂಲಕ ತನ್ನ ಅಳಲು ಮತೊಬ್ಬ ಸಂತ್ರಸ್ತೆ ತೊಡಿಕೊಂಡಿದ್ದಾರೆ.
ದೂರು ಕೊಡಲು ಬಂದ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪ ಮಾಡಿರುವ ಮಹಿಳೆ, ತಂದೆ ಸಮಾನ ಎಂದು ಪರಿಪರಿಯಾಗಿ ಬೇಡಿಕೊಂಡ್ರು ಬಿಡದೆ ಲೈಂಗಿಕ ಕಿರುಕುಳ ನಿಡಿದ್ದಾರೆ. ಗಂಡನನ್ನ ಹೊರಗೆ ಕೂರಿಸಿ ಸಂತ್ರಸ್ತೆಯನ್ನ ರೂಮಿಗೆ ಕರೆದು ಕಿರುಕುಳ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಪ್ರಕರಣದ ವಿವರ
ಸಂತ್ರಸ್ತೆ ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಗೆ ಸಾಲ ನೀಡಿ ಹಣ ಕಳೆದುಕೊಂಡಿದ್ದಳು. ಆ ಹಣ ಕೊಡಿಸುವಂತೆ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು. 10-12 ಲಕ್ಷ ರೂಪಾಯಿ ಸಾಲಕೊಟ್ಟು ಹಣ ಕಳೆದುಕೊಂಡಿದ್ದರು. ಮಹಿಳಾ ಆಯೋಗದಿಂದ ದೂರು ಪರಿಶೀಲಿಸುವಂತೆ ತುಮಕೂರು ಎಸ್ಪಿ ಬಂದಿದ್ದ ಕಂಪ್ಲೆಂಟ್ ದೂರಿನ ಆಧಾರದ ಮೇಲೆ ಸಂತ್ರಸ್ತೆಗೆ ಕರೆ ಮಾಡಿದ್ದರು ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ.
ಸಂತ್ರಸ್ತೆಗೆ ವಿಡಿಯೋ ಕಾಲ್ ಮಾಡಿ ಡಿವೈಎಸ್ಪಿ ಕಚೇರಿಗೆ ಬರುವಂತೆ ಹೇಳಿದ್ದರು. ವಿಚಾರಣೆ ನೆಪದಲ್ಲಿ ರೂಮಿಗೆ ಕರೆದೊಯ್ತು ಸಂತ್ರಸ್ತೆಯ ಖಾಸಗಿ ಅಂಗಾಂಗ ಮುಟ್ಟಿ ಕಿರುಕುಳ ನೀಡಿದ್ದರು. ನೀವು ತಂದೆ ಸಮಾನ ಅಂತ ಕಾಲಿಗೆ ಬಿದ್ದು ಪರಿಪರಿಯಾಗಿ ಬೇಡಿಕೊಂಡರು ಬಿಡಲಿಲ್ಲ. 500 ರೂ ಹಣ ನೀಡಿ ಸುಮ್ಮನಿರುವಂತೆ ಪುಸಲಾಯಿಸಿದ್ದರು.
ಡಿವೈಎಸ್ಪಿ ವರ್ತನೆಗೆ ಹೆದರಿದ್ದ ಸಂತ್ರಸ್ತೆ, ಡಿವೈಎಸ್ಪಿ ಕಚೇರಿಯ ರೂಮ್ ನಲ್ಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದರಂತೆ. ಕಾಮಿ ವರ್ತನೆಗೆ ಭಯಗೊಂಡು ರೂಮಿಂದ ಹೊರಗೆ ಓಡಿ ಬಂದು ಬಚಾವ್ ಆಗಿದ್ದಾರೆ. ಮಾರನೆ ದಿನ ಗಂಡನ ಬಳಿ ಡಿವೈಎಸ್ಪಿ ವರ್ತನೆ ಬಗ್ಗೆ ಹೇಳಿದ್ದ ಸಂತ್ರಸ್ತೆ. ಇವರ ವರ್ತನೆಯುಂದ ಬೇಸತ್ತು, ದೂರನ್ನೇ ಕೈ ಬಿಟ್ಟಿದ್ದ ಸಂತ್ರಸ್ತೆ. ಇದೀಗ ರಾಮಚಂದ್ರಪ್ಪ ಬಂಧನದ ಬೆನ್ನಲ್ಲೇ ಅಜ್ಞಾತ ಸ್ಥಳದಿಂದ ವಿಡಿಯೋ ಹರಿಬಿಟ್ಟಿದ್ದಾರೆ.
ವಿಡಿಯೋದಲ್ಲಿ ಸಂತ್ರಸ್ತೆ ಹೇಳಿರುವುದೇನು..?
ಫೇಸ್ ಬುಕ್ ಮೂಲಕ ಕುಪ್ಪೂರು ರಂಗಪ್ಪ ಪರಿಚಯವಾಗಿದ್ರು. ನಾನು ಯಾವುದೇ ಪೋಟೋ ಹಾಕಿದ್ರು, ಇವರು ಗೊತ್ತು ಅವರು ಗೊತ್ತು ಅಂತ ಹೆಸರೇಳಿಕೊಂಡು ಪರಿಚಯವಾದ್ರು. ನೀವು ಏನ್ ಕೆಲಸ ಮಾಡ್ಕೊಂಡಿರೊದು ಅಂತ ಕೇಳಿದಾಗ ನಾನು ರಾಜ್ಯಾಧ್ಯಕ್ಷ, ಜಿಲ್ಲಾಧ್ಯಕ್ಷ, ರಾಜನಹಳ್ಳಿ ಪ್ರಸ್ನನನಾಂದ ಸ್ವಾಮೀಜಿ ಅವರದೆಲ್ಲಾ ನೋಡ್ಕೊಂಡು ಇರೋದೆ, ಕೆಲಸ ಮಾಡಲ್ಲ, ಅವರು ಒಪ್ಪಿಸಿದ ಕೆಲಸ ಮಾಡ್ಕೊಂಡು ಇರೋದು ನಾನು ಯಾವುದೇ ಕೆಲಸ ಮಾಡಲ್ಲ ಅಂತ ಹೇಳ್ತಿದ್ರು.
ಕಷ್ಟದಲ್ಲಿ ಇದ್ದಾಗ ರಂಗಪ್ಪನಿಗೆ 10-12 ಲಕ್ಷ ದುಡ್ಡು ಕೊಟ್ಟಿದ್ವಿ. ಹಣ ವಾಪಸ್ ಕೇಳಿದಾಗ ಅವನು ಕೊಡುವ ಸ್ಥಿತಿಯಲ್ಲಿ ಇರಲಿಲ್ಲ, ನಾವು ಮಹಿಳಾ ಆಯೋಗಕ್ಕೆ ದೂರು ಕೊಟ್ವಿ, ಮಹಿಳಾ ಆಯೋಗದವರು ಮೊದಲು ನೀವು ಎಲ್ಲಾದ್ರೂ ದೂರು ಕೊಟ್ಟಿದ್ದೀರಾ ಅಂತ ಕೇಳಿದ್ರು. ಇಲ್ಲಾ ನಾವು ಎಲ್ಲೂ ಕೊಟ್ಟಿಲ್ಲ, ಯಾರೋ ಕರೆದುಕೊಂಡು ಬಂದು ಇಲ್ಲಿ ಕೊಡಿ ಅಂತ ಹೇಳಿದ್ರು ಅದಕ್ಕೆ ಬಂದ್ವಿ ಅಂತ ಹೇಳಿದ್ರು.
ಮೊದಲು ಒಂದು ಸಾರಿ ಪೊಲೀಸ್ ಠಾಣೆಗೆ ದೂರು ಕೊಡಿ. ಅವರು ರೆಸ್ಪಾನ್ಸ್ ಮಾಡದಿದ್ರೆ, ನಾವು ಬರ್ತೀವಿ ಅಂತ ಮಹಿಳಾ ಆಯೋಗದವರು ಹೇಳಿದ್ರು. ಮಹಿಳಾ ಆಯೋಗದವರು ಒಂದು ಕಂಪ್ಲೇಟ್ ಮಾಡಿಕೊಂಡ್ರು. ತುಮಕೂರು ಟೌನ್ ಸ್ಟೇಷನ್ ಗೆ ಕಂಪ್ಲೇಂಟ್ ಮಾಡಿದ್ವಿ. ಅಲ್ಲಿ ಯಾವುದೇ ರೀತಿ ನ್ಯಾಯ ಸಿಗಲಿಲ್ಲ, ಆ ಒಂದು ಟೈಮ್ ನಲ್ಲಿ ಮಹಿಳಾ ಆಯೋಗದಿಂದ ತುಮಕೂರು ಎಸ್ಪಿ ಸಾಹೇಬರಿಗೆ ದೂರು ಹೋಗಿತ್ತು. ಆ ಸಂದರ್ಭದಲ್ಲಿ ನಮ್ಮ ಊರಿಗೂ ಒಂದು ಲೆಟರ್ ಬಂದಿತ್ತು. ಆಗ ನಮಗೇನು ಅಂತ ಗೊತ್ತಾಲಿಲ್ಲ. ಲೆಟರ್ ನಲ್ಲಿ ಎಸ್ಪಿ ಭೇಟಿಯಾಗುವಂತೆ ಹೇಳಿದ್ರು. ಎಸ್ಪಿ ಸಾಹೇಬ್ರು ಕಡೆಯಿಂದ ಒಂದು ಪೋನ್ ಬಂತು. ನಾನು ಆಗ ಮನೆಯಲ್ಲಿದ್ದೆ.
ನಾವು ಮಧುಗಿರಿಯಿಂದ ಡಿವೈಎಸ್ಪಿ ಮಾತನಾಡ್ತಿರೋದು ಅಂತ ಹೇಳಿದ್ರು. ಆಗ ನನಗೆ ಭಯ ಆಯ್ತು. ಮಹಿಳಾ ಆಯೋಗಕ್ಕೆ ಕಂಪ್ಲೇಟ್ ಮಾಡಿದ್ರಲ್ಲಾ, ಅದು ನಮಗೆ ಬಂದಿದೆ. ನೀವು ಇಲ್ಲಿಗೆ ಬರಬೇಕಮ್ಮ ಅಂತ ಹೇಳಿದ್ರು. ಯಾವಾಗ ಬರ್ತಿರಾ ಅಂತ ಹೇಳಿದ್ರು. ನಾಳೆ ಬರ್ತೀವಿ ಬೆಂಗಳೂರಿನಲ್ಲಿ ಇದ್ದಿವಿ ಅಂತ ಹೇಳಿದ್ವಿ. ಮಹಿಳಾ ಆಯೋಗದಿಂದ ಬಂದಿದೆ ಅಂತ ಹೇಳಿದ ತಕ್ಷಣ ಖುಷಿ ಆಯ್ತು. ಒಂದು ರೀತಿಯ ಅಳು ಬಂತು. ಸಾರ್ ಅವಾಗ ಯಾಕಮ್ಮ ಅಳ್ತೀಯಾ , ಧೈರ್ಯವಾಗಿರುವ ನಾನೀದ್ದಿನಿ , ನನ್ನ ನಂಬೂ ನಾನು ವಿಡಿಯೋ ಕಾಲ್ ಮಾಡ್ತೀನಿ ರಿಸೀವ್ ಮಾಡು ಅಂತ ಹೇಳಿದ್ರು.
ರಿಸೀವ್ ಮಾಡ್ದಾಗಾ ಅವರು ನೋಡೊಕ್ಕೆ ನಮ್ಮ ತಂದೆ ತರ ಇದ್ರು. ಆಗ ಸ್ವಲ್ಪ ನನಗೆ ಧೈರ್ಯ ಬಂತು. ತುಂಬಾ ಅಳು ಬಂತು. ನಡೆದ ಪ್ರತಿಯೊಂದು ವಿಚಾರವನ್ನು ಅವರ ಬಳಿ ಹೇಳಿದೆ. ಆಗ ಸರಿ ನೀವು ಬರಬೇಕಾಗುತ್ತಾಲ್ಲಾ ಅಂತ ಹೇಳಿದ್ರು. ಬರ್ತೀವಿ ಅಂತ ಹೇಳಿದೆ. ಅದಾದ ಮೇಲೆ ನಾನು ಹಾಗೂ ನಮ್ಮ ಯಜಮಾನರು ಹೋದ್ವಿ. ಹೋದಾಗ ಅವರು ಇರಲಿಲ್ಲ. ಬರ್ತೀವಿ ಇರಿಸಿಕೊಳ್ಳಿ ಅಂತ ಹೇಳಿದ್ರು. ಬೇರೆ ಅವರ ಸ್ಟಾಫ್ಟ್ ಹೇಳಿದ್ರು, ನಾವು ಅಲ್ಲೇ ಇದ್ವಿ. ಬಂದು ಅವನಿಗೆ ಪೋನ್ ಮಾಡಿದ್ರು.
ಅವನು ಬಂದು ಹೋಗಿದ್ನಂತೆ ಆಗಲೇ. ನಾನು ಇರಲು ಆಗಲಿಲ್ಲ, ಹೋಗ್ಬಿಟ್ಟೆ ಅಂತ ಹೇಳಿದ್ರು ಅವರು. ಸರಿ ನೀವು ನಾಳೆ ಬನ್ನಿ ಅಂತ ಹೇಳಿದ್ರು ಅವರ ಬರೊದೆ ಸಂಜೆ 5 ಗಂಟೆ ಆಗಿತ್ತು. ಅವತ್ತು ಏನು ಆಗಲಿಲ್ಲ. ಆಗಸ್ಟ್ 11-12-13-14 ಡೇಟ್ ನಲ್ಲಿ ನಾವು ಅಲ್ಲಿಗೆ ಹೋಗಲು ಸ್ಟಾರ್ಟ್ ಮಾಡಿದ್ವಿ. ನೆಕ್ಟ್ ಟೈಮ್ ಹೋದಾಗ ಸಾರ್ ಇದ್ರು. ಅವನು ಇನ್ನು ಬಂದಿರಲಿಲ್ಲ, ಎಲ್ಲಮ್ಮ ಪೋನ್ ಮಾಡಿ ಅಂತ ಬೇರೆಯವರಿಗೆ ಹೇಳಿದ್ರು . ಪೋನ್ ಮಾಡಿದಾಗ ಬರಕ್ಕಾಗಲ್ಲ ಅಂತ ಹೇಳಿದ್ದಂಗೆ ಇತ್ತು. ಇವರ ಪೋನ್ ನಿಂದ ಮತ್ತೆ ಪೋನ್ ಮಾಡಿ ಬೈದಂಗೆ ಇತ್ತು ಬಾರಮ್ಮ, ಇಲ್ಲಿ ಫರ್ಸನಲ್ ಆಗಿ ಮಾತನಾಡ್ಬೇಕು ಏನ್ ನಡೆತ್ತು ಅಂತ ಹೇಳ್ಬೇಕು ನೀನು, ರೂಮಿಗೆ ಕರೆದರು. ಮಹಿಳಾ ಆಯೋಗಕ್ಕೆ ದೂರು ಕೊಟ್ಟಿರೋದ್ರಿಂದ ಪರ್ಸನಲ್ ಆಗಿ ಹೇಳಬೇಕೆನೋ ಅಂತ ನಾನು ರೂಮ್ ಗೆ ಹೋದೆ.
ಹೋದಾಗ ಸಾರ್ ಹೀಗೆಲ್ಲಾ ಆಯ್ತು ಅಂತ ಹೇಳ್ಕೊಂಡು ಅಳೊಕ್ಕೆ ಶುರುಮಾಡ್ದೆ. ನೀವು ನಮ್ಮ ತಂದೆ ತರ ಇದ್ದೀರಾ ನಮಗೆ ನ್ಯಾಯ ಕೊಡಿಸಿ. ಎಲ್ಲೂ ನಮಗೆ ನ್ಯಾಯ ಸಿಕ್ಕಿಲ್ಲ ನಮಗೆ ದುಡ್ಡಿಗೆ ಮೋಸ ಆಗಿದೆ. ಅವರು ದುಡ್ಡು ಕೊಡುವ ಸ್ಥಿತಿಯಲ್ಲಿ ಇಲ್ಲ ನಿಮ್ಮ ಕಾಲಿಗೆ ಬೀಳ್ತೀನಿ ಅಂತ ಅವರ ಕಾಲು ಹಿಡಿದುಕೊಂಡೆ. ಕಾಲು ಹಿಡಿದುಕೊಂಡಾಗ ನನ್ನ ಭುಜ ಹಿಡಿದುಕೊಂಡು ಎತ್ತಿದ್ರು. ಕಣ್ಣೀರು ಒರೆಸಿದರು, ನಮ್ಮ ತಂದೆ ವಯಸ್ಸಿನವರಾಗಿದ್ದರಿಂದ ನನಗೇನು ಅನಿಸಲಿಲ್ಲ ಭಯ ಆಗಲಿಲ್ಲ. ಕಣ್ಣೀರು ಒರೆಸಿ ಎದೆ ಹಿಡ್ಕೊಂಡು ಪುಶ್ ಮಾಡಿದ್ರು. ಹಗ್ ಮಾಡಿಕೊಳ್ಳು ಬರೋದು, ಕೆನ್ನೆ ಹಿಡ್ಕೊಂಡು ಕಿಸ್ ಮಾಡೊಕ್ಕೆ ಬರೊದು. ಹಾಗೆಲ್ಲಾ ಮಾಡಿದ್ರು. ನಮಗೆಲ್ಲಾ ಪುಲ್ ಭಯ ಆಯ್ತು. ಡೋರ್ ತೆಗೆದುಕೊಂಡು ಹೊರಗೆ ಓಡಲು ನೋಡಿದೆ.
ಇದೇನು ಸಾರ್ ನಾವೇನೊ ಅಂದುಕೊಂಡು ಬಂದ್ರೆ. ಬೋಲ್ಟ್ ತಕ್ಕೊಂಡು ಹೊರಗೆ ಬರಲು ಹೋದೆ. ಅವಾಗ ನನಗೆ ಯೂರಿನ್ ಬಂದು ಬಿಡ್ತು. ಯೂರಿನ್ ಮಾಡ್ಕೊಂಡಿರೊದನ್ನ ನೋಡಿ, ಏನು ಆಗಲ್ಲ ಸುಮ್ಮನೆ ಇರು ನಾನು ಇದ್ದೀನಿ ಅಂತ ಹೇಳ್ತಿದ್ರು. ಆಗ ಬೇಡ ಬೇಡ ಅಂತ ಹೇಳ್ತದೆ. ಆಗ ಜೇಬಿಂದ ಪರ್ಸ್ ತೆಗೆದು ಬೇಡ ಸಾರ್ ಅಂದ್ರು, ಕೈ ಕಿತ್ತು 500 ಇಟ್ಟರು, ನಾನು ಅಷ್ಟರಲ್ಲಿ ಬೋಲ್ಟ್ ತೆಗೆದುಕೊಂಡು ಬಂದುಬಿಟ್ಟೆ, ನಮ್ಮ ಯಜಮಾನರು ಅದೇನು ಅಂತ ಕೇಳಿದ್ರು, ಅವರಿಗೆ ಹೇಳಲು ಧೈರ್ಯಬರಲಿಲ್ಲ, ಸುಮ್ಮನೆ ಕುಳಿತುಕೊಂಡು ಬಿಟ್ಟೆ.
ಕೈ ಕಾಲು ಆಡಲಿಲ್ಲ, ತುಂಬಾ ನೋವಾಯ್ತು, ಎಲ್ಲಿ ಹೋದ್ರು ನನಗೆ ನ್ಯಾಯ ಸಿಗಲಿಲ್ಲ, ಇದೇನು ಈ ಯಪ್ಪ, ನಾನೇನೊ ಅಂದು ಕೊಂಡು ಖುಷಿಯಾಗಿ ಬಂದೆ. ಇವರು ಈ ರೀತಿ ಮಾಡ್ತಾರಾಲ್ಲ ಅಂತ ತುಂಬಾ ನೋವಾಯ್ತು. ಆ ಸಂದರ್ಭದಲ್ಲಿ ನಾನೇನು ಹೇಳಲಿಲ್ಲ ನಮ್ಮ ಯಜಮಾನರಿಗೆ ನಡೆದಿದ್ದೆಲ್ಲಾ ಬೆಳಗ್ಗೆ ಹೇಳ್ದೆ. ಮತ್ತೆ ಪೋನ್ ಮಾಡಿದಾಗ ಅವನು (ಡಿವೈಎಸ್ಪಿ) ಅವತ್ತು ಬಂದಿರಲಿಲ್ಲ. ನಮಗೆ ಬೇಜಾರ್ ಆಯ್ತು, ಸುಮ್ನೆ ರಜೆ ಹಾಕ್ಬೇಕು, ಬಾಡಿಗೆ ಕಟ್ಟಬೇಕು ಎಷ್ಟು ಕಷ್ಟ ಇದೆ, ಅಂತ ಸುಮ್ಮನಾದ್ವಿ, ನಿನ್ನೆ ಆ ರೀತಿ ನಡೆದುಕೊಂಡಿದ್ದರಿಂದ ನಮ್ಮ ಯಜಮಾನರಿಗೆ ಹೇಳಿದ್ದೆ, ನನ್ನನ್ನು ಬಿಟ್ಟು ಎಲ್ಲಿಯೋ ಹೋಗಬೇಡ ಅಂತ ಸುಮ್ಮನಾದ್ವಿ. ಎಂದು ವಿಡಿಯೋ ಮೂಲಕ ಸಂತ್ರಸ್ಥೆ ನಡೆದ ಘಟನೆಯ ಬಗ್ಗೆ ವಿಡಿಯೋ ಮೂಲಕ ಬಿಚ್ಚಿಟ್ಟಿದ್ದಾರೆ.