ತುಮಕೂರು | ಜಿಲ್ಲೆಯ ಮಧುಗಿರಿಯ ಡಿವೈಎಸ್‌ಪಿ ರಾಮಚಂದ್ರಪ್ಪನ (DySP Ramachandrappa) ರಾಸಲೀಲೆ ಪ್ರಕರಣ ಬಯಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿದೆ. ಜಮೀನು ವಿವಾದದ ದೂರು ನೀಡಲು ಬಂದು ನ್ಯಾಯ ಕೋರಿ ಒತ್ತಾಯಿಸಿದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪ ಡಿವೈಎಸ್‌ಪಿ ರಾಮಚಂದ್ರಪ್ಪ ಮೇಲೆ ದಾಖಲಾಗಿದೆ. ಈ ಸಂಬಂಧ ಡಿಜಿ, ಐಜಿಪಿ ಅಲೋಕ್ ಮೋಹನ್ ಅವರು ಅಮಾನತಿನ ಆದೇಶ ಹೊರಡಿಸಿದ್ದರು.
ಪ್ರಕರಣದ ವಿವರ
ಮಧುಗಿರಿ ಪೊಲೀಸ್ ಠಾಣೆಯಲ್ಲಿ ಜಮೀನು ಸಂಬಂಧಿತ ದೂರು ದಾಖಲಿಸಲು ಬಂದ ಮಹಿಳೆಯನ್ನು ಡಿವೈಎಸ್‌ಪಿ ರಾಮಚಂದ್ರಪ್ಪ ಕಚೇರಿಗೆ ಕರೆಯಿಸಿಕೊಂಡಿದ್ದರು. ಕಚೇರಿಯಲ್ಲಿ ವಿಚಾರಣೆ ನಡೆಸುವ ನೆಪದಲ್ಲಿ ಮಹಿಳೆಯನ್ನು ಪುಸಲಾಯಿಸಿ ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಘಟನೆಯ ದೃಶ್ಯ ಕಿಟಕಿಯ ಮೂಲಕ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದ್ದು, ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ದೂರು ದಾಖಲು
ಮಹಿಳೆಯ ದೂರಿನ ಮೇಲೆ ಸೆಕ್ಷನ್ 68, 75, 79 ಅತ್ಯಾಚಾರ ಕಾನೂನು ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಈ ಆಧಾರದ ಮೇಲೆ ರಾಮಚಂದ್ರಪ್ಪನನ್ನು ಮಧುಗಿರಿ ಪೊಲೀಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಸ್ಥಳೀಯ ಮಹಿಳೆ ಜಮೀನು ವಿವಾದದ ಸಂಬಂಧ ಪೊಲೀಸರ ಮೊರೆ ಹೋಗಿದ್ದರು. ಈ ವೇಳೆ ಡಿವೈಎಸ್‌ಪಿ, ಮಹಿಳೆಯ ದೂರು ವಿಚಾರಣೆಗಾಗಿ ಕಚೇರಿಗೆ ಕರೆಸಿದ್ದರು. ನಂತರ, ಕಚೇರಿಯ ಶೌಚಾಲಯದ ಬಳಿ ಮಹಿಳೆಯನ್ನು ಬಲವಂತವಾಗಿ ಬಳಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಕಾನೂನು ಪ್ರಕ್ರಿಯೆ ವೇಗವಾಗಿ ನಡೆಸಿ ಕ್ರಮ ಕೈಗೊಳ್ಳಲಾಗಿದೆ.
ಪೊಲೀಸ್ ಇಲಾಖೆಗೆ ದೊಡ್ಡ ಕಳಂಕ
ರಾಜ್ಯದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತವರು ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು ಪೊಲೀಸ್ ಇಲಾಖೆಗೆ ದೊಡ್ಡ ಕಳಂಕಿತವಾಗಿದೆ. ಮಹಿಳಾ ಸುರಕ್ಷತೆಯ ವಿಚಾರದಲ್ಲಿ ಈ ರೀತಿಯ ಘಟನೆಗಳು ಬಿಕ್ಕಟ್ಟನ್ನು ತರುವುದರ ಜೊತೆಗೆ, ಸಾರ್ವಜನಿಕರ ವಿಶ್ವಾಸವನ್ನು ಕಳೆಯುತ್ತವೆ.