Wednesday, February 5, 2025
Homeಜಿಲ್ಲೆಬೆಂಗಳೂರು ನಗರDrug seizure | ಪೊಲೀಸರ ಡ್ರಗ್ಸ್ ಜಪ್ತಿ ಕಳ್ಳಾಟಕ್ಕೆ ಬ್ರೇಕ್ ಹಾಕಿದ ರಾಜ್ಯ ಪೊಲೀಸ್ ಇಲಾಖೆ..!

Drug seizure | ಪೊಲೀಸರ ಡ್ರಗ್ಸ್ ಜಪ್ತಿ ಕಳ್ಳಾಟಕ್ಕೆ ಬ್ರೇಕ್ ಹಾಕಿದ ರಾಜ್ಯ ಪೊಲೀಸ್ ಇಲಾಖೆ..!

ಬೆಂಗಳೂರು | ಡ್ರಗ್ಸ್ ಜಪ್ತಿಯಾದ (Drug seizure) 48 ಗಂಟೆಯೊಳಗೆ ಕೋರ್ಟ್ ಗೆ ವರದಿ ಸಲ್ಲಿಕೆ ಕಡ್ಡಾಯ ಮಾಡಲಾಗಿದೆ. ಪೊಲೀಸರ ಕಳ್ಳಾಟ ತಪ್ಪಿಸಲು ಪೊಲೀಸ್ ಇಲಾಖೆ ಮಾರ್ಗಸೂಚಿಗಳನ್ನು ಹೊರಡಿಸಿದೆ. ಎನ್ ಡಿ ಪಿ ಎಸ್ ಅಡಿ ದಾಳಿ ನಡೆಸುವಾಗ ಪೊಲೀಸರ ವಿರುದ್ಧವೇ ಆರೋಪಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಇದನ್ನ ತಡೆಗಟ್ಟಲು ರಾಜ್ಯ ಪೊಲೀಸ್ ಇಲಾಖೆಯಿಂದ ಪ್ರತ್ಯೇಕ ಮಾರ್ಗಸೂಚಿ ಮತ್ತು ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕ ಡಾ.ಅಲೋಕ್ ಮೋಹನ್ ಅವರಿಂದ ಸೂಚನೆ ನೀಡಿದ್ದಾರೆ.

ಮಾದಕವಸ್ತು ಜಪ್ತಿಯಾದ 48 ಗಂಟೆಯೊಳಗೆ ನ್ಯಾಯಾಲಯಕ್ಕೆ ಪಂಚನಾಮೆ ವರದಿ ಸಲ್ಲಿಸಬೇಕು.  ಇದರಲ್ಲಿ ಪೊಟೊ ಹಾಗೂ ವಿಡಿಯೊಗ್ರಪಿ ಕಡ್ಡಾಯವಾಗಿ ನಮೂದಿಸಬೇಕು. ಬೆಂಗಳೂರು ಮಾತ್ರವಲ್ಲದೆ ರಾಜ್ಯದಲ್ಲಿ ಅಫ್ರಿಕಾ ಮೂಲದ ಪ್ರಜೆಗಳು ನಿರಂತರವಾಗಿ ಡ್ರಗ್ಸ್ ದಂಧೆಯಲ್ಲಿ ನಿರತರಾಗಿದ್ದಾರೆ. ಮಾಹಿತಿ ಪ್ರಕಾರ ವರ್ಷಕ್ಕೆ ಎನ್ ಡಿ ಪಿ ಎಸ್ ಕಾಯ್ದೆಯಡಿ 1 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗುತ್ತಿದೆ. ಅವ್ಯವಹಾರ ದಂಧೆಯಲ್ಲಿ ತೊಡಗಿರುವ ಜಾಲ ವ್ಯಾಪಕವಾಗಿದೆ  ಇವರನ್ನ ಮಟ್ಟಹಾಕಲು ಕಟ್ಟುನಿಟ್ಟಿನ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ದಾಳಿಗೂ ಮುನ್ನ ಏನು ಮಾಡಬೇಕು..?

  • ಘಟನಾ ಸ್ಥಳಕ್ಕೆ ತೆರಳುವ ಮುನ್ನ ಡೈರಿಯಲ್ಲಿ ಅನುಮತಿ ಪಡೆದಿರವ ಬಗ್ಗೆ ದಾಳಿ ಮಾಡಲು ಶೋಧನಾ ವಾರೆಂಟ್ ಪಡೆದಿದ್ದರೆ ಅಥವಾ ಪಡೆಯದಿದ್ದರ ಬಗ್ಗೆ ನಮೂದಿಸಬೇಕು.
  • ದಾಳಿ ಮಾಡಿದ ಅಧಿಕಾರಿಯು ಅಧಿಕೃತವಾಗಿ ರಿವಾಲ್ವರ್ ಇಟ್ಟುಕೊಂಡಿರಬೇಕು.
  • ಮಾಹಿತಿ ದೊರೆತ 72 ಗಂಟೆಗಳ ಒಳಗಾಗಿ ಲಿಖಿತ ರೂಪದಲ್ಲಿ ಮಾಹಿತಿ ನೀಡಿ ಮೇಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು.
  • ಶೋಧ ನಡೆಸಬೇಕಾದ ಸ್ಥಳ, ಯಾವ ರೀತಿ ಮಾಹಿತಿ ಸಿಕ್ಕಿದೆ ಒಳಗೊಂಡಂತೆ ಪೂರ್ಣ ಮಾಹಿತಿ ವಿವರವನ್ನ ಡೈರಿಯಲ್ಲಿ ನಮೂದಿಸಬೇಕು.

ದಾಳಿ ವೇಳೆ ಪೊಲೀಸರು ಮಾಡಬೇಕಿರುವುದೇನು..?

  • ಸರ್ಚ್ ವಾರೆಂಟ್ ತೋರಿಸಿ ದಾಳಿ ಮಾಡಬೇಕು.
  • ದಾಳಿ ವೇಳೆ ತಮ್ಮ ಬಳಿ ತಮ್ಮ ಬಳಿ ಮಾದಕವಸ್ತುಗಳು ಇಲ್ಲವೆಂದು ಖಚಿತಪಡಿಸಿಕೊಳ್ಳಬೇಕು.
  • ದಾಳಿ ಆರಂಭದಿಂದ ಮಹಜರು ಪ್ರಕ್ರಿಯೆಯನ್ನ ಮುಗಿಸಿ ಮಹಜರ್ ಸಾಕ್ಷಿದಾರರ ಸಹಿ ಪಡೆಯಬೇಕು.
  • ಅಲ್ಲಿಯತನಕ ಆಡಿಯೊ-ವಿಡಿಯೊ ಮಾಡುವುದು ಕಡ್ಡಾಯ.
  • ಆರೋಪಿಗಳ ಮೊಬೈಲ್ ನಲ್ಲಿರುವ ಡೇಟಾ ಹಾಗೂ ಇತರೆ ಸಾಕ್ಷ್ಯಗಳ ಪರಿಶೀಲನೆ.

ದಾಳಿ ನಂತರ ಮಾಡಬೇಕಾಗಿರುವುದು ಏನು..?

  • ಶೋಧ ಕಾರ್ಯ ಮುಗಿದ ಬಳಿದ ದಾಳಿ ಸಂಪೂರ್ಣ ಪ್ರಕ್ರಿಯೆಯನ್ನ ಸಂಬಂಧಿಸಿದ ಪೊಲೀಸ್ ಅಧೀಕ್ಷಕರಿಗೆ 48 ಗಂಟೆಯೊಳಗೆ ವರದಿ ಮಾಡಬೇಕು.
  • ನ್ಯಾಯಾಲಯದ ಆದೇಶದವರೆಗೆ ಠಾಣಾಧಿಕಾರಿಯೇ ಜಪ್ತಿಯಾದ ವಸ್ತುಗಳನ್ನ ರಕ್ಷಿಸಬೇಕು.
  • ಪರಿಶೀಲನೆ ಮುಕ್ತಾಯ ಬಳಿಕ ಸಂಬಂಧಿಸಿದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕು.
  • ಎಷ್ಟೋ ವೇಳೆ ಶಂಕಿತರನ್ನ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸದೆ ತಮ್ಮ ಕಸ್ಟಡಿಯಲ್ಲಿ ಇಟ್ಟುಕೊಳ್ಳುವುದು.
  • ಜಪ್ತಿ ಮಾಡಲಾದ ಮಾದಕವಸ್ತುಗಳನ್ನ ನ್ಯಾಯಾಲಯಕ್ಕೆ ತಿಳಿಸದೆ, ದುರ್ಬಳಕೆ ಹಾಗೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಂಧಿಸದೆ ಬಿಟ್ಟು ಕಳುಹಿಸುವುದು ನಡೆಯಬಹುದು.
  • ಇದನ್ನ ತಡೆಯಲು ಈ ಮಾರ್ಗಸೂಚಿಗಳು ನೆರವಿಗೆ ಬರಲಿದೆ ಎಂದು ಕಟ್ಟುನಿಟ್ಟಿನ ಕ್ರಮ.
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments