ತುಮಕೂರು (ಫೆ. 04) | ತುಮಕೂರು ಜಿಲ್ಲೆಯ ಹೊಸಹಳ್ಳಿ ಗ್ರಾಮದ ವಿಕಲಚೇತನ ಗಂಗರಾಜು ಅವರಿಗೆ ವಿಶೇಷ ಪ್ರಕರಣದಡಿ ನಿವೇಶನ ಕಲ್ಪಿಸಲು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ (Dr. G. Parameshwar) ಅವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಅವರಿಗೆ ಸೂಚನೆ ನೀಡಿದ್ದಾರೆ.
ಇದನ್ನು ಓದಿ : Anganwadi Kendra | ಅಂಗನವಾಡಿ ಕೇಂದ್ರವಿಲ್ಲದೆ ಮಕ್ಕಳ ಪರದಾಟ..!
(Dr. G. Parameshwar) ಸಚಿವರ ಸ್ಪಂದನೆ
ನಗರದಲ್ಲಿ ಸಚಿವರ ಭೇಟಿಗಾಗಿ ಕಾಯುತ್ತಿದ್ದ ಗಂಗರಾಜು ಅವರ ಸ್ಥಿತಿಯನ್ನು ಗಮನಿಸಿದ ಪರಮೇಶ್ವರ (Dr. G. Parameshwar), ಕಾರಿನಿಂದ ಇಳಿದು ಗಂಗರಾಜು ಅವರ ಮನವಿಯನ್ನು ಸ್ವೀಕರಿಸಿ ವಿಚಾರಿಸಿದರು. ಹುಟ್ಟುವಾಗಲೇ 80% ಅಂಗವೈಕಲ್ಯ ಹೊಂದಿರುವ ಗಂಗರಾಜು, 20 ವರ್ಷಗಳಿಂದ 20×15 ಜಾಗದಲ್ಲಿ ಅಂಗಡಿ ನಡೆಸಿ ಜೀವನ ನಡೆಸುತ್ತಿದ್ದಾರೆ. ಈ ಜಾಗವನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಡಲು ಅವರು ಮನವಿ ಮಾಡಿದರು.
ಅಧಿಕಾರಿಗಳಿಗೆ ತಕ್ಷಣದ ಆದೇಶ
ಗಂಗರಾಜು ಅವರ ಮನವಿಗೆ ಸ್ಪಂದಿಸಿದ ಪರಮೇಶ್ವರ (Dr. G. Parameshwar), ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯತಿ ಸಿಇಒಗೆ ತಕ್ಷಣ ಕ್ರಮ ಕೈಗೊಂಡು ವರದಿ ನೀಡಲು ಸೂಚಿಸಿದರು.