Thursday, December 12, 2024
Homeಆರೋಗ್ಯDr. Aggarwal Eye Hospital | ಗ್ಲುಕೋಮಾ ಸಮಸ್ಯೆಗೆ ತುಮಕೂರಿನ ಈ ಆಸ್ಪತ್ರೆಯಲ್ಲಿ ಸಿಗುತ್ತದೆ ಉಚಿತ...

Dr. Aggarwal Eye Hospital | ಗ್ಲುಕೋಮಾ ಸಮಸ್ಯೆಗೆ ತುಮಕೂರಿನ ಈ ಆಸ್ಪತ್ರೆಯಲ್ಲಿ ಸಿಗುತ್ತದೆ ಉಚಿತ ಚಿಕಿತ್ಸೆ..!

ಆರೋಗ್ಯ ಸಲಹೆ | ಗ್ಲುಕೋಮಾ (Glaucoma) ಸೋಂಕಲ್ಲ ಮತ್ತು ಇದು ಸಾಂಕ್ರಾಮಿಕವಲ್ಲ (Not contagious). ಗ್ಲುಕೋಮಾ ಎನ್ನುವುದು ಕಣ್ಣಿನಲ್ಲಿ (eye) ಬಹಳಷ್ಟು ದ್ರವದ ಒತ್ತಡದಿಂದ ಉಂಟಾಗುವ ಕಣ್ಣಿನ ನರದ ತುದಿಯ ರೋಗವಾಗಿದೆ ಎಂದು ತುಮಕೂರಿನ (Tumkur) ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆಯ (Dr. Aggarwal Eye Hospital) ವೈದ್ಯರಾದ ಡಾ. ಚೈತ್ರ.ಡಿ ಹೇಳಿದ್ದಾರೆ.

Exercise For Back Pain | ಔಷಧಿಗಳನ್ನು ಬಳಕೆ ಮಾಡದೆ ಕುತ್ತಿಗೆ ಮತ್ತು ಬೆನ್ನು ನೋವಿಗೆ ಪರಿಹಾರ ಬೇಕೆ..? – karnataka360.in

ಕಣ್ಣಿನ ಒಳಗೆ ನಿರಂತರವಾಗಿ ಹರಿಯುವ ದ್ರವವಿರುತ್ತದೆ ಮತ್ತು ಅದು ಕಣ್ಣಿನಿಂದ ಹರಿದು ಹೋಗುತ್ತದೆ. ಕಣ್ಣಿನ ಒಳ ಹರಿವಿನ ವ್ಯವಸ್ಥೆ ಕಟ್ಟಿಕೊಂಡಾಗ, ಅದು ಕಣ್ಣಿನಲ್ಲಿ ದ್ರವ ಸಂಗ್ರಹವನ್ನು ಉಂಟು ಮಾಡುತ್ತದೆ. ದ್ರವವು ಹೆಚ್ಚಾದಂತೆ, ಅದು ಕಣ್ಣಿನಲ್ಲಿ ಒತ್ತಡ ಹೇರಲು ಪ್ರಾರಂಭಿಸುತ್ತದೆ (ಐಒಪಿ) ಅಸಹಜವಾದ ಅಧಿಕ ರಕ್ತದೊತ್ತಡ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುವಂತೆ, ಅಸಹಜವಾದ ಅಧಿಕ ಮಟ್ಟಕ್ಕೆ ಹೋಗುವ ಐಒಪಿ ಕಣ್ಣಿಗೆ ಹಾನಿ ಮಾಡುತ್ತದೆ.

ಕಾಲಾ ನಂತರದಲ್ಲಿ ಈ ಅಧಿಕ ಒತ್ತಡವು (ಐಒಪಿ) ಕಣ್ಣಿನ ನರದ ತುದಿಯಂತಹ ಸೂಕ್ಷ್ಮ ದೃಷ್ಟಿ ರಚನೆಗಳನ್ನು ಹಾನಿಗೊಳಸಬಹುದು. ಚಿಕಿತ್ಸೆ ನೀಡದಿದ್ದಲ್ಲಿ ಇದು ಕುರುಡುತನಕ್ಕೆ ಕಾರಣವಾಗಬಹುದು ಎಂದಿದ್ದಾರೆ.

ಇದನ್ನು ಹೇಗೆ ಪತ್ತೆ ಹಚ್ಚಲಾಗುತ್ತದೆ.. ?

ಗ್ಲೋಕೋಮಾ ರೋಗವನ್ನು ರೋಗಿಯು ರೋಗದ ಆರಂಭಿಕ ಹಂತಗಳಲ್ಲಿ ನೋಡಲು ಅಥವಾ ಅನುಭವಿಸಲು ಸಾಧ್ಯವಿಲ್ಲ. ಇದನ್ನು ಸಾಮಾನ್ಯವಾಗಿ ಎಂದಿನ ಕಣ್ಣಿನ ಪರಿಶೀಲನೆಯ ಸಮಯದಲ್ಲಿ ಐಒಪಿ ಹೆಚ್ಚಾಗಿರುವುದನ್ನು ಅನುಮಾನಿಸಿದಾಗ ಹಾಗೂ ಹೆಚ್ಚು ವಿವರವಾದ ಪರೀಕ್ಷೆಗಳನ್ನು ಮಾಡಿದಾಗ ಗುರುತಿಸಲಾಗುತ್ತದೆ ಅಥವಾ ಅದನ್ನು ನಿರ್ದಿಷ್ಟ ಪ್ರಮಾಣದ ಹಾನಿಯಾದ ಮೇಲೆ ರೋಗಿಗಳು ಸ್ವತಃಪತ್ತೆ ಹಚ್ಚುತ್ತಾರೆ. ಗ್ಲುಕೋಮಾ ಸಾಮಾನ್ಯವಾಗಿ ಎರಡೂ ಕಣ್ಣುಗಳಲ್ಲಿ ಕಂಡುಬರುತ್ತದೆ. ಆದರೆ ಹೆಚ್ಚುವರಿ ದ್ರವದ ಒತ್ತಡವು ಸಾಮಾನ್ಯವಾಗಿ ಒಂದು ಕಣ್ಣಿನಲ್ಲಿ ಮಾತ್ರ ಮೊದಲಿಗೆ ಉಂಟಾಗಲು ಪ್ರಾರಂಭವಾಗುತ್ತದೆ.

ಇದು ನೋವು ರಹಿತವಾಗಿರುತ್ತದೆ ಮತ್ತು ಯಾವುದೇ ಎಚ್ಚರಿಕೆಯ ರೋಗಲಕ್ಷಣಗಳಿರುವುದಿಲ್ಲ. ಜನರಿಗೆ ತಾವು ಅದನ್ನು ಹೊಂದಿದ್ದೇವೆ ಎಂದು ಸಾಧಾರಣವಾಗಿ ತಿಳಿದಿರುವುದಿಲ್ಲ. ಇದು ತುಂಬಾ ನಿಧಾನವಾಗಿ ಮುಂದುವರೆಯುತ್ತದೆ ಮತ್ತು ಅನೇಕ ಬಾರಿ ಅದನ್ನು ಪತ್ತೆ ಹಚ್ಚುವಷ್ಟರಲ್ಲಿ ಸ್ವಲ್ಪ ಪ್ರಮಾಣದ ಹಾನಿ ಆಗಲೇ ಆಗಿರುತ್ತದೆ.

ಯಾರು ಅಪಾಯದಲ್ಲಿರುತ್ತಾರೆ..?

ಎಲ್ಲಾ ವಯಸ್ಸಿನ ಜನರಲ್ಲೂ ಗ್ಲುಕೋಮಾ ಉಂಟಾಗಬಹುದಾದರೂ, ವಯಸ್ಸಾದವರಲ್ಲಿ ಅದು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ವಿಶೇಷವಾಗಿ ಕೆಳಕಂಡ ಜನರ ಗುಂಪುಗಳು ಅಪಾಯ ಹೊಂದಿರುತ್ತವೆ :

  • 40 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು.
  • ಗ್ಲುಕೊಮಾದ ಕೌಟುಂಬಿಕ ಇತಿಹಾಸ ಹೊಂದಿರುವವರು.
  • ಕಣ್ಣುಗಳಿಗೆ ಗಾಯಗಳಾಗಿದ್ದ ವ್ಯಕ್ತಿಗಳು.
  • Steroids ದೀರ್ಘಕಾಲ ಬಳಸಿದ್ದಲ್ಲಿ.

ಚಿಕಿತ್ಸೆ

ನಿಮಗೆ ನಿರಂತರ ಹಾಗೂ ಜೀವನ ಪರ್ಯಂತ ಆರೈಕೆಯ ಅಗತ್ಯವಿರುತ್ತದೆ. ಗ್ಲುಕೋಮಾವನ್ನು ನಿಯಂತ್ರಿಸಬಹುದಾದರೂ, ಈಗಾಗಲೇ ಸಂಭವಿಸಿದ ಯಾವುದೇ ಹಾನಿಯನ್ನು ಸರಿಮಾಡಲು ಸಾಧ್ಯವಿಲ್ಲ.

ಗ್ಲುಕೋಮಾವನ್ನು ಮುಂದಿನ ಹಾನಿಯನ್ನು ತಡೆಗಟ್ಟಿ ದೃಷ್ಟಿಯನ್ನು ಕಾಪಾಡಲು ಕಣ್ಣಿನ ಡ್ರಾಪ್ಸ್, ಲೇಸರ್ ಮತ್ತು ಶಸ್ತçಚಿಕಿತ್ಸೆಯ ಮೂಲಕ ಯಶಸ್ವಿಯಾಗಿ ನಿಯಂತ್ರಿಸಬಹುದು. ಆಗಾಗ್ಗೆ ಕಣ್ಣಿನ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಗ್ಲುಕೋಮಾವನ್ನು ನಿಯಂತ್ರಿಸಲು ಮುಖ್ಯವಾಗಿರುತ್ತದೆ.

ನಿಮ್ಮ ನಿಯಮಿತ ಪರೀಕ್ಷೆಗಳನ್ನು ಸಮಯಕ್ಕೆ ಸರಿಯಾಗಿ ನಿಗದಿಪಡಿಸಿಕೊಳ್ಳಿ. ನೀವು ವೈದ್ಯರ ಕಛೇರಿಯಿಂದ ಹೊರಡುವ ಮೊದಲು ನಿಮ್ಮ ಮುಂದಿನ ಚೆಕ್‌ಅಪ್‌ಅನ್ನ ನಿಗದಿಪಡಿಸಿಕೊಳ್ಳಿ. ಆಗಾಗ್ಗೆ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಲು ನಿಮ್ಮ ಪ್ರೀತಿಪಾತ್ರರನ್ನು ಪ್ರೋತ್ಸಾಹಿಸಿ.

ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಉಚಿತ ಗ್ಲುಕೋಮಾ ಕಣ್ಣಿನ ತಪಾಸಣೆ ಮಾಡಲಾಗುತ್ತದೆ  ಮತ್ತು ಯಶಸ್ವಿನಿ ಕಾರ್ಡ್ ದಾರರು ಕಣ್ಣಿನ ಶಸ್ತ್ರ ಚಿಕ್ತಿತ್ಸೆಯ ಸೌಲಭ್ಯಗಳನ್ನು ಪಡೆಯಬಹುದು ಎಂದು ಡಾ. ಲತಾ.ಸಿ. ಹೇಳಿದ್ದಾರೆ.

ಡಾ. ಅಗರ್ವಾಲ್ ಕಣ್ಣಿನ ಆಸ್ಪತ್ರೆ

ಸಿಎಸ್‌ಐ ಲೇಔಟ್, ಗಾಯತ್ರಿ ಥಿಯೇಟರ್ ಹಿಂಭಾಗ, ತುಮಕೂರು

ದೂ.ವಾ : 9594924506

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments