ತುಮಕೂರು | ಸಂಸದ ಡಿ.ಕೆ.ಸುರೇಶ್ ಗೆ ರಾಜಕಾರಣ ಸಾಕಾಗಿ ಹೋಗಿದ್ಯಾ? ಅವರು ಮುಂದಿನ ಚುನಾವಣೆಗೆ ಸ್ಪರ್ಧಿಸೋದು ಡೌಟಾ..! ಹೌದು, ಎನ್ನುತ್ತಿದೆ ಡಿ. ಸುರೇಶ್ ಅವರ ಈ ಹೇಳಿಕೆಗಳು.
ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಗಿರಿಗೌಡನ ಪಾಳ್ಯದಲ್ಲಿ ಮತದಾರರ ಅಭಿನಂದನಾ ಸಮಾರಂಭದಲ್ಲಿ ಮನದ ಮಾತು ಹೊರಹಾಕಿದ ಡಿ.ಕೆ.ಸುರೇಶ್, ಕೆಲವರು ನನ್ನ ಲೋಕಸಭಾ ಚುನಾವಣೆ ಸರ್ಧೆ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ನಿಂತ್ಕೋತಿನೋ ಇಲ್ಲವೋ ಇನ್ನು ತೀರ್ಮಾನ ಮಾಡಿಲ್ಲ ಎಂದಿದ್ದಾರೆ.
ನಾನು ಇನ್ನೂ ಗೊಂದಲದಲ್ಲಿ ಇದ್ದೀನಿ. ಯಾಕಂದ್ರೆ ನನಗೆ ರಾಜಕಾರಣ ಬೇಕೋ ಬೇಡ್ವೊ ಅನ್ನಿಸಿಬಿಟ್ಟಿದೆ. ಮುಂದಿನ ದಿನದಲ್ಲಿ ನಿಮ್ಮ ಸಲಹೆ ಪಡೆಯುತ್ತೇನೆ. ನನ್ನ ಗುರಿ ಇರೋದು ನಿಮ್ಮಗಳ ಸೇವೆ ಮಾಡೋದು ಕುಣಿಗಲ್ ತಾಲೂಕನ್ನ ಒಂದು ಮಾದರಿ ತಾಲೂಕನ್ನಾಗಿ ಮಾಡಬೇಕೆನ್ನುವಂಥದ್ದು ನನ್ನ ಆಶಯ ಎಂದು ಹೇಳಿದ್ದಾರೆ.