ಬೆಂಗಳೂರು | ದಿನೇ ದಿನೇ ಶ್ವಾನಗಳ ಹಾವಳಿ ಹೆಚ್ಚಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೆ ಅವರು ಕಾನೂನಿನ ಪಾಠ ಹೇಳುತ್ತಾರೆ. ಆದರೆ ಮಕ್ಕಳ ಮೇಲೆ ನಾಯಿಗಳು ದಾಳಿ (Dog Attack) ಮಾಡುವುದು ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಶಾಶ್ವತ ಪರಿಹಾರ ಕೂಡ ಸಿಕ್ಕಿಲ್ಲ.
ಇದಕ್ಕೆ ಮತ್ತೊಂದು ಉದಾಹರಣೆ ಅಂದ್ರೆ ಕೆಆರ್ ಪುರಂ ಸೊನ್ನೆನಹಳ್ಳಿಯಲ್ಲಿ ನಡೆದ ಘಟನೆ. ಹೌದು.. ಇಲ್ಲಿ ಆಟ ಆಡುತ್ತಿದ್ದ ಬಾಲಕನ ಮೇಲೆ ಶ್ವಾನಗಳ ದಾಳಿ ಮಾಡಿವೆ. ಬಾಲಕನ ಮೇಲೆ ಶ್ವಾನಗಳ ಗುಂಪು ಎಗರಿದ್ದು ಸಾಕಷ್ಟು ಆತಂಕವನ್ನು ಹೆಚ್ಚಿಸಿದೆ.
ಬಾಲಕ ಶ್ವಾನಗಳಿಗೆ ಕಲ್ಲಿನಿಂದ ಹೊಡೆದು ಆಟ ಆಡುತ್ತಿದ್ದ ಎನ್ನಲಾಗಿದೆ. ಶ್ವಾನಗಳು ಎಗರಿರೋ ಕಾರಣ, ನೆಲದ ಮೇಲೆ ಬಿದ್ದಿದ್ದಾನೆ. ಕೂಡಲೇ ಕಿರುಚಿಕೊಂಡಿದ್ದು ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದಾರೆ ಬಾರೀ ಅನಾಹುತ ತಪ್ಪಿದಂತೆ ಆಗಿದೆ. ಬಾಲಕನ ಮೇಲೆ ಶ್ವಾನಗಳ ದಾಳಿ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.