Friday, December 13, 2024
Homeಸಿನಿಮಾರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಮಡದಿ ಪ್ರಗತಿ ಕೊಟ್ಟ ಉಡುಗೊರೆ ಏನು ಗೊತ್ತಾ..?

ರಿಷಬ್ ಶೆಟ್ಟಿ ಹುಟ್ಟುಹಬ್ಬಕ್ಕೆ ಮಡದಿ ಪ್ರಗತಿ ಕೊಟ್ಟ ಉಡುಗೊರೆ ಏನು ಗೊತ್ತಾ..?

ಮನರಂಜನೆ | ನಟ, ನಿರ್ಮಾಪಕ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಹುಟ್ಟುಹಬ್ಬವನ್ನು ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿಕೊಂಡಿದ್ದಾರೆ.

ನನ್ನಂತ ಸಣ್ಣ ಹಳ್ಳಿಯಿಂದ ಬಂದ ಮಧ್ಯಮ ಕುಟುಂಬದ ಹುಡುಗ ಸಿನಿಮಾ ಕನಸು ಕಂಡು ನಿಮ್ಮ ಮನದಲ್ಲಿ ಜಾಗ ಮಾಡಿಕೊಳ್ಳಬಹುದೆಂದು ನೀವು ಸಾಬೀತುಪಡಿಸಿದ್ದೀರಾ.  “ಕಾಂತಾರ” ಸಿನಿಮಾಕ್ಕೆ ಕನ್ನಡಿಗರು ತೋರಿಸಿದ ಪ್ರೀತಿಯಿಂದ ಇವತ್ತು ಅದು ಜಗತ್ತಿನ ಸಿನಿಮಾವಾಗಿದೆ, ಅದ್ದರಿಂದ ನಿಮ್ಮನ್ನು ಭೇಟಿಯಾಗಿ  ಕೃತಜ್ಞತೆ ಸಲ್ಲಿಸಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದೆ, ಆ ದಿನ ಇವತ್ತು ನನ್ನ ಹುಟ್ಟುಹಬ್ಬದ ಮೂಲಕ ಒದಗಿ ಬಂದಿದೆ. ಮಳೆ ಬಂದರು ತಾವೆಲ್ಲ ಇಲ್ಲಿಗೆ ಬಂದು ತೋರಿಸುತ್ತಿರುವ  ಪ್ರಿತಿಯ ಋಣವನ್ನು ನಾನು ಸಾಯುವವರೆಗೂ ನನ್ನ ಸಿನಿಮಾ ಮತ್ತು ಕೆಲಸದ ಮೂಲಕ ತೀರುಸುತ್ತಲೆ ಇರುತ್ತೇನೆ ಎಂದು ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಭಾವುಕರಾಗಿ ರಿಷಬ್ ಶೆಟ್ಟಿ ನುಡಿದರು.

ಈ ಕಾರ್ಯಕ್ರಮವನ್ನು ಅಯೋಜಿಸಿದ ಅಭಿಮಾನಿಗಳಿಗೆ, ಸ್ನೇಹಿತರಿಗೆ, ತಮ್ಮ ಮಡದಿ ಪ್ರಗತಿ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿಗೆ ಅವರಿಗೆ ರಿಷಬ್ ಶೆಟ್ಟಿ ಧನ್ಯವಾದ ತಿಳಿಸಿದರು.

ರಿಷಬ್ ಶೆಟ್ಟಿ ಸ್ನೇಹಿತ ಪ್ರಮೋದ್ ಶೆಟ್ಟಿ ಮಾತನಾಡಿ,  ಹಲವಾರು ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅದರ ಜವಾಬ್ದಾರಿಯನ್ನು ರಿಷಬ್ ವಹಿಸುತ್ತಿದ್ದರು, ಆದರೆ ಯಾರಿಗೂ ಬಹಿರಂಗ ಪಡಿಸಿರಲಿಲ್ಲ ಎಂದು ರಿಷಬ್ ಶೆಟ್ಟಿ ಅವರ ಸಮಾಜಮುಖಿ ಕಾರ್ಯಗಳ ಬಗ್ಗೆ ವಿವರಣೆ ನೀಡಿದರು. 

ಯಾವುದೇ ಉಡಗೊರೆಯನ್ನ ಇಷ್ಟ ಪಡದ ತಮ್ಮ ಗಂಡನಿಗೆ, ಹುಟ್ಟುಹಬ್ಬದ ಉಡುಗೊರೆಯಾಗಿ  ‘ರಿಷಬ್ ಶೆಟ್ಟಿ ಫೌಂಡೇಶನ್’ ಎಂಬ ಶಿಕ್ಷಣ ಕ್ಷೇತ್ರಕ್ಕೆ ಸಹಾಯ ನೀಡುವ ಸಂಸ್ಥೆಯನ್ನು ರಿಷಬ್ ಅವರ ಹುಟ್ಟುಹಬ್ಬದ ದಿನದಿಂದಲೇ ಆರಂಭಿಸುವುದಾಗಿ ಪ್ರಗತಿ ರಿಷಬ್  ಶೆಟ್ಟಿ ತಿಳಿಸಿದರು. 

ಕರ್ನಾಟಕವಲ್ಲದೆ ಬೇರೆ ರಾಜ್ಯಗಳಿಂದಲೂ ರಿಷಬ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ನೋಡಲು ಮಳೆಯನ್ನ ಲೆಕ್ಕಿಸದೆ ಆಗಮಿಸಿದ್ದರು. ಎಲ್ಲಾ ನಟರ ಅಭಿಮಾನಿಗಳು  ರಿಷಬ್ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಹುಲಿ ವೇಷ ಮತ್ತು ಚಂಡೆ ಕಾರ್ಯಕ್ರಮ ಸಮಾರಂಭದ ಮೆರಗನ್ನು ಮತ್ತಷ್ಟು ಹೆಚ್ಚಿಸಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments