Friday, December 13, 2024
Homeಜಿಲ್ಲೆಬೆಂಗಳೂರು ನಗರDK Sivakumar | ದೇವಾಲಯ ಕೆಡವುದು ರಸ್ತೆ ಅಗಲೀಕರಣ ಯೋಜನೆಯ ಭಾಗ ಅಲ್ಲ - ಡಿಸಿಎಂ...

DK Sivakumar | ದೇವಾಲಯ ಕೆಡವುದು ರಸ್ತೆ ಅಗಲೀಕರಣ ಯೋಜನೆಯ ಭಾಗ ಅಲ್ಲ – ಡಿಸಿಎಂ ಡಿಕೆ ಶಿವಕುಮಾರ್ 

ಬೆಂಗಳೂರು |ದೇವಾಲಯವನ್ನು (Temple) ಕೆಡವುದು ರಸ್ತೆ ಅಗಲೀಕರಣ (Road widening) ಯೋಜನೆಯ ಭಾಗವಾಗುವುದಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Sivakumar)  ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಪರ ಪ್ರಚಾರದಲ್ಲಿ ಪಾಲ್ಗೊಂಡ ವೇಳೆ ಡಿಕೆ ಶಿವಕುಮಾರ್​ಗೆ ದೇಗುಲ ಸ್ಥಳಾಂತರದ ಪ್ರಶ್ನೆ ಬಂದಾಗ ಅವರು  ರಸ್ತೆ ಅಗಲೀಕರಣಕ್ಕಾಗಿ ದೇಗುಲವನ್ನು ಸ್ಥಳಾಂತರ ಮಾಡುವ ಮೂಲಕ ಗಣೇಶನ ಶಾಪಕ್ಕೆ ಗುರಿಯಾಗಲಾರೆ ಎಂದು ಹೇಳಿದ್ದಾರೆ.

Narendra Modi | ಕರ್ನಾಟಕದಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಧಾನಿ ಮೋದಿ ಪ್ರಚಾರ..! – karnataka360.in

ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ನಿವಾಸಿಗಳು ಅಪಾರ್ಟ್​​ಮೆಂಟ್ ಮುಂಭಾಗದಲ್ಲಿ ರಸ್ತೆ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಳ್ಳುವಂತೆ ಮಾಡಿದ ಬೇಡಿಕೆಗೆ ಪ್ರತಿಕ್ರಿಯಿಸಿದ ಅವರು, ರಸ್ತೆ ಅಗಲೀಕರಣದ ಬದಲು ಸುರಂಗ ರಸ್ತೆ ನಿರ್ಮಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ನಿವಾಸಿಗಳಿಗೆ ಉಪಮುಖ್ಯಮಂತ್ರಿ ಭರವಸೆ ನೀಡಿದ್ದಾರೆ.

ಇದು ತುಂಬಾ ಜನನಿಬಿಡ ಜಂಕ್ಷನ್ ಮತ್ತು ರಿಂಗ್ ರೋಡ್ ಅನ್ನು ಸಂಪರ್ಕಿಸುತ್ತದೆ ಎಂಬುದು ನನಗೆ ತಿಳಿದಿದೆ. ನಾನು ಪರ್ಯಾಯ ಮಾರ್ಗಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸರ್ಕಾರ ತಪ್ಪೆಸಗಿರುವುದು ಈಗ ಜನಸಾಮಾನ್ಯರಿಗೂ ಅರ್ಥವಾಗುತ್ತಿದೆ. ಅದರೊಂದಿಗೆ, ಡಿಕೆ ಸುರೇಶ್ ಅವರ ನಮ್ಮ ತೆರಿಗೆ ನಮ್ಮ ಹಕ್ಕು ಹೋರಾಟವನ್ನು ಜನ ಬೆಂಬಲಿಸುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಬರ ಪರಿಹಾರಕ್ಕೂ ಚುನಾವಣಾ ನೀತಿ ಸಂಹಿತೆಗೂ ಸಂಬಂಧವಿಲ್ಲ. ನೀತಿ ಸಂಹಿತೆ ಜಾರಿಯಾಗುವ ಸುಮಾರು ನಾಲ್ಕು ತಿಂಗಳಿಗೂ ಮೊದಲೇ ನಾವು ಮನವಿ ಮಾಡಿದ್ದೆವು. ಇಷ್ಟು ದಿನ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿ ಇದೀಗ ವಾಸ್ತವ ವಿಚಾರವನ್ನು ನಿರ್ಮಲಾ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕಕ್ಕೆ ಬರ ಪರಿಹಾರ ನೀಡುವ ವಿಷಯದಲ್ಲಿ ಅನ್ಯಾಯ ಎಸಗಿರುವುದನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊನೆಗೂ ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು ಎಂದು ಡಿಕೆ ಶಿವಕುಮಾರ್ ಇದೇ ವೇಳೆ ವ್ಯಂಗ್ಯವಾಡಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments