ತುಮಕೂರು | ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಮತ್ತು ಥರ್ಮೋವ್ಯಾಕ್ ಏರೋಸ್ಪೇಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಉದ್ಯೋಗ ನೀಡುವ ಸಂಬಂಧ ಸೆಪ್ಟೆಂಬರ್ 15 ರವರೆಗೆ ಬೆಳಿಗ್ಗೆ 10.30 ರಿಂದ 1.00 ಗಂಟೆಯವರೆಗೆ ನೇರ ಸಂದರ್ಶನ ನಡೆಯಲಿದೆ ಎಂದು ಜಿಲ್ಲಾ ಉದ್ಯೋಗಾಧಿಕಾರಿ ತಿಳಿಸಿದ್ದಾರೆ.
Pavagada Indira Canteen | ಇಂದಿರಾ ಕ್ಯಾಂಟೀನ್ ಮುಂದೆ ಗಲಾಟೆ..! – karnataka360.in
ಐ.ಟಿ.ಐ.(ಫಿಟ್ಟರ್), ಡಿಪ್ಲೊಮಾ(ಮೆಕಾನಿಕಲ್), ಬಿಇ (ಮೆಕಾನಿಕಲ್) ಪಾಸಾದ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಹಾಗೂ ವಿ.ಎಂ.ಸಿ. ಮೆಷಿನ್ (VMC Machine)ನಲ್ಲಿ ಅನುಭವ ಹೊಂದಿರುವ ಡಿಪ್ಲೋಮಾ ಮತ್ತು ಐಟಿಐ ಫ್ರೆಶರ್ಸ್, ಮಾರ್ಕೆಟಿಂಗ್‌ನಲ್ಲಿ ಎಂ.ಬಿ.ಎ ಮಾಡಿರುವ ಯಾವುದೇ ಅಭ್ಯರ್ಥಿಯು ಸೆಪ್ಟೆಂಬರ್ 15 ರವರೆಗೆ ಬೆಳಿಗ್ಗೆ 10.30 ರಿಂದ 1.00 ಗಂಟೆಗಳವರೆಗೆ ಪ್ಲಾಟ್ ನಂ.548 ಸೋಂಪುರ, 2 ನೇ ಸ್ಟೇಜ್, ಬೀರಗೊಂಡನಹಳ್ಳಿ, ತ್ಯಾಮಗೊಂಡ್ಲು, ನೆಲಮಂಗಲ, ಬೆಂಗಳೂರು – 562111 ಇಲ್ಲಿ ತಮ್ಮ ಬಯೋಡೇಟಾದೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0816 -2278488/9606955152ನ್ನು ಸಂಪರ್ಕಿಸಬಹುದಾಗಿದೆ ಎಂದು ಉದ್ಯೋಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.