ಬೀದರ್ | ಕಾಂಗ್ರೆಸ್ (Congress) ಶಾಸಕರಿಗೆ 50 ಕೋಟಿ ಆಫರ್ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao) ಪ್ರತಿಕ್ರಿಯೆ ನೀಡಿದ್ದಾರೆ. ಬೀದರ್ ನಲ್ಲಿ ಮಾತನಾಡಿದ ಸಚಿವರು, ಬಿಜೆಪಿಯರಿಗೆ ಅಧಿಕಾರ ಇಲ್ಲದೆ ಇರಲು ಸಾದ್ಯವಾಗುತ್ತಿಲ್ಲಾ. ಈ ರೀತಿ ಹೀನಾಯವಾಗಿ ಸೋತ್ತಿದ್ದು ನಂಬೋಕೆ ಆಗುತ್ತಿಲ್ಲಾ. ಹೀಗಾಗಿ ಈ ರೀತಿ ಆಫರ್ ಕೊಟ್ಟಿರಬಹುದು. ಈ ಹಿಂದೆ ಬಿಜೆಪಿ ಆಪರೇಷನ್ ಕಮಲ (BJP Operation Kamal) ಮಾಡಿದಾಗ ಎಲ್ಲಿಂದ ಬಂತು ಅಷ್ಟೋಂದು ದುಡ್ಡು. ದುಡ್ಡೆಲ್ಲಾ ಅವರ ಕೈಯಲ್ಲಿ ಇದೆ. ಆದ್ರೆ ರೇಡ್ ಗಳು ಮಾತ್ರ ನಮ್ಮ ಮೇಲೆ ಮಾಡಿಸ್ತಾರೆ ಎಂದರು.
ಇನ್ನೂ ಕಾಂಗ್ರೆಸ್ ಮನೆಯೊಂದು ಮೂರು ಭಾಗಿಲು ಕಟೀಲು ಹೇಳಿಕೆ ವಿಚಾರವಾಗಿ ಮಾತನಾಡಿ, ನಮ್ಮದು ತೆರೆದ ಮನೆಯಾಗಿದೆ ಎಂದು ಹೇಳುವ ಮೂಲಕ ಕಟೀಲ್ಗೆ ಗುಂಡೂರಾವ್ ತೀರುಗೇಟು ನೀಡಿದ್ದಾರೆ. ಮೂರಲ್ಲಾ ಹತ್ತು ಬಾಗಿಲು ಇರತ್ತೆ. ಯಾಕೆಂದ್ರೆ ಎಲ್ಲರು ಬರಬೇಕು, ಕಾಂಗ್ರೆಸ್ ಒಬ್ಬರ ಕೈಯಲ್ಲಿ ಇರುವ ಪಕ್ಷ ಅಲ್ಲಾ. ಸಾಮೂಹಿಕವಾಗಿ ನಾವು ಚುನಾವಣೆ ಮಾಡಿದ್ದೆವು. ಆಗ ಕಟೀಲು ಕಾಂಗ್ರೆಸ್ನಲ್ಲಿ ಅಸಮಾಧಾನ ಇದೆ, ಇವರಿಂದ ಆಗಲ್ಲಾ ಎಂದು ಹೇಳಿದ್ರು. ಬಿಜೆಪಿಯಲ್ಲಿ ನಾಯಕರಿಲ್ಲಾ ನಾಯಕತ್ವವೂ ಇಲ್ಲಾ. ಕಟೀಲ್ ಯಾರು, ಅವರ ಪಕ್ಷದವರೇ ಅವರನ್ನು ನಾಯಕರು ಅಂಥಾ ಒಪ್ಪಿಕೊಳ್ಳಲ್ಲಾ. ನಮ್ಮಲ್ಲಿ ನಾಯಕತ್ವದ ದಂಡೇ ಇದೆ, ಇದು ಪಕ್ಷಕ್ಕೆ ಆಸ್ತಿ.
ಬಿಜೆಪಿಯಲ್ಲಿದ್ದ ಇಬ್ಬರು ನಾಯಕರು ನಿವೃತ್ತಿಯಾಗದ್ರು. ಈಗಾ ಬಿಜೆಪಿಯಲ್ಲಿ ನಾಯಕರೇ ಇಲ್ಲಾ. ಎಂದು ಬೀದರ್ನಲ್ಲಿ ಕಟೀಲ್ ವಿರುದ್ದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.